ಚಿತ್ರಸಾಹಿತಿ ದಿ.ವಿಜಯನಾರಾಸಿಂಹರಿಗೆ ನೆನಪಿನ ‘ಗೀತಾಂಜಲಿ’

ಬೆಂಗಳೂರು : ಈಚೆಗೆ ನಿಧನರಾದ ಕನ್ನಡ ಚಿತ್ರರಂಗದ ಹೆಸರಾಂತ ಸಾಹಿತಿ ದಿವಂಗತ ವಿಜಯನಾರಾಸಿಂಹರ ಸ್ಮರಣಾರ್ಥ ಫೆ.16ರ ಶನಿವಾರ ಸಂಜೆ ಯವನಿಕಾ ಸಭಾಂಗಣದಲ್ಲಿ ‘ವಿಜಯನಾರಸಿಂಹರ ಸುಮಧುರ ಗೀತೆಗಳ ಗಾಯನ’ ಸಂಜೆಯನ್ನು ಏರ್ಪಡಿಸಲಾಗಿದೆ.

ಬೆಂಗಳೂರಿನ ರೂಪಕಲಾ ನೃತ್ಯಶಾಲೆ ಏರ್ಪಡಿಸಿರುವ ಈ ಕಾರ್ಯಕ್ರಮದಲ್ಲಿ ಖ್ಯಾತ ಹಿನ್ನೆಲೆ ಗಾಯಕರಾದ ಕಸ್ತೂರಿ ಶಂಕರ್‌, ಬಿ.ಕೆ.ಸುಮಿತ್ರ, ಚಿತ್ರನಟ ಶ್ರೀನಿವಾಸಮೂರ್ತಿ, ಹಿರಿಯ ಅಭಿನೇತ್ರಿ ಜಯಂತಿ, ಪತ್ರಕರ್ತ ಪಿ.ಜಿ. ಶ್ರೀನಿವಾಸಮೂರ್ತಿ ಮೊದಲಾದವರು ಪಾಲ್ಗೊಳ್ಳುತ್ತಿದ್ದಾರೆ.

ವಿಜಯನಾರಸಿಂಹ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ಸಲುವಾಗಿ, ಅವರು ರಚಿಸಿರುವ ಸುಮಧುರ ಗೀತೆಗಳ ಗಾಯನದ ಮೂಲಕ ಗೀತಾಂಜಲಿಯನ್ನೂ, ನೃತ್ಯಶಾಲೆಯ ಮಕ್ಕಳ ನೃತ್ಯಾಭಿನಯದ ಮೂಲಕ ನೃತ್ಯಾಂಜಲಿಯನ್ನೂ ಸಲ್ಲಿಸಲಾಗುವುದು ಎಂದು ರೂಪಕಲಾ ಶಾಲೆಯ ಪ್ರಕಟಣೆ ತಿಳಿಸಿದೆ.

(ಇನ್‌ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+