ಶಿರಸಿಯಲ್ಲಿ ಏ.27ರಂದು ಚಾಂದನೀ ಕೇದಾರ ಪೂರ್ಣಚಂದ್ರ ಸಂಗೀತ ರಾತ್ರಿ
*ಇನ್ಫೋ ಇನ್‌ಸೈಟ್
ಶಿರಸಿ : ಅಂದು ಭಾರತೀಯ ಆಸನ ಪದ್ಧತಿ. ಅಲ್ಲಿ ನಾವು- ನೀವು, ಜತೆಗಿರುವನು ಚಂದಿರ ! ಹೀಗೊಂದು ಸಂಗೀತದ ಕರೆಯೋಲೆ....
ಪುಣೆಯ ಪೂರ್ಣಿಮಾ ಕುಲಕರ್ಣಿ, ಪಂಡಿತ್ ಪರಮೇಶ್ವರ ಹೆಗಡೆ, ಪಂಡಿತ್ ಗಣಪತಿ ಭಟ್ ಹಾಸಣಗಿ, ಮುಂಬಯಿಯ ವಿದುಷಿ ಪದ್ಮಾ ತಲವಾಲ್ಕರ್- ಇವರೆಲ್ಲರ ಸಂಗೀತ ಒಂದೇ ವೇದಿಕೆಯಲ್ಲಿ ; ಏಪ್ರಿಲ್ 27ರ ಶನಿವಾರ ರಾತ್ರಿ 9 ಗಂಟೆಗೆ, ಇಲ್ಲಿನ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ.
ಪಂಡಿತ್ ಗಣಪತಿ ಭಟ್ ಮ್ಯೂಸಿಕ್ ಅಕಾಡೆಮಿ ಗುರುಕುಲ ಹಾಗೂ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿ ಸಹಾಯಾರ್ಥ ಈ ಸಂಗೀತ ರಾತ್ರಿ. ತಿಂಗಳ ಬೆಳಕಿನ ಛತ್ರಿಯಡಿ ‘ಚಾಂದನೀ ಕೇದಾರ ಪೂರ್ಣಚಂದ್ರ ಸಂಗೀತ ರಾತ್ರಿ’. ಶಿರಸಿಯ ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಮಾರಿಕಾಂಬಾ ಜೆಸೀಸ್, ದೈವಜ್ಞ ಯುವಕ ಸಂಘ ಹಾಗೂ ಪೌಲ್ಟ್ರಿ ಫಾರ್ಮರ್ಸ್ ಅಸೋಸಿಯೇಷನ್ ಈ ಸಂಗೀತ ರಾತ್ರಿಯ ಆಯೋಜಕರು.
ಮುಂಬಯಿಯ ನೀಲಾದ್ರಿಕುಮಾರ್ ಅವರ ಸಿತಾರ ವಾದನ ಸಂಗೀತಾನುಭಾವಿಗಳಿಗೆ ಬೋನಸ್ಸು. ಗೋಪಾಲಕೃಷ್ಣ ಹೆಗಡೆ, ಉದಯರಾಜ ಕರ್ಪೂರ್ ಹಾಗೂ ಸತ್ಯಜಿತ್ ತಲವಾಲ್ಕರ್ ಸಂಗೀತಕ್ಕೆ ತಬಲಾ ಸಾಥಿಗಳು. ರವೀಂದ್ರ ಕಾಟೋಟಿ ಮತ್ತು ಪಂಚಾಕ್ಷರಿ ಹಿರೇಮಠ ಅವರ ಸಂವಾದಿನೀ ಇರುತ್ತದೆ. ಅಂದಹಾಗೆ, ಈ ಕಾರ್ಯಕ್ರಮಕ್ಕೆ ನೀವು ತೆರಬೇಕಾಗಿರುವುದು ಟಿಕೇಟು ದರವಲ್ಲ, ಅದು ಅತಿಥಿ ಕಾಣಿಕೆ- ನೂರೇ ರುಪಾಯಿ! ದಿಗ್ಗಜಾತಿ ದಿಗ್ಗಜರ ಸಂಗೀತ ಕೇಳುವುದರ ಮೂಲಕ ಸಂಗೀತಕ್ಕೆ ಸಂಬಂಧಿಸಿದ ಒಂದು ಒಳ್ಳೆ ಕೆಲಸದಲ್ಲಿ ನಿಮ್ಮ ಹವಿಸ್ಸನ್ನೂ ಸಲ್ಲಿಸುವ ಅಪರೂಪದ ಅವಕಾಶ ಇದಲ್ಲವೇ?
ಮುಖಪುಟ / ಸಾಹಿತ್ಯ ಸೊಗಡು-
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Asha Bosle Net Worth: ದೇಶ-ವಿದೇಶಗಳಲ್ಲಿ ರೆಸ್ಟೊರೆಂಟ್ಸ್, ನೂರಾರು ಕೋಟಿ ಒಡತಿ ಆಶಾ ಭೋಸ್ಲೆ ಒಟ್ಟು ಆಸ್ತಿ ವಿವರ ಹೀಗಿದೆ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ












Click it and Unblock the Notifications