ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಗಮೇಶರ ‘ನಾಡು-ನುಡಿ-ಜನ’ ಪುಸ್ತಕ ಬಿಡುಗಡೆ

By Staff
|
Google Oneindia Kannada News

ಬೆಂಗಳೂರು : ಲೇಖಕ ಸಂಗಮೇಶ ಮೆಣಸಿನಕಾಯಿ ಅವರ ‘ನಾಡು-ನುಡಿ-ಜನ’ ಲೇಖನಗಳ ಸಂಕಲನ ಶನಿವಾರ(ಡಿ. 31) ಬಿಡುಗಡೆಯಾಗಲಿದೆ.

ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟಗೊಂಡ ಸಂಗಮೇಶ ಅವರ ಲೇಖನಗಳಿಗೆ, ಈಗ ಪುಸ್ತಕ ರೂಪ ಲಭಿಸಿದೆ. ನಗರದ ಬಸವ ಭವನದಲ್ಲಿ ಬೆಂಗಳೂರು ಮಹಾನಗರ ಪಾಲಿಕೆ ಉಪ ಆಯುಕ್ತ ಹಾಗೂ ಸಾಹಿತಿ ಮನುಬಳಿಗಾರ್‌ ಪುಸ್ತಕ ಬಿಡುಗಡೆ ಮಾಡುವರು.

ಸಿವಿಜಿ ಪಬ್ಲಿಕೇಶನ್ಸ್‌ ಹೊರತರುತ್ತಿರುವ ಈ ಕೃತಿಯ ಕುರಿತು, ಖ್ಯಾತ ಸಾಹಿತಿ ಹಾಗೂ ಅಂಕಣಕಾರ ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ ಮಾತನಾಡುವರು. ಗಾಯಕ-ಸಂಗೀತ ನಿರ್ದೇಶಕ ಉಪಾಸನಾ ಮೋಹನ್‌, ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಖ್ಯಾತ ಚಿತ್ರನಟ ಜಿ.ಕೆ. ಶ್ರೀನಿವಾಸಮೂರ್ತಿ ಅಧ್ಯಕ್ಷತೆ ವಹಿಸುವರು.

ಸಂಗೀತ ಗೋಷ್ಠಿ : ಉಪಾಸನಾ ಸಂಗೀತ ಶಾಲೆಯ ವಿದ್ಯಾರ್ಥಿಗಳಾಗಿರುವ ಪತ್ರಕರ್ತರಾದ ವಿಕಾಸ ನೇಗಿಲೇಣಿ, ಗಾಮಧಾಳು ಶ್ರೀಕಂಠ, ಚೇತನ್‌ನಾಡಿಗೇರ್‌, ಎನ್‌.ಆರ್‌.ಬಡಿಗೇರ್‌, ಸುಮಾರೈ ಮತ್ತು ಪುಟಾಣಿ ಹಿರಣ್ಮಯಿ ಮತ್ತಿತರರು ಭಾವಗೀತೆಗಳನ್ನು ಹಾಡಲಿದ್ದಾರೆ.

ಸ್ಥಳ : ‘ಅರಿವಿನ ಮನೆ’, ಬಸವ ಭವನ, ಬಸವೇಶ್ವರ ರಸ್ತೆ(ಚಾಲುಕ್ಯ ಹೋಟೆಲ್‌ ಸಮೀಪ), ಬೆಂಗಳೂರು.

ಸಮಯ : ಡಿಸೆಂಬರ್‌ 31, ಶನಿವಾರ, ಸಂಜೆ 6ಗಂಟೆ

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X