ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೆ.11ರಂದು ಜೆ.ಪಿ.ನಗರದಲ್ಲಿ ಪುರಂದರ ಮತ್ತು ತ್ಯಾಗರಾಜರ ಆರಾಧನೆ

By Staff
|
Google Oneindia Kannada News

ಎಲ್ಲೆಲ್ಲು ಸಂಗೀತವೇ. ಎಲ್ಲೆಲ್ಲು ಸೌಂದರ್ಯವೇ !
ಅದರಲ್ಲೂ ಫೆಬ್ರವರಿ ಕನಕ, ಪುರಂದರ, ತ್ಯಾಗರಾಜರ ನೆನೆ ನೆನೆವ ಮಾಸ. ಸಾಗರದಾಚೆಗಿನ ಇಂಥಾ ಕಾರ್ಯಕ್ರಮಗಳ ಬಗೆಗೆ ನಾವು ಬರೆದಿದ್ದೆವು. ಈಗ ಅಪರೂಪದ, ಬಹು ಪ್ರತಿಭೆಗಳ ಸಂಗೀತ ಸಂಜೆ ಬೆಂಗಳೂರಿನಲ್ಲಿ. ಸಹೃದಯರಿಗೆ ದಾಸರ ಪದಗಳ ನಾಲಗೆ ಮೇಲೆ ನಲಿಸಲು ಸದವಕಾಶ. ಸಂಗೀತದ ಸ್ವರಕ್ಕೆ ನಿಮ್ಮ ದನಿಯನ್ನೂ ಕೂಡಿಸಬಹುದಾದ ವೇದಿಕೆ. ಇದು ಪುರಂದರ ದಾಸ ಮತ್ತು ತ್ಯಾಗರಾಜರ ಆರಾಧನೆ ಮಹೋತ್ಸವ. ಫೆಬ್ರವರಿ 11, ಸೋಮವಾರ ಸಂಜೆ 6.30ರಿಂದ. ಇದು ಬಗೆಬಗೆಯ ಸಂಗೀತದೂಟ ಉಣಿಸಿರುವ ಬೆಂಗಳೂರಿನ ಹೆಸರಾಂತ ಎಸ್‌.ವಿ.ಎನ್‌.ಮ್ಯೂಸಿಕ್‌ ಅಕಾಡೆಮಿಯ ಕೊಡುಗೆ.

ಸ್ಥಳ- ಜೆ.ಪಿ.ನಗರ ಮೊದಲ ಹಂತದ ಎಸ್‌.ಎಸ್‌.ಎಂ.ಆರ್‌.ವಿ. ಕಾಲೇಜು ಸಭಾಂಗಣ.

ಮಧುರೈ ಟಿ.ಎನ್‌.ಶೇಷಗೋಪಾಲನ್‌ ಮುಖ್ಯ ಸಂಗೀತಗಾರರು. ಸಾಥಿಗಳು : ವಿ.ಶ್ರೀಕಾಂತ್‌-ಪಿಟೀಲು, ವಿ.ಪ್ರವೀಣ್‌- ಮೃದಂಗ, ಎಚ್‌.ಪಿ.ರಾಮಾಚಾರ್‌- ಕಂಜಿರ.

ಅಷ್ಟೇ ಅಲ್ಲ, ಕಾರ್ಯಕ್ರಮದಲ್ಲಿ ಉಲಿಯುವ ಕಂಠಗಳ ಪಟ್ಟಿ ದೊಡ್ಡದಿದೆ...

ಆರ್‌.ಕೆ.ಶ್ರೀಕಂಠನ್‌, ಒ.ಎಸ್‌.ತ್ಯಾಗರಾಜನ್‌, ಎಸ್‌.ಶಂಕರ್‌, ವಿದ್ಯಾಭೂಷಣ, ಅರುಣ ಸಾಯಿರಾಮ್‌, ಎಂ.ಎಸ್‌.ಶೀಲ, ನಾಗಮಣಿ ಶ್ರೀಕಾಂತ್‌, ಆರ್‌.ಎಸ್‌.ರಮಾಕಾಂತ್‌, ಆರ್‌.ಕೆ.ಪದ್ಮನಾಭನ್‌, ಆರ್‌.ಎ.ರಮಾಮಣಿ, ಜಿ.ಆರ್‌.ಜಯ, ಕಲಾವತಿ ಅವಧೂತ್‌, ಬೆಂಗಳೂರು ಕೆ ವೆಂಕಟರಾಮ್‌, ಟಿ.ಎ.ಎಸ್‌.ಮಣಿ, ಅನಂತ ಕೃಷ್ಣ ಶರ್ಮ, ವಿ.ಕೃಷ್ಣ, ಅನುರಾಧ ಮಧುಸೂದನ್‌, ಜ್ಯೋತ್ಸ್ನಾ ಶ್ರೀಕಾಂತ್‌, ಆರ್‌.ಗಣೇಶ್‌, ಸರಾಲಯ ಸಿಸ್ಟರ್ಸ್‌.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X