ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಗೀತ ಕಲಿಯುವ ಚಿಣ್ಣರಿಗೆ ಬೆಂಗಳೂರಲ್ಲೊಂದು ಸಮ್ಮರ್‌ ಕ್ಯಾಂಪು

By Staff
|
Google Oneindia Kannada News

*ಇನ್ಫೋ ಇನ್‌ಸೈಟ್‌

Vidwan R.K.Padmanabha organizes Musical Summer Campಕರ್ನಾಟಕ ಸಂಗೀತ ಕಲಿಯುತ್ತಿರುವ ಚಿಣ್ಣರಿಗೆ ಪುಟ್ಟದೊಂದು ಬೇಸಗೆ ಸಂಗೀತ ಶಿಬಿರ. ದೊಡ್ಡ ದೊಡ್ಡ ವಿದ್ವಾಂಸರ ಜೊತೆ ಬೆರೆಯುವ ಅಪರೂಪದ ಅವಕಾಶ. ಇದರ ರೂವಾರಿ ವಿದ್ವಾನ್‌ ಆರ್‌.ಕೆ.ಪದ್ಮನಾಭ.

ಮೇ 9ರಿಂದ ಮೊದಲ ಶಿಬಿರ ಶುರು. ಐದು ದಿನಗಳ ಅವಧಿಯ ಇಂಥಾ ಶಿಬಿರಗಳು ಇನ್ನು ಮುಂದೆ ಪ್ರತಿ ಬೇಸಗೆಯಲ್ಲೂ ನಡೆಯುತ್ತವೆ. ಐದು ವರ್ಷಗಳ ಕಾಲ ಪ್ರತಿ ಶಿಬಿರಕ್ಕೂ ವಿದ್ಯಾರ್ಥಿಗಳು ಹಾಜರಾಗಲೇಬೇಕು. ವಿವಿಧ ಸಂಗೀತ ವಿದ್ವಾಂಸರ ಜೊತೆ ಯುವ ವಿದ್ಯಾರ್ಥಿಗಳು ಬೆರೆತು, ತಮ್ಮ ಪ್ರತಿಭೆಯನ್ನು ಸಾಣೆಗೊಡ್ಡಿಕೊಂಡು, ಸಂಗೀತವನ್ನು ಇನ್ನೂ ಗಂಭೀರವಾಗಿ ಪರಿಗಣಿಸಲಿ ಎಂಬುದು ಆರ್‌.ಕೆ.ಪದ್ಮನಾಭ ಅವರ ಉಮೇದಿ.

ಶಿಬಿರವೊಂದಕ್ಕೆ 30 ವಿದ್ಯಾರ್ಥಿಗಳನ್ನು ಆರಿಸಲಾಗುವುದು. ಐದು ದಿನಗಳ ಅವಧಿಯಲ್ಲಿ ಅವರ ಪ್ರತಿಭೆಯ ಗುಣಮಟ್ಟವನ್ನು ಅಳೆಯಲಾಗುವುದು. ಐದು ವರ್ಷಗಳ ಕಾಲ ಪ್ರತಿ ಬೇಸಗೆಯಲ್ಲೂ ಶಿಬಿರಗಳು ಮುಂದುವರಿಯಲಿದ್ದು, ಅಷ್ಟೂ ವರ್ಷ ವಿದ್ಯಾರ್ಥಿಗಳು ತಾವು ಕಲಿತಿರುವುದನ್ನು ಒರೆಗೆ ಹಚ್ಚಿಕೊಳ್ಳಲು ಅಪರೂಪದ ಅವಕಾಶವಾಗಲಿದೆ.

ಈ ಬೇಸಗೆ ಸಂಗೀತ ಶಿಬಿರದಲ್ಲಿ ನೀವೂ ಭಾಗವಹಿಸಬೇಕಾದರೆ....
ವಯಸ್ಸು 10 ರಿಂದ 16 ವರ್ಷದೊಳಗಿರಬೇಕು.
ಕರ್ನಾಟಕ ಸಂಗೀತ ಕಲಿಯುತ್ತಿರಬೇಕು.
ರಾಜ್ಯ ಶಿಕ್ಷಣ ಬೋರ್ಡ್‌ ನಡೆಸುವ ಸಂಗೀತ ಜೂನಿಯರ್‌ ಪರೀಕ್ಷೆಯಲ್ಲಿ ಪಾಸಾಗಿರಬೇಕು.
ಐದೂ ವರ್ಷಗಳ ಪ್ರತಿ ಶಿಬಿರಕ್ಕೂ ಹಾಜರಾಗಬೇಕು.
ಕರ್ನಾಟಕ ಶಾಸ್ತ್ರೀಯ ಸಂಗೀತದ ಬಗ್ಗೆ ಭಾರೀ ಒಲವಿರಬೇಕು.
ಶಾಸ್ತ್ರೀಯ ವಾದ್ಯಕಾರರಿಗೂ ಶಿಬಿರಕ್ಕೆ ಸ್ವಾಗತ.

ಐದು ವರ್ಷಗಳ ಈ ಸಂಗೀತ ಶಿಬಿರದ ಯೋಜನೆಯಲ್ಲಿ ಊಟ- ವಸತಿ, ಸಂಗೀತ ಹೇಳಿಕೊಡುವ ಗುರುಗಳಿಗೆ ಕೊಡುವ ಫೀಸು ಎಲ್ಲಾ ಸೇರಿ ಪ್ರತಿ ವಿದ್ಯಾರ್ಥಿಗೆ ತಗಲುವ ವೆಚ್ಚ 45 ಸಾವಿರ ರುಪಾಯಿ. ಆದರೆ, ಇದನ್ನು ವಿದ್ಯಾರ್ಥಿಗಳೇ ಭರಿಸುವುದು ಕಷ್ಟ, ಭಾರೀ ತುಟ್ಟಿ. ವಿದ್ಯಾರ್ಥಿಗಳು 10 ಸಾವಿರ ರುಪಾಯಿ (ಐದೂ ವರ್ಷಗಳ ಎಲ್ಲಾ ಶಿಬಿರ ಸೇರಿ) ಕಟ್ಟಿದರೆ ಸಾಕು. ಉಳಿದ ಹಣವನ್ನು ಸಂಗೀತ ಪ್ರೇಮಿಗಳು ಹಾಗೂ ಕೊಡುಗೈ ಜನರಿಂದ ಪಡೆಯಲಾಗುವುದು ಎನ್ನುತ್ತಾರೆ ಪದ್ಮನಾಭ.

ಶಿಬಿರ ನಡೆಯುವ ಸ್ಥಳ- ಬೆಂಗಳೂರಿನ ಹೊರ ವಲಯದಲ್ಲಿರುವ ವಾದಿರಾಜ ಭವನ.

ಆರ್‌.ಕೆ.ಪದ್ಮನಾಭ ನಿಮಗೆ ಗೊತ್ತೆ?
ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕರ ಯಾದಿಯಲ್ಲಿ ಕೇಳಿಬರುವ ಪ್ರಮುಖ ಹೆಸರುಗಳಲ್ಲೊಂದು ಆರ್‌.ಕೆ.ಪದ್ಮನಾಭ. ಮೈಸೂರು ವಾಸುದೇವಾಚಾರ್ಯ ಮತ್ತು ವಾದಿರಾಜರ ಕೃತಿಗಳಿಗೆ ಜೀವ ಕೊಟ್ಟ ಅಗ್ಗಳಿಕೆ ಇವರದು. ಸಂಗೀತದ ಸಲುವಾಗೇ ವಾದಿರಾಜ ಭವನ ಕಟ್ಟಲು ಟೊಂಕಕಟ್ಟಿ, ಸಾಕಷ್ಟು ನಿಧಿ ಸಂಗ್ರಹಿಸಿದ ಪದ್ಮನಾಭ ಯುವ ಪ್ರತಿಭೆಗಳಿಗೆ ಬೆನ್ನು ತಟ್ಟುವುದರಲ್ಲಿ ಸದಾ ಮುಂದು. ತಾವು ಕಲಿತಿರುವುದನ್ನು ಹಂಚಿಕೊಳ್ಳಲು ತುಡಿಯುವ ಇವರ ಸಮಾನ ಮನಸ್ಕ ಗೆಳೆಯರ ಸಂಖ್ಯೆ ಅಸಂಖ್ಯ. ವಿಶ್ವಾದ್ಯಂತ ಪದ್ಮನಾಭ ಅವರ ಸ್ನೇಹಿತರಿದ್ದಾರೆ. ಅಂದಹಾಗೆ, ವಾದಿರಾಜ ಭವನ ನಿರ್ಮಾಣದ ಒಟ್ಟು ಖರ್ಚು 1 ಕೋಟಿ ರುಪಾಯಿ.

ಶಿಬಿರದ ಬಗ್ಗೆ ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ- ಶ್ರೀಮದ್‌ ವಾದಿರಾಜ ಆರಾಧನಾ ಟ್ರಸ್ಟ್‌, ದೂರವಾಣಿ ಸಂಖ್ಯೆ- (+91) (080) 659 3454.

Post Your Views

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X