ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಮಿಡಿ ಕಾದಂಬರಿಕಾರ ಜೇಕಬ್ಸನ್ ಗೆ ಬೂಕರ್

By Shami
|
Google Oneindia Kannada News

Howard Jacobson
ಖ್ಯಾತ ಬ್ರಿಟಿಷ್ ಲೇಖಕ ಹೊವಾರ್ಡ್ ಜೇಕಬ್ಸನ್ ಗೆ ಈ ಬಾರಿಯ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಲಭಿಸಿದೆ. ಅವರು ಬರೆದ "ದಿ ಫಿಂಕ್ಲರ್ ಕೊಶ್ಚನ್" (The Frinkler Question) ಪುಸ್ತಕಕ್ಕಾಗಿ ಈ ಪ್ರಶಸ್ತಿ ಲಭ್ಯವಾಗಿದೆ. ಈ ಪ್ರಶಸ್ತಿಗಾಗಿ ಐದು ಜನರ ಪೈಪೋಟಿಯಿತ್ತು. ಅದರಲ್ಲಿ ಎರಡು ಬಾರಿ ಪ್ರಶಸ್ತಿ ಪಡೆದ ಪೀಟರ್ ಕೇರೇ ಮತ್ತು ಬುಕ್ಕಿಗಳ ಫೇವರೆಟ್ ಆಗಿದ್ದ ಟಾಮ್ ಮೆಕ್ ಕರ್ತಿ ಕೂಡ ಸೇರಿದ್ದರು. ಎಲ್ಲರನ್ನೂ ಬದಿಗೊತ್ತಿ ಜೇಕಬ್ಸನ್ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಬೂಕರ್ ಪ್ರಶಸ್ತಿಯ 42 ವರ್ಷದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹಾಸ್ಯ ಕಾದಂಬರಿಯೊಂದು ಪ್ರಶಸ್ತಿಗೆ ಆಯ್ಕೆಯಾಗಿದ್ದು. ಪ್ರಶಸ್ತಿ 50 ಸಾವಿರ ಪೌಂಡ್ ಮತ್ತು ಫಲಕವನ್ನು ಹೊಂದಿದೆ. 58 ವರ್ಷದ ಜೇಕಬ್ಸನ್ ತನ್ನ ವೃತ್ತಿ ಜೀವನದಲ್ಲಿ ಎರಡು ಬಾರಿ ಪ್ರಶಸ್ತಿ ಸುತ್ತಿಗೆ ಬಂದಿದ್ದರೂ ಬೂಕರ್ ಪ್ರಶಸ್ತಿ ಪಡೆಯುವಲ್ಲಿ ವಿಫಲರಾಗಿದ್ದರು.

ಹಾಸ್ಯ ಕಾದಂಬರಿಯನ್ನು ಬರೆಯುವುದನ್ನು ಮುಂದುವರಿಸುತ್ತೇನೆ. "ದಿ ಫಿಂಕ್ಲರ್ ಕೊಶ್ಚನ್" ಪುಸ್ತಕ ಮೂವರು ಪ್ರಾಯಕ್ಕೆ ಬಂದ ಜ್ಯೂ ಪುರುಷರ ನಡುವಣ ಆತ್ಮೀಯ ಸ್ನೇಹದ ಬಗ್ಗೆ ಬರೆದ ಪುಸ್ತಕ. ಈ ಮೂವರಲ್ಲಿ ಇಬ್ಬರು ಹೆಂಡತಿಯನ್ನು ಕಳೆದುಕೊಂಡವರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X