‘ವೇದಾಂತ ಸಂವತ್ಸರ’ : ಸುಬ್ರಾಯಶರ್ಮರ ಹೊಸ ಕೃತಿ
ರಾಜ್ಯಪಾಲರಿಂದ ಆ.28ರಂದು ರಾಜಭವನದಲ್ಲಿ ಪುಸ್ತಕ ಬಿಡುಗಡೆ
ನಗರದ ರಾಜಭವನದ ಬಾಕ್ವೆಂಟ್ ಹಾಲ್‌ನಲ್ಲಿ ಅಂದು ಸಂಜೆ 4ಗಂಟೆಗೆ ಏರ್ಪಡಿಸಲಾಗಿರುವ ಸಮಾರಂಭದಲ್ಲಿ, ರಾಜ್ಯಪಾಲ ಟಿ.ಎನ್.ಚತುರ್ವೇದಿ ಪುಸ್ತಕವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಶತಾವಧಾನಿ ಡಾ.ಆರ್.ಗಣೇಶ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ವಿದ್ವಾನ್ ಮತ್ತೂರು ಅಶ್ವಥ ನಾರಾಯಣ ಅವಧಾನಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಶ್ರೀ ನಿತ್ಯಾನಂದ ಪ್ರಕಾಶನ ಪುಸ್ತಕವನ್ನು ಹೊರತಂದಿದೆ.
ಪುಸ್ತಕ ಮತ್ತು ಸಮಾರಂಭದ ಬಗ್ಗೆ ಹೆಚ್ಚಿನ ವಿವರಗಳಿಗೆ ಕೆ.ಜಿ.ಎಸ್ ಶರ್ಮ(ಮೊಬೈಲ್ ಸಂಖ್ಯೆ -98862 81622), ಸಿ.ಎ.ಎಸ್.ಮೂರ್ತಿ(ಮೊಬೈಲ್ ಸಂಖ್ಯೆ -98860 51222)ರನ್ನು ಸಂಪರ್ಕಿಸಬಹುದು ಎಂದು ನಿತ್ಯಾನಂದ ಪ್ರಕಾಶನದ ಬಿ.ಎನ್.ನಟರಾಜ್ ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications