ಮಣಿಕಾಂತ್‌ರ ‘ಈ ಗುಲಾಬಿ..’ ನಿಮಗಾಗಿ ಕಾಯುತ್ತಿದೆ!
ರವಿ ಬೆಳಗೆರೆಯಿಂದ ಪ್ರೇಮಪತ್ರಗಳ ಗುಚ್ಛ ಭಾನುವಾರ ಲೋಕಾರ್ಪಣೆ.
ನಗರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್(ಬಿ.ಪಿ.ವಾಡಿಯ ರಸ್ತೆ, ಬಸವನಗುಡಿ)ನಲ್ಲಿ ಭಾನುವಾರ ಬೆಳಗ್ಗೆ 11ಕ್ಕೆ ಪುಸ್ತಕ ಬಿಡುಗಡೆ ಸಮಾರಂಭ ಆರಂಭಗೊಳ್ಳಲಿದೆ. ‘ಹಾಯ್ ಬೆಂಗಳೂರ್’ ಪತ್ರಿಕೆಯಲ್ಲಿ ‘ಲವಲವಿಕೆ’ ಅಂಕಣದ ಮೂಲಕ ಪ್ರೀತಿಯನ್ನು ಉಣಬಡಿಸುತ್ತಿರುವ ಪತ್ರಕರ್ತ ರವಿ ಬೆಳಗೆರೆ, ಪುಸ್ತಕ ಬಿಡುಗಡೆ ಮಾಡುವರು.
‘ವಿಜಯ ಕರ್ನಾಟಕ’ ಸಂಪಾದಕ ವಿಶ್ವೇಶ್ವರ ಭಟ್ ಅಧ್ಯಕ್ಷತೆ ವಹಿಸುವರು. ‘ಈ ಗುಲಾಬಿ.. ’ ಬಗ್ಗೆ ಸುಧಾ ಶರ್ಮ ಚವತ್ತಿ ಮಾತನಾಡುವರು. ಸಮಾರಂಭಕ್ಕೆ ಎಲ್ಲರಿಗೂ ಪ್ರೀತಿಯ ಸ್ವಾಗತ. ಅದರಲ್ಲೂ ಗುಲಾಬಿ ಪ್ರಿಯರಿಗೆ, ಪ್ರೀತಿಗಾಗಿ ಹಂಬಲಿಸುವ ಮಂದಿಗೆ ವಿಶೇಷ ಸ್ವಾಗತ.
ಸಮಾರಂಭದಲ್ಲಿ ಪ್ರೇಮಪತ್ರಗಳ ಪುಸ್ತಕ ಕೈಯಲ್ಲಿಡಿದು, ನೀವು ಪ್ರೇಮಗೀತೆಗಳನ್ನೂ ಆಲಿಸಬಹುದು! ಅಪ್ಪಗೆರೆ ತಿಮ್ಮರಾಜು, ಉಪಾಸನಾ ಮೋಹನ್, ಪಂಚಮ್ ಹಳಿಬಂಡಿ, ಅರ್ಚನಾ ಉಡುಪ, ಮತ್ತಿತರರು ಪ್ರೇಮಗೀತೆಗಳನ್ನು ಹಾಡಿ ರಂಜಿಸಲಿದ್ದಾರೆ.
ಕ್ಯಾಸೆಟ್ : ಇದೇ ಸಂದರ್ಭದಲ್ಲಿ ‘ಬೆಳ್ಳಕ್ಕಿ ಸಾಲು ’ ಎಂಬ ಧ್ವನಿ ಸುರಳಿಯಾಂದು ಬಿಡುಗಡೆಗೊಳ್ಳಲಿದೆ. ತುಳಸೀತನಯ ಸಾಹಿತ್ಯ, ಉಪಾಸನಾ ಮೋಹನ್ ಸಂಗೀತದ ಈ ಧ್ವನಿ ಸುರಳಿಯನ್ನು ಆಕಾಶ್ ಆಡಿಯೋ ಹೊರತಂದಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications