ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಜಾನಕಿ ಕಾಲಂ’ನಿಂದ ‘ಪೂರ್ವಪಶ್ಚಿಮ’ದ ತನಕ...

By Staff
|
Google Oneindia Kannada News

ಮಾಸಾಂತ್ಯದಲ್ಲಿ ಒಂದು ಚೆಂದದ ಕಾರ್ಯಕ್ರಮವನ್ನು ಛಂದ ಪುಸ್ತಕ ಆಯೋಜಿಸಿದೆ. ಹೊಸ ಲೇಖಕರನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿರುವ ಛಂದ ಪುಸ್ತಕ, ಈ ವರ್ಷವೂ ಮೂರು ಪುಸ್ತಕಗಳನ್ನು ಪ್ರಕಟಿಸುತ್ತಿದೆ.

ನಗರದ ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌ ಸಭಾಂಗಣದಲ್ಲಿ ಭಾನುವಾರ(ಜ.29) ಬೆಳಗ್ಗೆ 10ಕ್ಕೆ ಚೆಂದದ ಮೂರು ಪುಸ್ತಕಗಳು ಓದುಗರ ಮುಂದೆ ನಳನಳಿಸಿ ನಿಲ್ಲಲಿವೆ.

ಈ ಬಾರಿಯ ಛಂದ ಪುಸ್ತಕ ಬಹುಮಾನವನ್ನು ಪಡೆದ ಅಲಕ ತೀರ್ಥಹಳ್ಳಿಯವರ ಕಥಾಸಂಕಲನ ‘ಈ ಕತೆಗಳ ಸಹವಾಸವೇ ಸಾಕು’, ಎಂ. ಆರ್‌. ದತ್ತಾತ್ರಿಯವರ ದಟ್ಸ್‌ ಕನ್ನಡದ ಅಂಕಣಗಳ ಸಂಗ್ರಹ ‘ಪೂರ್ವ ಪಶ್ಚಿಮ’ ಮತ್ತು ಜಾನಕಿಯವರ ‘ಹಾಯ್‌ು ಬೆಂಗಳೂರು’ ಪತ್ರಿಕೆಯ ಅಂಕಣಗಳ ಸಂಗ್ರಹ (ದಟ್ಸ್‌ಕನ್ನಡದಲ್ಲಿ ‘ತೆರೆದ ಬಾಗಿಲು’) ‘ಜಾನಕಿ ಕಾಲಂ’- ಈ ಮೂರೂ ಪುಸ್ತಕಗಳೂ ಲೋಕಾರ್ಪಣೆಗೊಳ್ಳಲಿವೆ.

ಪುಸ್ತಕಗಳ ಬಗ್ಗೆ ವಿಕ್ರಮ ವಿಸಾಜಿ, ಅಶೋಕ ಹೆಗಡೆ ಮತ್ತು ಜಿ.ಬಿ. ಹರೀಶ್‌ ಮಾತನಾಡಲಿದ್ದಾರೆ. ಕಥೆಗಾರ ಜಯಂತ ಕಾಯ್ಕಿಣಿಯವರು ಮುಖ್ಯ ಅತಿಥಿಗಳಾಗಿ ಸಮಾರಂಭದಲ್ಲಿ ಪಾಲ್ಗೊಳ್ಳುವರು.

ಛಂದ ಪುಸ್ತಕದ ಪರವಾಗಿ ಸಹೃದಯರಿಗೆ ಎಂದಿನಂತೆಯೇ ಪ್ರೀತಿಯ ಸ್ವಾಗತವನ್ನು ವಸುಧೇಂದ್ರ ಕೋರಿದ್ದಾರೆ.

ನಿಮ್ಮ ಗಮನಕ್ಕೆ :

ಪುಸ್ತಕ ಪ್ರಸವದ ದಿನಾಂಕ : ಭಾನುವಾರ (ಜ.29) ಬೆಳಕ್ಕೆ 10ಕ್ಕೆ

ಸ್ಥಳ :

ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌,
ಬಿ.ಪಿ. ವಾಡಿಯಾ ರಸ್ತೆ,
ಬಸವನಗುಡಿ,
ಬೆಂಗಳೂರು

ಇನ್ನಷ್ಟು ವಿವರ ಬೇಕಾದ್ರೆ ಸಂಪರ್ಕಿಸಿ :
[email protected]

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X