ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿತಾರ್‌ ಮಾಂತ್ರಿಕ ಪಂಡಿತ್‌ ರವಿಶಂಕರ್‌ಗೆ ವಿಶ್ವ ಸಂಗೀತ ಗ್ರ್ಯಾಮಿ ಪ್ರಶಸ್ತಿ

By Staff
|
Google Oneindia Kannada News

Grammy music award for Pt. Ravishankarಲಾಸ್‌ ಏಂಜಲೀಸ್‌ : ಸಂಗೀತ ಜಗತ್ತಿನಲ್ಲಿ ಸಿತಾರ್‌ ವಾದನದ ಮೂಲಕ ತಮ್ಮದೇ ಛಾಪು ಮೂಡಿಸಿರುವ ಪಂಡಿತ್‌ ರವಿಶಂಕರ್‌ಗೆ ಸಂಗೀತ ಕ್ಷೇತ್ರದ ಹೆಮ್ಮೆಯ ಗ್ರ್ಯಾಮಿ ಪ್ರಶಸ್ತಿ ಸಂದಿದೆ.

ಬ್ರೆಜಿಲ್‌ನ ಗಿಲ್ಬರ್ಟೋ ಗಿಲ್‌ ಹಾಗೂ ಮಿಲ್ಟನ್‌ ನ್ಯಾಸಿಮೆಂಟೋ ಮತ್ತು ಬ್ರಿಟನ್ನಿನ ಜಾನ್‌ ಮೆಕ್‌ಲಾಲಿನ್‌ ಅವರ ಜೊತೆ ನಡೆದ ಆಯ್ಕೆಯ ತುರುಸಿನಲ್ಲಿ ಗ್ರ್ಯಾಮಿ ಗೆದ್ದವರು ಪಂಡಿತ್‌ ರವಿಶಂಕರ್‌. ಈ ಪ್ರಶಸ್ತಿ ಸಂದಿರುವುದು ರವಿಶಂಕರ್‌ ಅವರ ಫುಲ್‌ ಸರ್ಕಲ್‌/ಕಾರ್ನೆಜೀ ಹಾಲ್‌ 2000 ಎಂಬ ಆಲ್ಬಂಗೆ. ಸಾಂಪ್ರದಾಯಿಕ ಸಂಗೀತ ಪ್ರಕಾರದ ವಿಭಾಗದಲ್ಲಿ ಈ ಪ್ರಶಸ್ತಿ ಲಭಿಸಿದೆ.

ಬಾಲ್ಯದಲ್ಲಿ ಸಹೋದರ ಉದಯ್‌ ಜೊತೆ ನೃತ್ಯ ಅಭ್ಯಾಸದಲ್ಲಿ ಮುಳುಗಿದ ಪಂಡಿತ್‌ ರವಿಶಂಕರ್‌ ಮನಸ್ಸು ನಂತರ ವಾಲಿದ್ದು ಸಿತಾರ್‌ನತ್ತ. ಸಿತಾರ್‌ ಅವರನ್ನು ಎಷ್ಟರ ಮಟ್ಟಿಗೆ ಸೆಳೆಯಿತೆಂದರೆ, ನೃತ್ಯ ಆಡುವುದನ್ನೇ ಬಿಟ್ಟುಬಿಟ್ಟರು. ಆಗ ಅವರ ವಯಸ್ಸು 18 ವರ್ಷ. ಸಿತಾರ ವಾದನದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ರವಿಶಂಕರ್‌, ಭಾರತ ಸಂಗೀತ ಕ್ಷೇತ್ರದ ಅನರ್ಘ್ಯ ರತ್ನಗಳ ಪೈಕಿ ಒಬ್ಬರಾದರು. ಇದೀಗ ಅಂತರರಾಷ್ಟ್ರೀಯ ಮಟ್ಟದ ಗೌರವ ಇವರಿಗೆ ಸಂದಿದೆ. ಆಲ್‌ ಇಂಡಿಯಾ ರೇಡಿಯೋದಲ್ಲಿ ಸಂಗೀತ ನಿರ್ದೇಶಕರಾಗಿ ಅನೇಕ ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿರುವ ರವಿ ಶಂಕರ್‌, ಸತ್ಯಜಿತ್‌ ರೇ ನಿರ್ದೇಶನದ ಹೆಸರಾಂತ ಚಿತ್ರ ಅಪು ಟ್ರೆೃಲಜಿಗೆ ಸಂಗೀತ ಹೊಸೆದವರು.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X