ಅಪ್ರತಿಮ ಪ್ರತಿಭೆಯ ಪತ್ರಕರ್ತ, ಸಾಹಿತಿ ಪ.ಗೋ ಕುರಿತು ಪುಸ್ತಕ ಬಿಡುಗಡೆ

Posted By:
Subscribe to Oneindia Kannada

ಪತ್ರಿಕೋದ್ಯಮ ಮತ್ತು ಕನ್ನಡ ಸಾರಸ್ವತ ಲೋಕಕ್ಕೆ ಅಪ್ರತಿಮ ಸೇವೆ ಸಲ್ಲಿಸಿದ ಪದ್ಯಾಣ ಗೋಪಾಲಕೃಷ್ಣ (ಪ.ಗೋ) ಅವರ ನೆನಪಿನಲ್ಲಿ ಏಕಂ ಪ್ರಕಾಶನ 'ಪ ಗೋ ಪ್ರಪಂಚ' ಪುಸ್ತಕ ಬಿಡುಗಡೆ ಸಮಾರಂಭ ಹಮ್ಮಿಕೊಂಡಿದೆ.

ಇದೇ ಶನಿವಾರ (ಏ 30) ಸಂಜೆ 5.30ಕ್ಕೆ ಬೆಂಗಳೂರು, ಚಾಮರಾಜಪೇಟೆ, ಪಂಪ ಮಹಾಕವಿ ರಸ್ತೆಯಲ್ಲಿರುವ, ಕನ್ನಡ ಸಾಹಿತ್ಯ ಪರಿಷತ್ ಆವರಣದ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಈ ಸಮಾರಂಭ ಆಯೋಜಿಸಲಾಗಿದೆ.

ಪ. ಗೋ ಪ್ರಪಂಚದ ಲೇಖಕ ಮತ್ತು ಪ.ಗೋ ಅವರಿಗೆ ಒಡನಾಡಿಯಾಗಿದ್ದ ಚಿದಂಬರಂ ಬೈಕಂಪಾಡಿ, ವಿಜ್ಞಾನ ಬರಹಗಾರ ಸುಧೀಂದ್ರ ಹಾಲ್ದೋಡ್ಡೆರಿ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ.

Ekam Prakashana releasing book on Padyana Gopalakrishna

ಸಾಹಿತಿ ಮತ್ತು ವೈದ್ಯರೂ ಆಗಿರುವ ಡಾ. ಎಂ ಬಿ ಮರಕಿಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಹಿರಿಯ ಪತ್ರಕರ್ತರಾದ ಕೆ ಸತ್ಯನಾರಾಯಣ ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ.

ಚಿದಂಬರಂ ಬೈಕಂಪಾಡಿ ಪ್ರಾಸ್ತವಿಕ ಭಾಷಣ ಮಾಡಲಿದ್ದು, ಸುಧೀಂದ್ರ ಹಾಲ್ದೋಡ್ಡೆರಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. 'ಪ ಗೋ ಪ್ರಪಂಚ' ಪುಸ್ತಕದ ಬೆಲೆ ರೂಪಾಯಿ 90.

ಪುಸ್ತಕದ ಸಾರಾಂಶ : ಮಂಗಳೂರಿನ ಹಿರಿಯ ಪತ್ರಕರ್ತ ಪದ್ಯಾಣ ಗೋಪಾಲಕೃಷ್ಣ (ಪ.ಗೋ) ಕುರಿತು ಅವರ ಒಡನಾಡಿಯಾಗಿದ್ದ ಕಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಅವರ ನುಡಿನಮನ.

ಪ.ಗೋ ಬದುಕು ಮತ್ತು ಬರಹಗಳನ್ನು ತೆರೆದಿಡುವುದರ ಜೊತೆಗೆ ಆಗಿನ ಪತ್ರಿಕೆಗಳ ಆದ್ಯತೆ ಮತ್ತು ಬದ್ದತೆಗಳ ಒಳನೋಟದ ಅವಲೋಕನ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Ekam Prakashana releasing book on Padyana Gopalakrishna 'Pa Go Prapancha'on April 30th at Kannada Sahitya Parishat premises in Bengaluru.
Please Wait while comments are loading...