ರತ್ನಮಾಲಾ ಪ್ರಕಾಶ್- ಮಾಲತಿ ಶರ್ಮಾ ‘ಭಾವ ವೈಭವ’ಕ್ಕೆ ಬೆಳ್ಳಿಹಬ್ಬ
ಬೆಂಗಳೂರು : ಕನ್ನಡ ಸುಗಮ ಸಂಗೀತ ಕ್ಷೇತ್ರದ ಸಿರಿ ಕಂಠಗಳಾದ ರತ್ನಮಾಲಾ ಪ್ರಕಾಶ್ ಹಾಗೂ ಮಾಲತಿ ಶರ್ಮಾ ಅವರ ಹಾಡುಗಾರಿಕೆಗೀಗ ಬೆಳ್ಳಿಹಬ್ಬ ! ಈ ಸಂಭ್ರಮವನ್ನು ವಿಭಿನ್ನ ರೀತಿಯಲ್ಲಿ ಆಚರಿಸಲು ಮುಂದಾಗಿರುವ ರತ್ನಮಾಲಾ- ಮಾಲತಿ ಭಲೇಜೋಡಿ, ‘ಭಾವ ವೈಭವ’ ಎನ್ನುವ ವಿಶಿಷ್ಠ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಮಾರ್ಚ್ 1 ರ ಸಂಜೆ 5.30 ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ‘ಭಾವ ವೈಭವ’ ಕಾರ್ಯಕ್ರಮದಲ್ಲಿ ತಮ್ಮ ಸುಗಮ ಸಂಗೀತ ಜೀವನದಲ್ಲಿ ಮಾರ್ಗದರ್ಶನ ನೀಡಿದ ಹಿರಿಯರನ್ನು ರತ್ನಮಾಲಾ- ಮಾಲತಿ ಗೌರವಿಸುವರು. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ರತ್ನಮಾಲಾ ಪ್ರಕಾಶ್ ಈ ಭಾವ ವೈಭವದ ವಿವರಗಳನ್ನು ನೀಡಿದರು.
ಈ ಗುರು ಗೌರವ ಕಾರ್ಯಕ್ರಮದಲ್ಲಿ ಸಂಗೀತ- ಸಾಹಿತ್ಯ ಕ್ಷೇತ್ರದ ತಾರೆಗಳಾದ ಆರ್.ಕೆ.ಶ್ರೀಕಂಠನ್, ಕೆ.ಎಸ್.ನರಸಿಂಹಸ್ವಾಮಿ, ಜಿ.ಎಸ್.ಶಿವರುದ್ರಪ್ಪ , ಸಿ.ಅಶ್ವಥ್, ಮೈಸೂರು ಅನಂತಸ್ವಾಮಿ ಅವರ ಪತ್ನಿ ಶಾಂತಾ ಅನಂತಸ್ವಾಮಿ ಅವರನ್ನು ಸನ್ಮಾನಿಸಲಾಗುವುದು.
ಪಂಪ ಪ್ರಶಸ್ತಿ ವಿಜೇತ ಹಿರಿಯ ಲೇಖಕ ಪ್ರೊ.ಎ.ಎನ್.ಮೂರ್ತಿರಾವ್ ಭಾವ ವೈಭವ ಕಾರ್ಯಕ್ರಮವನ್ನು ಉದ್ಘಾಟಿಸುವರು. ಕವಿ ಡಾ।ಎನ್.ಎಸ್.ಲಕ್ಷ್ಮಿನಾರಾಯಣ ಭಟ್ಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವೆ ರಾಣಿ ಸತೀಶ್, ವಿಧಾನ ಪರಿಷತ್‌ನ ಮುಖ್ಯ ಸಚೇತಕ ಸಲೀಂ ಅಹಮದ್ ಕಾರ್ಯಕ್ರಮದಲ್ಲಿ ಭಾಗವಹಿಸುವರು.(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications