ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಡುಪುಟ್ಟಿ ಅಲ್ಕಾ

By Staff
|
Google Oneindia Kannada News

Alka Ajit, Millenniums bext baby singerಬಾಲ್ಯವೆಂಬ ಮೊಳಕೆ ಸ್ಥಿತಿಯಲ್ಲಿ ಹುಟ್ಟುವ ಸಂಗೀತದ ಖದರು ಜೋರಾಗಿರುತ್ತದೆ ಎಂಬುದಕ್ಕೆ ಹಿಡಿಗಟ್ಟಲೆ ನಿದರ್ಶನಗಳು ಸಿಕ್ಕುತ್ತವೆ. ಬಾಲಮುರಳಿ ಕೃಷ್ಣ ತಮ್ಮ ಏಳನೇ ವಯಸ್ಸಿನಲ್ಲೇ ಆಕಾಶವಾಣಿಯಲ್ಲಿ ಹಾಡುತ್ತಿದ್ದರು. ತನ್ನ ಓರಗೆಯ ಮಕ್ಕಳು ಕಣ್ಣಾ ಮುಚ್ಚೆ ಕಾಡೆ ಗೂಡೆ ಆಡುವಾಗ ಮ್ಯಾಂಡೋಲಿನ್‌ ವಿ.ಶ್ರೀನಿವಾಸ್‌ ತಮ್ಮ ಮನೆಯಲ್ಲಿ ಕೂತು ಮ್ಯಾಂಡೋಲಿನ್‌ ಜತೆಯೇ ಆಟವಾಡುತ್ತಿದ್ದರು. ಇಂಥದೇ ಅರಳು ಪ್ರತಿಭೆ ದೇಶದ ಉದ್ದಗಲ ಸುತ್ತಿ ಈಗ ಬೆಂಗಳೂರಿಗೆ ಬಂದು ಮೈಕು ಹಿಡಿದು ನಿಂತಿದೆ. ಈ ಅರಳು ಮಲ್ಲಿಗೆಯ ಹೆಸರು ಅಲ್ಕಾ ಅಜಿತ್‌.

ಈ ಮಲೆಯಾಳಿ ಹುಡುಗಿಯ ವಯಸ್ಸು ಆರು. ಹಾಡಿರುವ ಹಾಡುಗಳ ಸಂಖ್ಯೆ ಸಾವಿರಾರು. ಎರಡೂವರೆ ವರ್ಷ ವಯಸ್ಸಾಗಿದ್ದಾಗಲೇ ಕೇರಳದ ದೇವಳಗಳಲ್ಲಿ ಅಲ್ಕಾ ಹಾಡುಗಳು ಅನುರಣಿಸಿದ್ದವು. ಕಾರ್ಗಿಲ್‌ ಯುದ್ಧದಲ್ಲಿ ಹುತಾತ್ಮರಾದವರಿಗೆ ಗೌರವ ಸೂಚಿಸಲು ತಲಸ್ಸೇರಿಯ ಇಂಡಿಯನ್‌ ಮೆಡಿಕಲ್‌ ಅಸೋಸಿಯೇಷನ್‌ ಹಾಲ್‌ನಲ್ಲಿ ನಡೆದ ಕಛೇರಿಯಲ್ಲಿ ಅಲ್ಕಾ ಸಾವಿರಾರು ಜನರ ಮುಂದೆ ಕೂತು ನಿರ್ಭಿಡೆಯಿಂದ ಹಾಡಿ, ಶಹಬ್ಬಾಸ್‌ಗಿರಿ ಗಿಟ್ಟಿಸಿದಳು. ಆಗ ಈ ಪುಟ್ಟಿಯ ವಯಸ್ಸು ಕೇವಲ ನಾಲ್ಕು.

ಕನ್ನಡ, ತಮಿಳು, ತೆಲುಗು, ಮಲೆಯಾಳಂ, ಬೆಂಗಾಲಿ, ಉರ್ದು, ಹಿಂದಿ ಹಾಗೂ ಇಂಗ್ಲಿಷ್‌- ಈ ಎಲ್ಲಾ ಭಾಷೆಗಳಲ್ಲಿ ಜಲಲ ಧಾರೆಯಂತೆ ಹಾಡುವ ಅಲ್ಕಾ 340 ಕಛೇರಿ ಕೊಟ್ಟಿರುವ ಅನುಭವಿ ಬಾಲಕಿ. ಈಕೆಯ ಉಚ್ಚಾರಣೆಯಲ್ಲಿ ತಪ್ಪು ಕಂಡು ಹಿಡಿಯಲು ತಿಪ್ಪರಲಾಗ ಹಾಕಬೇಕು ಎಂದು ಸಂಗೀತ ಪಂಡಿತರು ಸರ್ಟಿಫಿಕೇಟ್‌ ಕೊಟ್ಟಿರುವುದು ಅರಳು ಮಲ್ಲಿಗೆಯ ಕಂಪಿನ ಹರವಿಗೆ ಸಾಕ್ಷಿ.

ಯುನೆಸ್ಕೋದಿಂದ ಸಹಸ್ರಮಾನದ ಶ್ರೇಷ್ಠ ಬಾಲ ಗಾಯಕಿ ಎಂದು ಬೆನ್ನು ತಟ್ಟಿಸಿಕೊಂಡಿರುವ ಅಲ್ಕಾ ಅಜಿತ್‌ ಬೆಂಗಳೂರಿನ ಸೇಂಟ್‌ ಅಲೋಷಿಯಸ್‌ ಕಾಲೇಜು ಮೈದಾನದಲ್ಲಿ ಶನಿವಾರ (ಏ.12) ಸಂಜೆ ಹಾಡಲಿದ್ದಾಳೆ. ಅರಳು ಮಲ್ಲಿಗೆಯ ಅಗಾಧ ಪ್ರತಿಭೆಯ ಕಣ್ಣು- ಕಿವಿ ತುಂಬಿಕೊಳ್ಳುವವರಲ್ಲಿ ನೀವೂ ಒಬ್ಬರಾಗಿ.

(ಇನ್ಫೋ ವಾರ್ತೆ)


ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X