ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮ್‌ ಪ್ರಸಾದ್‌ ತಂದಿದ್ದಾರೆ ಸಾಗರದಾಚೆಗೆ ಮಧು ಬಂಗಾರಪ್ಪ ‘ಆಕಾಶ’

By Staff
|
Google Oneindia Kannada News

*ಇನ್ಫೋ ಇನ್‌ಸೈಟ್‌

ನನ್ನ ಪ್ರೀತಿಯ ಹುಡುಗಿ ಚಿತ್ರದ ಮೂಲಕ ಹಿನ್ನೆಲೆ ಸಂಗೀತಕ್ಕೆ ಪುನರಾಗಮನಗೈದ ಕ್ಯಾಲಿಫೋರ್ನಿಯಾದಲ್ಲಿರುವ ರಾಮ್‌ ಪ್ರಸಾದ್‌ ಮೊನ್ನೆ ತಾನೆ ಬೆಂಗಳೂರಿಗೆ ಬಂದು ಹೋದ ಫಲಶೃತಿ ಹೊರಬಿದ್ದಿದೆ. ಮಧು ಬಂಗಾರಪ್ಪನವರ ಆಕಾಶ್‌ ಆಡಿಯೋ ಸಂಸ್ಥೆ ಮೊದಲ ಬಾರಿಗೆ ಕಡಲಾಚೆ ಕನ್ನಡ ಕೆಸೆಟ್‌ ಒಂದನ್ನು ಬಿಡುಗಡೆ ಮಾಡಿದೆ.

ಇದರ ಹಿಂದಿರುವ ಶ್ರಮ ಮತ್ತು ಕೆಸೆಟ್ಟಿನಲ್ಲಿರುವ ಕಂಠ ರಾಮ್‌ ಪ್ರಸಾದ್‌ ಅವರದ್ದೇ. ಸಂತೋಷದ ವಿಷಯವೆಂದರೆ, ಕೆಸೆಟ್ಟಿನಲ್ಲಿರುವುದು ಪುರಂದರ ದಾಸರ ಕೀರ್ತನೆಗಳು. ಕೆಸೆಟ್ಟಿನ ಹೆಸರೂ ಕೂಡ ಇದೇ. ಬಾಲು-ಶರ್ಮಾ ಜೋಡಿ ಹೆಣೆದಿರುವ ರಾಗಗಳಲ್ಲಿ ದಾಸರ ಗೀತೆಗಳಿಗೆ ಜೀವ ತುಂಬಿದ್ದಾರೆ ರಾಮ್‌ ಪ್ರಸಾದ್‌. ಕೆಸೆಟ್ಟಿನಲ್ಲಿರುವ ಎಲ್ಲಾ 8 ಕೀರ್ತನೆಗಳನ್ನೂ ಇವರೇ ಹಾಡಿದ್ದಾರೆ.

ಕರ್ನಾಟಕದಲ್ಲಿ ಕನ್ನಡ ಸಿನಿಮಾ ಸಂಗೀತಕ್ಕೆ ಹೊಸ ವೇಗ ದಕ್ಕಿಸಿಕೊಟ್ಟಿರುವ ಮಧು ಬಂಗಾರಪ್ಪ ವರಸೆಗಳೇಈಗ ಸುದ್ದಿ. ರಿಸ್ಕಿಗೆ ಎದೆಗೊಡುವ ಜಾಯಮಾನದ ಮಧು ಬಂಗಾರಪ್ಪ, ಕೆಸೆಟ್‌ ಬಿಡುಗಡೆಗೆ ಅದ್ಧೂರಿ ಸಮಾರಂಭಗಳನ್ನು ಆಯೋಜಿಸುವ ಟ್ರೆಂಡ್‌ಗೆ ಚಾಲನೆ ಕೊಟ್ಟವರು. ಇದೀಗ ಎಚ್‌ಟುಓ ಚಿತ್ರದ ಹಂಚಿಕೆಯನ್ನೂ ಪಡೆದಿರುವ ಇವರಿಂದ ಸಾಗರದಾಚೆ ಇರುವ ಕನ್ನಡಿಗರಿಗೆ ಇನ್ನಷ್ಟು ಒಳ್ಳೆ ಸಂಗೀತದೂಟ ಮಾಡುವ ಭಾಗ್ಯ ದೊರೆಯಲಿ.

ಜನವರಿ 19ರಂದು ಸಂಗೀತ ನಿರ್ದೇಶಕ ಮನೋಮೂರ್ತಿ ತಮ್ಮ ಮನೆಯಲ್ಲಿಯೇ ಕೆಸೆಟ್ಟನ್ನು ಬಿಡುಗಡೆ ಮಾಡಿದಾಗ, ನೆರೆದಿದ್ದ ಗೆಳೆಯರ ಕರತಾಡನ. ಅದು ಸಣ್ಣದೊಂದು ಸಂತೋಷ ಕೂಟ. ಮಿಕ್ಕಿದ್ದೆಲ್ಲಾ ಸಂಗೀತವೇ. ಕೆಸೆಟ್ಟು ಹಾಗಿದೆ.

ಕೆಸೆಟ್ಟಿನಲ್ಲಿರುವ ಕೀರ್ತನೆಗಳು ಹೀಗಿವೆ. ಅದನ್ನು ಹಾಡಿರುವ ರಾಗಗಳನ್ನು ಓದಿಕೊಳ್ಳಿ, ಆಮೇಲೆ ಕೆಸೆಟ್ಟು ಕೊಂಡುಕೊಳ್ಳಿ.

ಸ್ಮರಣೆ ಒಂದೇ ಸಾಲದೆ (ಮಲಯ ಮಾರುತ)
ಯಾದವ ನೀ ಬಾ (ತಿಲ್ಲಾಂಗ್‌)
ಆದದ್ದೆಲ್ಲಾ ಒಳಿತೇ ಆಯಿತು (ಪೂರ್ವಿ ಕಲ್ಯಾಣಿ)
ಪಾಲಿಸೆ ಎನ್ನ ಶ್ರೀ ಮಹಾಲಕ್ಷ್ಮಿ (ಕಲ್ಯಾಣಿ)
ದೇವಕಿ ಕಂದ ಮುಕುಂದ (ಮಧುವಂತಿ)
ದೇವ ಬಂದಾನಮ್ಮ (ದುರ್ಗ)
ಬುದ್ಧಿ ಮಾತು ಹೇಳಿದರೆ (ಕಲ್ಯಾಣ ವಸಂತ)
ವೆಂಕಟ ರಮಣನೆ ಬಾರೊ (ಸಾವೇರಿ)

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X