ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ವಿಶೇಷ ಸಮಾಚಾರ ಕನ್ನಡ ಪುಸ್ತಕ ಪ್ರೇಮಿಗಳಿಗೆ ಮಾತ್ರ!

By Staff
|
Google Oneindia Kannada News


ಬೆಂಗಳೂರು, ಡಿ.17 : ಯೂಲೋಪ್ ಸಂಸ್ಥೆಯು ಐಬಿಎಚ್ ಪ್ರಕಾಶನದ ಸಹಕಾರದೊಂದಿಗೆ ಕನ್ನಡ ಸಾಹಿತ್ಯಾಸಕ್ತರಿಗಾಗಿ ಅಂತರ್ಜಾಲತಾಣ ವನ್ನು ಅಭಿವೃದ್ಧಿಪಡಿಸಿದೆ.

ಕನ್ನಡ ಪುಸ್ತಕ ಪ್ರಿಯರಿಗೆ ಮತ್ತು ಸಾಹಿತ್ಯಾಸಕ್ತರಿಗೆಂದೇ ಪ್ರಥಮ ಬಾರಿಗೆ ಯೂಲೊಪ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಈ ಅಂತರ್ಜಾಲತಾಣದಲ್ಲಿ 2000ಕ್ಕೂ ಅಧಿಕ ಕನ್ನಡ ಪುಸ್ತಕಗಳು ಲಭ್ಯ. ಇಲ್ಲಿ ಕಥೆ, ಕಾದಂಬರಿ, ಕವನ, ನಾಟಕ, ಮಕ್ಕಳ ವಿಭಾಗ, ಹಾಸ್ಯ ಸಾಹಿತ್ಯ, ಇತಿಹಾಸ, ಧಾರ್ಮಿಕ, ಆರೋಗ್ಯ, ಪ್ರಮುಖರ ಆತ್ಮ ಚರಿತ್ರೆಗಳು ಹೀಗೆ ವಿವಿಧ ವರ್ಗ ಮತ್ತು ಉಪ-ವರ್ಗಗಳಲ್ಲಿ ವಿಭಾಗಿಸಲ್ಪಟ್ಟ ಕನ್ನಡ ಪುಸ್ತಕಗಳು ಸಿಗುತ್ತವೆ. ವಿವಿಧ ವೃತ್ತಿಯಲ್ಲಿರುವವರಿಗೂ ಮತ್ತು ಎಲ್ಲಾ ವಯೋಮಾನದವರಿಗೂ ಒಂದಲ್ಲ ಒಂದು ಕಾರಣಕ್ಕೆ ಇಲ್ಲಿನ ಪುಸ್ತಕಗಳು ಉಪಯುಕ್ತವಾಗಲಿವೆ ಎಂದು ಸಂಸ್ಥೆ ತಿಳಿಸಿದೆ.

ಇದರೊಂದಿಗೆ ಸಾಹಿತ್ಯಾಸಕ್ತರಿಗಂತೂ ಸಾಹಿತ್ಯದ ಎಲ್ಲಾ ಮಾಹಿತಿಗಳೂ ಇಲ್ಲಿ ಲಭ್ಯವಾಗಲಿವೆ. ಹೊಸ ಕೃತಿಗಳ ಬಿಡುಗಡೆ ಸಮಾರಂಭಗಳ ವಿವರಗಳನ್ನೊಳಗೊಂಡಂತೆ ಸಾಹಿತಿಗಳ ಜೀವನ ಪರಿಚಯವೂ ಇಲ್ಲಿದೆ. 'ಓದುಗರ ವೇದಿಕೆ'ಯ ಮುಖಾಂತರ ಲೇಖಕರೊಂದಿಗೆ ಅವರ ಕೃತಿಗಳ, ಲೇಖನಗಳ ಬಗ್ಗೆ ಚರ್ಚಿಸಬಹುದು. ಓದುಗರು ಪುಸ್ತಕಗಳನ್ನು ಕೊಳ್ಳುವ ಮೊದಲು ಪುಸ್ತಕದ ಬಗೆಗಿನ ಸಂಕ್ಷಿಪ್ತ ವಿವರಗಳನ್ನು ಇಲ್ಲಿ ಪಡೆಯಬಹುದು. ಪ್ರಪಂಚದ ಮೂಲೆಮೂಲೆಗಳಲ್ಲಿ ಇರುವ ಪುಸ್ತಕಾಭಿಮಾನಿಗಳಿಗೆ ಕನ್ನಡ ಪುಸ್ತಕಗಳನ್ನು ತಲುಪಿಸಲು ಈ ಅಂತರ್ಜಾಲದ ಮೂಲಕ ಪ್ರಯತ್ನಿಸಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X