ಕಾರ್ನಾಡರ ಆತ್ಮಕತೆ ಆಡಾಡತ ಆಯುಷ್ಯ ಲೋಕಾರ್ಪಣೆ
ಬೆಂಗಳೂರು,
ಆ.20: ಡಾ.ಗಿರೀಶ್ ಕಾರ್ನಾಡರ 'ಆಡಾಡತ ಆಯುಷ್ಯ' (ದ.ರಾ.ಬೇಂದ್ರೆ ಅವರ ಸಾಲುಗಳು) ಆತ್ಮಕತೆ ಇದೇ ಭಾನುವಾರ (ಆ.21) ಬೆಂಗಳೂರಿನ ರಿಲಯನ್ಸ್ ಟೈಮ್ ಔಟ್ ಮಳಿಗೆಯಲ್ಲಿ ಲೋಕಾರ್ಪಣೆಯಾಗಲಿದೆ. ಈಗಾಗಲೆ ಬಿಡುಗಡೆಗೊಂಡಿರುವ ಈ ಪುಸ್ತಕ ಮತ್ತೊಮ್ಮೆ ಬೆಂಗಳೂರಿನಲ್ಲಿ ಲೋಕಾರ್ಪಣೆಯಾಗುತ್ತಿದೆ. id="toptextpromo">ಕೃತಿಯನ್ನು
'ಪ್ರಜಾವಾಣಿ' ಸಂಪಾದಕ ಕೆ ಎನ್ ಶಾಂತಕುಮಾರ್ ಹಾಗೂ ಗಿರೀಶ್ ಕಾರ್ನಾಡ್ ಅವರು ಬಿಡುಗಡೆ ಮಾಡಲಿದ್ದಾರೆ. ಕಾರ್ನಾಡರ ಕೃತಿಯ ಜೊತೆಗೆ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ 'ಅಂತರಂಗದ ಮೃದಂಗ', ಬಿದರಹಳ್ಳಿ ನರಸಿಂಹಮೂರ್ತಿ ಅವರ 'ಹೊಳೆ ಮಕ್ಕಳು' ಹಾಗೂ ಲೋಹಿತ ನಾಯ್ಕರ್ ಅವರ 'ನಾ ಬದುಕಲಿಕ್ಕೆ ಒಲ್ಲೆ' ಕೃತಿಗಳು ಮತ್ತೊಮ್ಮೆ ಬಿಡುಗಡೆಯಾಗುತ್ತಿರುವುದು ವಿಶೇಷ. id='are-slot-1' class='oiad oi-axt oiadv'> id='top-searched-articles'>ಸ್ಥಳ:
ರಿಲಯನ್ಸ್ ಟೈಮ್‌ಔಟ್, ಕನ್ನಿಂಗ್‍ಹ್ಯಾಮ್ ರಸ್ತೆ, ಬೆಂಗಳೂರು-560052. ಸಮಯ ಬೆಳಗ್ಗೆ 11 ಗಂಟೆಗೆ. ಗಿರೀಶ್ ಕಾರ್ನಾಡರ 'ಆಡಾಡತ ಆಯುಷ್ಯ' ಕೃತಿ ವಿಮರ್ಶಕರ ಮೆಚ್ಚುಗೆ ಪಾತ್ರವಾಗಿದೆ. ಕನ್ನಡದ ಆತ್ಮಚರಿತ್ರೆಗಳಿಗೆ ಇದೊಂದು ರೀತಿಯ ಪ್ರಭುತ್ವ ತಂದುಕೊಟ್ಟಿದೆ ಎಂದು ಖ್ಯಾತ ವಿಮರ್ಶಕ ಡಾ.ಜಿ.ಎಸ್.ಆಮೂರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.











Click it and Unblock the Notifications