• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗಣಕನ್ನಡ : ಕನ್ನಡ ಗಣಕೀಕರಣದ ಕುರಿತೊಂದು ಚರ್ಚೆ

By Super
|

ಮೈಕ್ರೋಸಾಫ್ಟ್‌ ಸಂಸ್ಥೆಯ ಪ್ರತಿನಿಧಿಗಳೂ ಸಹ ಸಭೆಗೆ ಆಗಮಿಸಿ, ತಾವು ಅಭಿವೃದ್ಧಿ ಪಡಿಸುತ್ತಿರುವ ಕನ್ನಡ ಎಂ.ಎಸ್‌.ಆಫೀಸ್‌ ತಂತ್ರಾಂಶದ ಒಂದು ಮುನ್ನೋಟವನ್ನು ಪ್ರಾತ್ಯಕ್ಷಿಕೆ ಮೂಲಕ ನೀಡಿದರು. ಇಂಗ್ಲಿಷ್‌ ಆಫೀಸಿನಲ್ಲಿ ಏನೆಲ್ಲ ಕೆಲಸಗಳನ್ನು ನಿರ್ವಹಿಸಬಹುದೋ ಅದನ್ನೆಲ್ಲಾ ಕನ್ನಡಭಾಷೆಯಲ್ಲೇ ಮಾಡಬಹುದು ಎಂದು ವಿವರಿಸಿದರು. ಉದಾಹರಣೆಗೆ, ಆಂಗ್ಲದ ‘ಸಾರ್ಟ್‌’ ಕನ್ನಡದಲ್ಲಿ ‘ವಿಂಗಡಣೆ’ಯಾಗುತ್ತದೆ. ಲಬ್ಧ ಪಟ್ಟಿಯನ್ನು ಅಕರಾದಿಯಾಗಿ ಸಿದ್ಧಪಡಿಸುವುದು, ದತ್ತಾಂಶದಂತೆ, ಪಟ್ಟಿಯಿಂದ ಐಚ್ಛಿಕ ಗುಂಪುಗಳನ್ನು ವಿಂಗಡಿಸುವುದು ಇತ್ಯಾದಿಗಳು ಇದರಲ್ಲಿ ಸುಲಭ ಸಾಧ್ಯ. ಇದಕ್ಕಾಗಿ ಇವರು ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟನ್ನು ಉಪಯೋಗಿಸಿಕೊಂಡಿದ್ದಾರೆಂದು ವಿವರಿಸಿದರು. ಬಹಳ ಮುಖ್ಯವಾಗಿ, ಇಂಗ್ಲೀಷಿನಲ್ಲಿರುವಂತೆ ಕಾಗುಣಿತ ಹಾಗೂ ವ್ಯಾಕರಣ ದೋಷಗಳನ್ನು ಗುರುತಿಸಿ, ಅದಕ್ಕೆ ಪರಿಹಾರವನ್ನು ಸೂಚಿಸುವ ಖಾನೆಗಳೂ ಸಹ ಇದರಲ್ಲಿ ಲಭ್ಯ.

ಈ ತಂತ್ರಾಂಶದ ಮತ್ತೊಂದು ವೈಶಿಷ್ಟ್ಯ ನೀವು ಈಗಾಗಲೇ ಉಪಯೋಗಿಸುತ್ತಿದ್ದು ಅಭ್ಯಾಸವಾಗಿರುವ ಕನ್ನಡದ ಯಾವುದೇ ಕೀಲಿಮಣೆಯನ್ನು ಆರಿಸಿಕೊಂಡು ಕೆಲಸಮಾಡುವ ಸೌಕರ್ಯವನ್ನು ಇದು ಹೊಂದಿದೆ ಎಂಬುದು. ನೆರೆದಿದ್ದವರಿಂದ ಪ್ರತಿಕ್ರಿಯೆಯನ್ನು ನಿರೀಕ್ಷಿಸಿ, ಇದನ್ನು ಇನ್ನೂ ಉತ್ತಮಪಡಿಸಲು ಸಲಹೆಗಳನ್ನು ಆಹ್ವಾನಿಸಿದರು. ಉಪಯೋಗಿಸುವವರಿಗೆ ಅನುಕೂಲಕರವಾದ ಇನ್ನೊಂದು ಪ್ರಮುಖ ಅಂಶವೆಂದರೆ, ಕನ್ನಡದಲ್ಲಿ ಇದುವರೆಗೆ ವಿನ್ಯಾಸಿಸಿರುವ ಎಲ್ಲ ತಂತ್ರಾಂಶಗಳಿಗೂ ಇದು ಹೊಂದಿಕೊಳ್ಳುತ್ತದೆ ಎಂಬುದು. ಸದ್ಯದಲ್ಲಿಯೇ ಬಿಡುಗಡೆಯಾಗಲಿರುವ ಈ ತಂತ್ರಾಂಶದ ‘ಬೀಟಾ ವರ್ಶನ್‌’ ತಂತ್ರಜ್ಞರುಗಳಿಂದ ಪರೀಕ್ಷಿಸಲ್ಪಡುತ್ತಿದೆ. ಹರಿಹರೇಶ್ವರರು ನಗೆಮಾತಾಗಿ ಹೇಳಿದರೂ ಸಹ ಇದರ ಬೆಲೆ ಕೈಗೆಟುವಂತಿದ್ದರೆ ಮಾತ್ರ ಜನಸಾಮಾನ್ಯರಿಗೆ ಉಪಯೋಗವಾಗುತ್ತದೆ. ಇಲ್ಲದಿದ್ದರೆ ಇದು ಕೇವಲ ಸಂಸ್ಥೆಗಳು ಕೊಳ್ಳುವ ತಂತ್ರಾಂಶವಾಗಿ, ಕಳ್ಳತಂತ್ರಾಂಶವು ಹೊರಬರಲು ಕಾರಣವಾಗುತ್ತದೆ. ಇವರ ‘ಅಮೆರಿಕನ್ನಡ’ದಂತೆ, ಈ ಸಭೆಯನ್ನು ‘ಗಣಕನ್ನಡ’ಸಭೆಯೆಂದು ಕರೆಯೋಣವೇ? ಕನ್ನಡದಲ್ಲಿ ಒಂದು ಉತ್ತಮ ಗಣಕ ತಂತ್ರಾಂಶ ಹೊರಬರುತ್ತಿರುವ ಸಂತೋಷದ ಜೊತೆಗೆ ಸತ್ಕಾರಪ್ರಿಯರಾದ ಈ ದಂಪತಿಗಳು ಬಂದಿದ್ದವರಿಗೆಲ್ಲ ತಾವೇ ನಿಂತು ಉಪಚರಿಸಿ ಬಡಿಸಿದ ಊಟ ಅಂದು ಅತಿ ರುಚಿಯಾದದ್ದು ಅತಿಶಯೋಕ್ತಿಯಲ್ಲ.

ಮೈಕ್ರೋಸಾಫ್ಟ್‌ ಅವರ ಕನ್ನಡ ತಂತ್ರಾಂಶದ ಪ್ರಾತ್ಯಕ್ಷಿಕೆಯಾಂದಿಗೆ, ಕನ್ನಡ ಗಣಕೀಕರಣದ ಬಗ್ಗೆ ನಡೆದ ಈ ಒಂದು ಸಮಾಲೋಚನೆಯ ಸಭೆಯಲ್ಲಿ ನಗರದ ಹಲವು ಗಣ್ಯರು ಭಾಗವಹಿಸಿದ್ದರು:

ಅಚ್ಚುತರಾವ್‌ ಎಂ. ಕೆ. (ಮಾಜಿ ಅಧ್ಯಕ್ಷರು, ಶಾರದಾವಿಲಾಸ ಶಿಕ್ಷಣ ಸಂಸ್ಥೆ; ಮಾಜಿ ಅಧ್ಯಕ್ಷರು, ನೈವೇಲಿ ಕನ್ನಡ ಸಂಘ; ಮಾಜಿ ಮುಖ್ಯಸ್ಥರು ನೈವೇಲಿ ಲಿಗ್ನೈಟ್‌ ಕಾರ್ಪೊರೇಷನ್‌, ತಮಿಳುನಾಡು), ಅನಿಲ್‌ ಕುಮಾರ್‌, ಕೆ. ಎಂ. ಪ್ರೊ। (ವಿದ್ಯಾವರ್ಧಕ ಇಂಜಿನಿಯರಿಂಗ್‌ ಕಾಲೇಜು, ಮೈಸೂರು) ಅನೀತಾ (ಗಣಕ ಯಂತ್ರಜ್ಞರು, ರಾಘವೇಂದ್ರ ಕಂಪ್ಯೂಟರ್‌ ಕೇಂದ್ರ, ಸರಸ್ವತೀಪುರಂ, ಮೈಸೂರು), ಅಶ್ವತ್ಥನಾರಾಯಣ (ಕನ್ನಡ ಸಂಘ ಸಕ್ರಿಯ ಸದಸ್ಯ, ಕೇಂದ್ರೀಯ ಆಹಾರ ತಂತ್ರ ಸಂಶೋಧನಾ ಕೇಂದ್ರ (ಸಿ.ಎಫ್‌.ಟಿ.ಆರ್‌.ಐ.), ಅಶ್ವಿನ್‌ ಆತ್ರೇಯಸ್‌, ಪಿ. (ಮುಖ್ಯ ಕಾರ್ಯನಿರ್ವಹಣ ಅಧಿಕಾರಿ (ಮಾರ್ಕೆಟಿಂಗ್‌) ಸೆಪ್ಟರ್‌ ಕಂಪ್ಯೂಟರ್‌ ಟೆಕ್ನಾಲಜಿಸ್‌, ಮೈಸೂರು), ಆನಂದ್‌ (ಮೈಕ್ರೋಸಾಫ್ಟ್‌ ಆಫೀಸ್‌, ಕನ್ನಡ ವಿಭಾಗ; ಸೈಬರ್‌ ಸ್ಪೇಸ್‌ ಮಲ್ಟೈಮೀಡಿಯಾ, ಬೆಂಗಳೂರು), ಉಮೇಶ್‌, ಪ್ರೊ। (ಕಂಪ್ಯೂಟರ್‌ ವಿಭಾಗದ ಮುಖ್ಯಸ್ಥರು, ಗೀತಾ ಇನ್ಸ್ಟಿಟ್ಯೂಟ್‌ ಆಫ್‌ ಇಂಜಿನಿಯರಿಂಗ್‌ ಟೆಕ್ನಾಲಜಿ, ಮೈಸೂರು), ಉಷಾ ಪ್ರೊ। (ಕಂಪ್ಯೂಟರ್‌ ವಿಭಾಗದ ಮುಖ್ಯಸ್ಥರು, ವಿದ್ಯಾವಿಕಾಸ ಇಂಜಿನಿಯರಿಂಗ್‌ ಕಾಲೇಜ್‌, ಮೈಸೂರು), ಕೃಷ್ಣಮೂರ್ತಿ, ಎಸ್‌.ಆರ್‌. (ಪತ್ರಿಕೋದ್ಯಮಿಗಳು, ಮೈಸೂರು ಮಿತ್ರ ಮತ್ತು ಸ್ಟಾರ್‌ ಆಫ್‌ ಮೈಸೂರು), ಗುರು, ಡಿ. ಎಸ್‌. (ಕಂಪ್ಯೂಟರ್‌ ತಜ್ಞರು), ಜಗದೀಶ್‌ ಸರೋದೆ (ಸಿಸ್ಟಮ್‌ ಇಂಜಿನಿಯರ್‌, ಹಣಕಾಸು ವಿಭಾಗ, ಉತ್ತಮ ಕಂಪ್ಯೂಟರೀಕರಣಕ್ಕಾಗಿ ಇತ್ತೀಚೆಗೆ ಮೈಸೂರು ದಸರಾ ವಸ್ತುಪ್ರದರ್ಶನ ಸಮಿತಿಯಿಂದ ಪುರಸ್ಕೃತರು), ಜ್ಯೋತಿ, ಎ.ಆರ್‌. (ಕಂಪ್ಯೂಟರ್‌ ಕಲಿಕಾ ಕೇಂದ್ರ, ವಿವೇಕಾನಂದ ಶಿಕ್ಷಣ ಸಂಸ್ಥೆ, ಬನ್ನೂರು), ನಂದನ (ಸಂಪರ್ಕ ಸಹಾಯಕ ಅಧಿಕಾರಿ, ಭಾರತೀಯ ಸ್ಟೇಟ್‌ ಬ್ಯಾಂಕ್‌, ವೈಯಕ್ತಿಕ ಖಾತೆಗಳ ವಿಭಾಗ, ಸರಸ್ವತೀಪುರಂ, ಮೈಸೂರು), ಮೀರಾ ನಾಗೇಂದ್ರ (ಮುದ್ರಕರು ಮತ್ತು ಪ್ರಕಾಶಕರು ‘ಕರ್ನಾಟಕ ಪ್ರೆಸ್‌’, ಮೈಸೂರು), ನಾರಾಯಣರಾವ್‌, ಜಿ. ಟಿ. ಪ್ರೊ। (ಸಂಪಾದಕರು: ಕನ್ನಡ ವಿಜ್ಞಾನ ವಿಶ್ವಕೋಶ, ಮಾನಸಗಂಗೋತ್ರಿ, ಮೈಸೂರು ವಿಶ್ವವಿದ್ಯಾನಿಲಯ), ನಿರಂಜನ ವಾನಳ್ಳಿ, ಡಾ। (ಮುಖ್ಯಸ್ಥರು: ಪತ್ರಿಕೋದ್ಯಮ ವಿಭಾಗ, ಮಾನಸಗಂಗೋತ್ರಿ, ಮೈಸೂರು ವಿಶ್ವವಿದ್ಯಾನಿಲಯ), ಪ್ರಕಾಶ್‌, ಕೆ. ಎನ್‌. (ಕನ್ನಡ ಬರಹಗಾರ; ಕಂಪ್ಯೂಟರ್‌ ತಜ್ಞರು; ಸ್ವಂತ ಕಂಪ್ಯೂಟರ್‌ ಉದ್ಯಮಿ, ಸಾಹಿತ್ಯಪ್ರಿಯರು), ಪ್ರಕಾಶ್‌, ಬನ್ನೂರು (ಮುಖ್ಯಸ್ಥರು: ಕಂಪ್ಯೂಟರ್‌ ಕಲಿಕಾ ಕೇಂದ್ರ, ವಿವೇಕಾನಂದ ಶಿಕ್ಷಣ ಸಂಸ್ಥೆ, ಬನ್ನೂರು), ಬಸವರಾಜಯ್ಯ, ಪ್ರೊ।। (ಮುಖ್ಯಸ್ಥರು: ಇಂಜಿನಿಯರಿಂಗ್‌ ಮತ್ತು ತಾಂತ್ರಿಕ ಶಿಕ್ಷಣ ಅಧ್ಯಯನ, ಜೆ. ಎಸ್‌. ಎಸ್‌. ಮಹಾವಿದ್ಯಾಪೀಠ, ಮೈಸೂರು), ಬಾಲಸುಬ್ರಹ್ಮಣ್ಯ (ನಿರ್ದೇಶಕರು, ಎಸ್‌. ಐ. ಎಸ್‌. ಟಿ. ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು), ಬಿಂದು ಫಾಲಾಕ್ಷಪ್ಪ (ಪ್ರವಾಚಕರು, ವಾಣಿಜ್ಯ ವಿಭಾಗ, ಧರ್ಮಸ್ಥಳ ಮಂಜುನಾಥೇಶ್ವರ ಇನ್ಸ್ಟಿಟ್ಯೂಟ್‌ ಫಾರ್‌ ಮ್ಯಾನೇಜ್‌ ಡೆವಲಪ್‌ಮೆಂಟ್‌, ಮೈಸೂರು), ಮನು ಚಕ್ರವರ್ತಿ (ಖ್ಯಾತ ಕತೆಗಾರ, ಕಾದಂಬರಿಕಾರರು, ಸಂಶೋಧಕರು), ಮಹದೇವಸ್ವಾಮಿ (ಹಣಕಾಸು ಅಧಿಕಾರಿ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು), ಮಾನಸ (ಅಧ್ಯಕ್ಷರು, ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌), ಮೋಹನ ಮೂರ್ತಿ, ಆರ್‌. ಎಸ್‌. (ಮಾಲೀಕರು, ಶಕ್ತಿ ಮುದ್ರಣಾಲಯ, ಮೈಸೂರು), ರಂಗಣ್ಣ ಎಂ. ಆರ್‌. (ಮುಖ್ಯಸ್ಥರು: ಹೊಯ್ಸಳ ಕನ್ನಡ ಸಂಘ; ಸಂಪಾದಕರು: ‘ಸವಿಗನ್ನಡ’ ಪತ್ರಿಕೆ, ಸಾಹಿತಿಗಳು ಮತ್ತು ಸಂಘಟಕರು), ರಂಗಧಾಮಯ್ಯ (ಕಾರ್ಯದರ್ಶಿ, ಕನ್ನಡ ಸಂಘ, ಕೇಂದ್ರೀಯ ಆಹಾರ ತಂತ್ರ ಸಂಶೋಧನಾ ಕೇಂದ್ರ (ಸಿ.ಎಫ್‌.ಟಿ.ಆರ್‌.ಐ.), ರವಿಕುಮಾರ್‌, ಸಿ. ಎನ್‌., ಪ್ರೊ।। (ಮುಖ್ಯಸ್ಥರು: ಕಂಪ್ಯೂಟರ್‌ ಇಂಜಿನಿಯರಿಂಗ್‌ ವಿಭಾಗ, ಜೆ. ಎಸ್‌. ಎಸ್‌. ಕಾಲೆಜ್‌, ಮೈಸೂರು), ರಾಕಿ ಮಿರಾಂಡ ಪ್ರೊ।। (ನಿವೃತ್ತ ಪ್ರಾಧ್ಯಾಪಕರು, ಭಾಷಾ ವಿಜ್ಞಾನ ವಿಭಾಗ, ಮಿನಿಸೋಟ ವಿಶ್ವವಿದ್ಯಾಲಯ, ಮಿನಿಯಪೋಲಿಸ್‌, ಅಮೆರಿಕಾ), ರಾಮಾನುಜಮ್‌ (ಮುಖ್ಯಸ್ಥರು ಕರ್ನಾಟಕ ರಾಜ್ಯದ ಭಾರತೀಯ ವಿದ್ಯಾಭವನಗಳು; ಮಾಜಿ ಅಧ್ಯಕ್ಷರು ಹೆಚ್‌. ಎಂ. ಟಿ. ಕಾರ್ಖಾನೆಗಳು; ಸಾಹಿತಿಗಳು), ವಸಂತ (ಗಣಕ ಯಂತ್ರಜ್ಞರು, ಕಂಪ್ಯೂಟರ್‌ ಕಲಿಕಾ ಕೇಂದ್ರ, ವಿವೇಕಾನಂದ ಶಿಕ್ಷಣ ಸಂಸ್ಥೆ, ಬನ್ನೂರು), ವಿದ್ಯಾರಣ್ಯ (ಸಲಹೆಗಾರರು ಅಂತರ್ಜಾಲ ತಾಣ, ಡಬ್ಲ್ಯೂ ಡಬ್ಲ್ಯೂ ಡಬ್ಲ್ಯೂ ಹೊಯ್ಸಳ ಕರ್ಣಾಟಕರು ಡಾಟ್‌ ಕಾಂ; ಖಜಾಂಚಿ, ಮೈಸೂರು ಹೊಯ್ಸಳ ಕರ್ಣಾಟಕ ಸಂಘ), ವಿಶ್ವನಾಥ ಶಾಸ್ತ್ರಿ (ಗಣಕ ತಂತ್ರಜ್ಞ, ಇನ್ಫೋಸಿಸ್‌, ಮೈಸೂರು), ವೀರೇಂದ್ರ ಕುಮಾರ್‌ (ಸಿಸ್ಟಮ್‌ ಇಂಜಿನಿಯರ್‌, ಕಂಪ್ಯೂಟರ್‌ ಕೇಂದ್ರ, ಮಾನಸಗಂಗೋತ್ರಿ ಮೈಸೂರು ವಿಶ್ವವಿದ್ಯಾನಿಲಯ), ಶಕುಂತಲಾ ವೇಣುಗೋಪಾಲ್‌, ಡಿ ಕೆ. (ಮಾಲೀಕರು ಶಾಶ್ವತಿ ಪ್ಲಾಸ್ಟಿಕ್ಸ್‌, ಮೈಸೂರು), ಶಾರದಾ (ಕಂಪ್ಯೂಟರ್‌ ಕಲಿಕಾ ಕೇಂದ್ರ, ವಿವೇಕಾನಂದ ಶಿಕ್ಷಣ ಸಂಸ್ಥೆ, ಬನ್ನೂರು), ಸದಾನಂದಯ್ಯ, ಮ. ಗು. (ಉಪನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು), ಸುದರ್ಶನ, ಸ. ರ. (ಸಹಾಯಕ ನಿರ್ದೇಶಕರು ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು), ಸುಧಾಮಣಿ, ಡಾ। (ಪ್ರಾಧ್ಯಾಪಕರು ಇತಿಹಾಸ ವಿಭಾಗ, ಮಹಾರಾಣಿ ಕಾಲೇಜ್‌, ಮೈಸೂರು), ಹರಿಹರೇಶ್ವರ, ಶಿಕಾರಿಪುರ (ಅಂಕಣ ಬರಹಗಾರ, ‘ಅಮೆರಿಕನ್ನಡ‘ ಸಾಹಿತ್ಯಪತ್ರಿಕೆಯನ್ನು ನಡೆಸಿದವರು), ಹೇಮಂತ್‌ ಕುಮಾರ್‌ (ಕಂಪ್ಯೂಟರ್‌ ತಜ್ಞರು)- ಮುಂತಾದವರು ಈ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರಾರಂಭದಲ್ಲಿ ಮಂಜುಳಾ ಅವರು ಪ್ರಾರ್ಥನೆಯನ್ನು ಮಾಡಿದರು. ಹರಿಹರೇಶ್ವರರ ಪ್ರಾಸ್ತಾವಿಕ ಸ್ವಾಗತ ಭಾಷಣದ ನಂತರ ಜೆ ಎಸ್‌ ಎಸ್‌ ಮಹಾ ವಿದ್ಯಾಪೀಠದ ತಾಂತ್ರಿಕ ಶಿಕ್ಷಣದ ನಿರ್ದೇಶಕ ಪ್ರೊ। ಬಸವರಾಜಯ್ಯನವರೂ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಾನಸ ಅವರೂ, ಪ್ರೊ।। ಜಿ. ಟಿ. ನಾರಾಯಣರಾಯರೂ ಮಾತನಾಡಿದರು. ಪ್ರೊ। ಬಸವರಾಜಯ್ಯನವರಿಗೂ ಮತ್ತು ಮಾನಸ ಅವರಿಗೂ ಶಾಲು ಹೊದಿಸಿ ಸನ್ಮಾನ ಮಾಡಲಾುತು. ಕುಮಾರಿ ರಾಧಿಕಾ ಸುಶ್ರಾವ್ಯವಾಗಿ ಭಾವಗೀತೆಯನ್ನು ಹಾಡಿ ಮನರಂಜಿಸಿದಳು. ‘ಮೈಕ್ರೋಸಾಫ್ಟ್‌ ಆಫೀಸ್‌ ಕನ್ನಡ’ದ ಬಗ್ಗೆ ಮಾಹಿತಿ ವಿವರಗಳ ಸಂಚಿಕೆಯಾಂದಿಗೆ, ಪ್ರತಿಯಾಬ್ಬರಿಗೂ ಒಂದೊಂದು ಕನ್ನಡದ ಪುಸ್ತಕವನ್ನು ಉಡುಗೊರೆಯಾಗಿ ಕೊಡಲಾಯಿತು.

ಕನ್ನಡಮಾಸದ ಸಂದರ್ಭದಲ್ಲಿ ಇಂಥ ಅರ್ಥಪೂರ್ಣ ಕಾರ್ಯಕ್ರಮಗಳು ಎಲ್ಲೆಡೆ ನಡೆಯಲಿ.

ಇದನ್ನೂ ಓದಿ- Microsoft Office 2003 ಕನ್ನಡ : ಒಂದು ಪರಿಚಯ

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more