ಜು.27ರಂದು ಅಮೆರಿಕನ್ನಡತಿಯರ ಎರಡು ಪುಸ್ತಕ ಬಿಡುಗಡೆ

ಜುಲೈ ತಿಂಗಳ ಕೊನೆಯ ಭಾನುವಾರ (27ನೇ ತಾರೀಖು) ಬೆಳಗ್ಗೆ 10 ಗಂಟೆಗೆ ಬನಶಂಕರಿ ಎರಡನೇ ಹಂತದಲ್ಲಿರುವ ಸುಚಿತ್ರ ಫಿಲ್ಮ್ ಸೊಸೈಟಿಯ ಸಭಾಂಗಣದಲ್ಲಿ ಈ ಇಬ್ಬರ ಕೃತಿಗಳು ಬಿಡುಗಡೆಯಾಗಲಿವೆ. ಇವೆರಡರಲ್ಲಿ ತ್ರಿವೇಣಿ ಶ್ರೀನಿವಾಸ್ ಅವರ ಕೃತಿ ಅಮೆರಿಕದಲ್ಲಿ ಈಗಾಗಲೇ ಬಿಡುಗಡೆಯಾಗಿ ಜನಪ್ರಿಯತೆಯನ್ನು ಗಳಿಸಿದೆ.
"ತುಳಸಿಯಮ್ಮ" ಖ್ಯಾತಿಯ ತ್ರಿವೇಣಿ ಶ್ರೀನಿವಾಸರಾವ್ "ತುಳಸಿವನ"ದ ಘಮಲು ಕರ್ನಾಟಕದಾದ್ಯಂತ ಹಬ್ಬಿಸುವ ಹಂಬಲ ಹೊತ್ತಿದ್ದಾರೆ. ಅವರ ಈ ಪುಸ್ತಕದಲ್ಲಿನ ಅನೇಕ ಪ್ರಬಂಧಗಳು ದಟ್ಸ್‌ಕನ್ನಡ ಅಂತರ್ಜಾಲ ತಾಣದಲ್ಲಿ ಪ್ರಕಟವಾಗಿವೆ. ಮತ್ತೊಬ್ಬರು "ಸುಪ್ತದೀಪ್ತಿ" ಕಾವ್ಯನಾಮದ ಜ್ಯೋತಿ ಮಹಾದೇವ್ ತನ್ನ "ಭಾವಬಿಂಬ" ಕವನಸಂಕಲನಕ್ಕೆ ಕನ್ನಡಿ ಹಿಡಿಯಲಿದ್ದಾರೆ.
ನೀವೆಲ್ಲ ಅಲ್ಲಿಗೆ ಬರಬೇಕು- ಇವರಿಬ್ಬರ ಬೆನ್ನು ತಟ್ಟಲು, ಕೈ ಕುಲುಕಲು, ನೆತ್ತಿ ಸವರಿ ಹರಸಲು. ಒಂದೇ ವೇದಿಕೆಯಲ್ಲಿ ಇಬ್ಬರು ಸಾಹಿತ್ಯ ಸೋದರಿಯರ ಕಲ್ಪನೆಯ ನೌಕೆಗಳು ಓದುಗಭಿಯಾನ ಹೊರಡಲಿವೆ..
ಅಂದು ಇನ್ನೂ ಯಾರ್‍ಯಾರಿರುತ್ತಾರೆ? ಆ ವಿವರಗಳಿಗೆ ನಿಮ್ಮ ಕೌತುಕದ ಮರಿ ಗರಿಗೆದರಿ ಕಾದಿರಲಿ. ನೀವೂ ಬನ್ನಿ ನಿಮ್ಮ ಗೆಳೆಯರನ್ನೂ ಕರೆತನ್ನಿ.
ಮತ್ತೊಮ್ಮೆ ಪುಸ್ತಕಗಳು ಬಿಡುಗಡೆಯಾಗುವ ಸ್ಥಳ ಮತ್ತು ಸಮಯವನ್ನು ನಿಮ್ಮ ಡೈರಿಯಲ್ಲಿ ಗುರುತುಹಾಕಿಕೊಳ್ಳಿ.
ಸ್ಥಳ : ಸುಚಿತ್ರ ಫಿಲ್ಮ್ ಸೊಸೈಟಿ, 36, 9ನೇ ಮುಖ್ಯಬೀದಿ ಬಿ.ವಿ.ಕಾರಂತ ರಸ್ತೆ, ಬನಶಂಕರಿ ಎರಡನೇ ಹಂತ, ಬೆಂಗಳೂರು - 560 070.
ದಿನಾಂಕ : 27ನೇ ಜುಲೈ 2008 (ಭಾನುವಾರ)
ಸಮಯ : ಬೆಳಿಗ್ಗೆ 10 ಗಂಟೆಗೆ.












Click it and Unblock the Notifications