ಏ.27ರಂದು ದುಂಡಿರಾಜ್ ಅವರ ಕೃತಿ ಬಿಡುಗಡೆ

ಈ ಪುಸ್ತಕವನ್ನು ಅಂಕಿತ ಪುಸ್ತಕ ಪ್ರಕಾಶನ ಪ್ರಕಟಿಸಿದ್ದು, ಇದು ಅದರ 266ನೇ ಪ್ರಕಟಣೆ. ಈ ಕೃತಿಯನ್ನು ವಿಜಯ ಕರ್ನಾಟಕ ದಿನಪತ್ರಿಕೆಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರು ಬೆಳಿಗ್ಗೆ 10.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಿದ್ದಾರೆ.
ಖ್ಯಾತ ಹಾಸ್ಯ ಸಾಹಿತಿ ಎಂ.ಎಸ್. ನರಸಿಂಹಮೂರ್ತಿ ಅವರು ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುತ್ತಿದ್ದಾರೆ. ಸಂಶೋಧಕ ಶ್ರೀನಿವಾಸ್ ಹಾವನೂರು ಅವರು ಅಧ್ಯಕ್ಷತೆವಹಿಸಲಿದ್ದಾರೆ. ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಬೆನ್ನುಡಿ ಬರೆದಿದ್ದಾರೆ.
ದುಂಡಿರಾಜ್, ಭಟ್, ನರಸಿಂಹಮೂರ್ತಿ ಮೊದಲಾದವರು ಮಾತುಗಳ ಮುಖಾಂತರವೂ ಹಾಸ್ಯ ರಸದೌತಣ ಬಡಿಸಲಿದ್ದಾರೆಂದು ವಿಶೇಷವಾಗಿ ಹೇಳಬೇಕಾಗಿಲ್ಲ. ಪುಸ್ತಕ ಕೊಂಡು ಹಾಸ್ಯ ಸವಿಯಬಯಸುವ ಪುಸ್ತಕ ಪ್ರೇಮಿಗಳಿಗೆ ಸ್ವಾಗತ.
ಪುಸ್ತಕ : ಬಾರಯ್ಯ ಲಂಬೋ-ದರ
ಪ್ರಕಟಣೆ : ಅಂಕಿತ ಪುಸ್ತಕ ಪ್ರಕಾಶನ
ಸ್ಥಳ : ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ನಂ.6, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಬೆಂಗಳೂರು - 560 004.
ದಿನಾಂಕ : 27.04.2008
ಸಮಯ : ಬೆಳಿಗ್ಗೆ 10.30












Click it and Unblock the Notifications