ಕ್ಯಾಸೆಟ್ ವಿಶ್ವ : ಹೊಸತು ಮಾರುಕಟ್ಟೆಗೆ
ಲಯಕರ್ತನಾದ ಶಿವರೂಪ ದರ್ಶನ, ನಂಜನಗೂಡಿನ ಮಹಿಮೆ ಹಾಗೂ ಮಲೆ ಮಾದೇಶದ ಹಿರಿಮೆಯನ್ನು ಸಾರುವ ಮೂರು ಕ್ಯಾಸೆಟ್‌ಗಳನ್ನು ಟಿ. ಸೀರೀಸ್ ಹೊರತಂದಿದ್ದರೆ. ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮನವರಿಗೆ ಆ್ಯಸಿಡ್ ಎರಚಿದ ಪ್ರಸಂಗವನ್ನೇ ಆಧಾರವಾಗಿಟ್ಟುಕೊಂಡು ರಚಿಸಲಾದ ಕಥಾವಸ್ತುವಿನ ಕ್ಯಾಸೆಟ್ ಅನ್ನು ಮಂಜಿತ್ ಆಡಿಯೋ ಹೊರತಂದಿದೆ.
ನಂಜನಗೂಡಿಗೆ ಬನ್ನಿರೋ : ಇದು ಗರಳಪುರಿಯ ನಂಜುಂಡೇಶ್ವರನ ಕುರಿತಾದ ಭಕ್ತಿಗೀತೆಗಳ ಸಂಪುಟ. ರಾಜ್ಯದ ಸುಪ್ರಸಿದ್ಧ ಶೈವ ಕ್ಷೇತ್ರ ನಂಜನಗೂಡಿನ ಹಿರಿಮೆಯ ಕುರಿತಾದ ಭಕ್ತಿಗೀತೆಗಳನ್ನು ಆರ್.ಎನ್. ಜಯಗೋಪಾಲ್ ಮತ್ತು ಎಚ್.ಎಲ್. ಶೇಷಚಂದ್ರ ರಚಿಸಿದ್ದಾರೆ. ಹನುಮಂತಾಚಾರ್, ವೈ.ಎನ್. ಶರ್ಮಾ ಮತ್ತು ಬಾಲು ಶರ್ಮಾ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.
ಖ್ಯಾತ ಹಿನ್ನೆಲೆ ಗಾಯಕರಾದ ಎಸ್.ಪಿ. ಬಾಲಸುಬ್ರಹ್ಮಣ್ಯಂ, ಕಂಚಿನ ಕಂಠದ ಎಸ್. ಜಾನಕಿ, ಮಂಜುಳಾ ಗುರುರಾಜ್ ಹಾಗೂ ಎಲ್.ಎನ್. ಶಾಸ್ತ್ರೀ ಹಾಡುಗಳನ್ನು ಹಾಡಿದ್ದಾರೆ. ಗೌರೀವರನ ಸ್ತುತಿಸುತ್ತಾ, ಕಪಿಲಾ ನದಿ ತೀರದಲ್ಲಿ ವಿಹರಿಸುತ್ತಾ ಸಾಗುವ ಈ ಗೀತೆಗಳು ಭಕ್ತಿಭಾವ ಉಕ್ಕಿಸುವಂತಿವೆ. ಕ್ಯಾಸೆಟ್‌ನ ಬೆಲೆ 30 ರುಪಾಯಿ.












Click it and Unblock the Notifications