ಅಂಧ ಮಕ್ಕಳ ಶಾಲೆಯ ವೆಬ್ ಸೈಟ್ ಉದ್ಘಾಟನೆ

Pandit Puttaraj Gawai
ಬೆಂಗಳೂರು, ಜೂ 22: ಅಂಧ ಹೆಣ್ಣು ಮಕ್ಕಳಿಗಾಗಿ ಉಚಿತ ವಸತಿ ಮತ್ತು ಸಂಗೀತ ಪಾಠಶಾಲೆ ನಡೆಸಿಕೊಂಡು ಬರುತ್ತಿರುವ ಪಂಡಿತ್ ಪುಟ್ಟರಾಜ ಗವಾಯಿ ಅಂಗವಿಕಲರ ಟ್ರಸ್ಟ್ ವೆಬ್ ಸೈಟ್ ಉದ್ಘಾಟನೆ ಮತ್ತು ಪುಸ್ತಕ ಬಿಡುಗಡೆ ಸಮಾರಂಭ ಹಮ್ಮಿಕೊಂಡಿದೆ. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಸಹಯೋಗದೊಂದಿಗೆ ನಡೆಯುವ ಈ ಕಾರ್ಯಕ್ರಮ ಶುಕ್ರವಾರ (ಜೂ 22) ಸಂಜೆ 5.30ಕ್ಕೆ ಆರಂಭವಾಗಲಿದೆ.

ಸಂಗೀತ ಪಾಠಶಾಲೆಯ ವೆಬ್ ಸೈಟ್ ಉದ್ಘಾಟನೆ, ವಿದುಷಿ ಶ್ರೀಮತಿ ಎಂ ಆರ್ ಇಂದಿರಾ ಅವರು ಬ್ರೈನ್ ಲಿಪಿಯಲ್ಲಿ ಬರೆದ ಕರ್ನಾಟಕ ಶಾಸ್ತ್ರೀಯ ಸಂಗೀತ ಜೂನಿಯರ್ ದರ್ಜೆಯ ಪುಸ್ತಕದ ಬಿಡುಗಡೆ ಈ ಸಮಾರಂಭದಲ್ಲಿ ನಡೆಯಲಿದೆ. ಅಂಧ ಹೆಣ್ಣು ಮಕ್ಕಳ ಉಚಿತ ವಸತಿ, ಸಂಗೀತ ಪಾಠಶಾಲೆಯ ಏಳಿಗೆಗಾಗಿ ವಿವಿಧ ರೀತಿಯ ಸಹಕಾರ ಹಾಗೂ ನೆರವು ನೀಡಿರುವ ಮಹನೀಯರಿಗೆ ಕೂಡಾ ಗೌರವ ಸಮರ್ಪಣೆ ನಡೆಯಲಿದೆ.

ಸರ್ಪಭೂಷಣ ಶಿವಯೋಗಿ ಮಠದ ಶ್ರೀ.ನಿ.ಪ್ರ ಡಾ.ಮಲ್ಲಿಕಾರ್ಜುನದೇವರ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದ್ದು. ಬೆಂಗಳೂರು ದೂರದರ್ಶನದ ನಿರ್ದೇಶಕರಾದ ಮಹೇಶ್ ಜೋಷಿಯವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಸಮಾರಂಭ ನಡೆಯುವ ಸ್ಥಳ
ಶ್ರೀ. ಶಿವರಾತ್ರಿ ರಾಜೇಂದ್ರ ಚಿಂತನ ಮಂಟಪ
ಜೆಎಸ್ಎಸ್ ವೃತ್ತ, ಮೊದಲನೇ ಮುಖ್ಯರಸ್ತೆ, 38ನೇ ಕ್ರಾಸ್,
ಎಂಟನೆ ಬ್ಲಾಕ್ ಜಯನಗರ,
ಬೆಂಗಳೂರು - 70.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+