Paraquat Ban: ಪರಾಕ್ವಾಟ್‌ ಕೀಟನಾಶಕ ಬಳಕೆ; ದಿಢೀರ್ ನಿಷೇಧಿಸಿದ ತೆಲಂಗಾಣ ಸರ್ಕಾರ, ಕಾರಣವೇನು

Paraquat Ban: ಮಧ್ಯಪ್ರಾಚ್ಯದಲ್ಲಿ ಯುದ್ಧ ಇನ್ನೂ ಮುಂದುವರಿದಿದೆ. ಮಧ್ಯಪ್ರಾಚ್ಯದಲ್ಲಿ ಇರಾನ್ Vs ಅಮೆರಿಕ, ಇಸ್ರೇಲ್ ನಡುವಿನ ಯುದ್ಧವು ಮುಂದುವರಿದಿದೆ. ಯುದ್ಧವು ಮುಂದುವರಿಯುತ್ತಿರುವುದರಿಂದ ದೇಶದಲ್ಲಿ ಕೃಷಿಗೆ ಅವಶ್ಯವಿರುವ ರಾಸಾಯಿನಿಕ ಗೊಬ್ಬರ ಕೊರತೆ ಎದುರಾಗುವ ಆತಂಕವಿದೆ. ಅಲ್ಲದೆ ಈ ಬಾರಿ ಕರ್ನಾಟಕವು ಸೇರಿದಂತೆ ದೇಶದಾದ್ಯಂತ ಮುಂಗಾರು ಮಳೆ ಕೊರತೆ ಆಗುವ ಆತಂಕವೂ ಇದೆ.

ಈ ರೀತಿ ಇರುವಾಗಲೇ ನೆರೆಯ ತೆಲಂಗಾಣ ಸರ್ಕಾರವು ಮಹತ್ವದ ಕ್ರಮವೊಂದನ್ನು ತೆಗೆದುಕೊಂಡಿದೆ. ತೆಲಂಗಾಣ ಸರ್ಕಾರವು ಪರಾಕ್ವಾಟ್ (Paraquat) ಎಂಬ ಕೀಟನಾಶಕದ ಮಾರಾಟ, ಸಂಗ್ರಹ, ವಿತರಣೆ, ತಯಾರಿಕೆ ಮತ್ತು ಬಳಕೆಗೆ ತಾತ್ಕಾಲಿಕವಾಗಿ 60 ದಿನಗಳ ನಿಷೇಧ ಹೇರಿದೆ. ಅಲ್ಲದೆ ಇದನ್ನು ದೇಶದಾದ್ಯಂತ ಜಾರಿ ಮಾಡಬೇಕು ಎಂದು ತೆಲಂಗಾಣ ಸರ್ಕಾರವು ಆಗ್ರಹಿಸಿದೆ.

Paraquat Ban

ಕೃಷಿ ಕ್ಷೇತ್ರದಲ್ಲಿ ಬಳಕೆಯಲ್ಲಿರುವ ಪರಾಕ್ವಾಟ್ (Paraquat) ಎಂಬ ಕೀಟನಾಶಕದ ಬಳಕೆಗೆ ದಿಢೀರ್ ಎಂದು ತೆಲಂಗಾಣ ಸರ್ಕಾರವು ನಿರ್ಬಂಧ ವಿಧಿಸಿದೆ. ಕೃಷಿ ಮತ್ತು ಸಹಕಾರ ಇಲಾಖೆ ನೀಡಿದ ಆದೇಶದ ಪ್ರಕಾರ, ಈ ನಿರ್ಧಾರವನ್ನು ತೆಲಂಗಾಣ ರಾಜ್ಯ ವಿಧಾನಸಭೆಯಲ್ಲಿ ಕೇಂದ್ರ ಸರ್ಕಾರವು ಪರಾಕ್ವಾಟ್ ಮೇಲೆ ಸಂಪೂರ್ಣ ನಿಷೇಧ ಹೇರಬೇಕು ಎಂದು ಒತ್ತಾಯಿಸುವ ನಿರ್ಣಯ ಅಂಗೀಕರಿಸಿದ ನಂತರ ತೆಗೆದುಕೊಳ್ಳಲಾಗಿದೆ.

ಪರಾಕ್ವಾಟ್ ಎಂಬ ರಾಸಾಯನಿಕ ಕೀಟನಾಶಕವು ಮಾನವ ಆರೋಗ್ಯ ಮತ್ತು ಪ್ರಾಣಿಗಳಿಗೆ ಹಾನಿಕಾರಕ ಎಂಬ ವರದಿಗಳು ಮತ್ತು ಅಭಿಪ್ರಾಯಗಳು ಬಂದ ಹಿನ್ನೆಲೆಯಲ್ಲಿ, ಸಾರ್ವಜನಿಕ ಆರೋಗ್ಯ ಮತ್ತು ರೈತರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ ಎಂದು ತೆಲಂಗಾಣ ಸರ್ಕಾರವು ಹೇಳಿದೆ.

ಪರಾಕ್ವಾಟ್ (Paraquat) ಎಂಬ ಕೀಟನಾಶಕದ ಬಳಕೆಯ ನಿಷೇಧಕ್ಕೆ ಸಂಬಂಧಿಸಿದಂತೆ ತೆಲಂಗಾಣ ಸರ್ಕಾರವು Insecticides Act 1968 ರ ಸೆಕ್ಷನ್ 27 ಅಡಿಯಲ್ಲಿ ತನ್ನ ಅಧಿಕಾರವನ್ನು ಬಳಸಿದೆ. ಒಟ್ಟಾರೆ ಈ ಕೀಟನಾಶಕದ ಅಪಾಯಗಳ ಬಗ್ಗೆ ಹೆಚ್ಚುತ್ತಿರುವ ಚಿಂತನೆ ಹಿನ್ನೆಲೆ, ತಾತ್ಕಾಲಿಕವಾಗಿ ಈ ನಿರ್ಬಂಧ ಹೇರಲಾಗಿದೆ. ಅಲ್ಲದೆ ದೇಶದಾದ್ಯಂತ ನಿರ್ಬಂಧ ವಿಧಿಸಬೇಕು ಹಾಗೂ ಕೇಂದ್ರ ಸರ್ಕಾರವು ಮಧ್ಯಪ್ರವೇಶ ಮಾಡಬೇಕು ಎಂದು ತೆಲಂಗಾಣ ಸರ್ಕಾರವು ಆಗ್ರಹಿಸಿದೆ.

ಪರಾಕ್ವಾಟ್ (Paraquat) ಎಂದರೇನು?

ಪರಾಕ್ವಾಟ್ ಒಂದು ಶಕ್ತಿಯುತ ಕಳೆನಾಶಕ (herbicide). ಕೃಷಿಯಲ್ಲಿ ಬೆಳೆಗಳ ನಡುವೆ ಬೆಳೆಯುವ ಅನಗತ್ಯ ಕಳೆಗಳನ್ನು ಬೇಗನೆ ಕೊಲ್ಲಲು ಬಳಸಲಾಗುತ್ತದೆ. ಇದು ಸಸ್ಯಗಳ ಹಸಿರು ಭಾಗವನ್ನು ತಕ್ಷಣವೇ ಒಣಗಿಸುವ ಗುಣ ಹೊಂದಿದೆ. ಇದು ದೇಹಕ್ಕೆ ಸೇರಿದರೆ ಶ್ವಾಸಕೋಶವನ್ನು ಗಂಭೀರವಾಗಿ ಹಾನಿಗೊಳಿಸುತ್ತದೆ. ಉಸಿರಾಟ ಕಷ್ಟವಾಗಬಹುದು ಎಂದು ಹೇಳಲಾಗುತ್ತದೆ.

ತೆಲಂಗಾಣ ಸರ್ಕಾರವು ಪರಾಕ್ವಾಟ್ ನಿಷೇಧಿಸಿದಕ್ಕೆ ಕಾರಣವೇನು

ಕೃಷಿ ಕ್ಷೇತ್ರದಲ್ಲಿ ಬಳಕೆಯಲ್ಲಿರುವ ಪರಾಕ್ವಾಟ್ (Paraquat) ಎಂಬ ಕೀಟನಾಶಕದ ಬಳಕೆಗೆ ದಿಢೀರ್ ಎಂದು ತೆಲಂಗಾಣ ಸರ್ಕಾರವು ನಿರ್ಬಂಧ ಹೇರಿದೆ. ಪರಾಕ್ವಾಟ್ ಎಂಬ ರಾಸಾಯನಿಕ ಕೀಟನಾಶಕವು ಮಾನವ ಆರೋಗ್ಯ ಮತ್ತು ಪ್ರಾಣಿಗಳಿಗೆ ಹಾನಿಕಾರಕ ಎಂಬ ವರದಿಗಳು ಮತ್ತು ಅಭಿಪ್ರಾಯಗಳು ಬಂದ ಹಿನ್ನೆಲೆಯಲ್ಲಿ, ಸಾರ್ವಜನಿಕ ಆರೋಗ್ಯ ಮತ್ತು ರೈತರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ತೆಗೆದುಕೊಂಡಿರುವುದಾಗಿ ತೆಲಂಗಾಣ ಸರ್ಕಾರವು ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+