ಭಾನುವಾರ ನಗರದ ವಿವಿಧೆಡೆ 7ಪುಸ್ತಕ ಪ್ರಸವಗಳು
ಬೆಂಗಳೂರು : ಪುಸ್ತಕ ಪ್ರಿಯರ ಓದುವ ದಾಹಕ್ಕೆ ಮುಂದಿನ ವಾರ ಕೊರತೆಯಾಗುವುದಿಲ್ಲ! ವಾರಾಂತ್ಯದ ಭಾನುವಾರ ನಗರದ ವಿವಿಧೆಡೆ ಏಳು ಪುಸ್ತಕಗಳು ಲೋಕಾರ್ಪಣೆಗೊಳ್ಳುತ್ತಿವೆ.
ಸುಮುಖ ಪ್ರಕಾಶನ ಹಾಗೂ ಅಂಕಿತ ಪ್ರಕಾಶನದ ಏಳು ಪುಸ್ತಕಗಳ ಬಿಡುಗಡೆಗೆ ಕ್ಷಣಗಣನೆ ಆರಂಭಗೊಂಡಿದೆ. ಅವುಗಳ ವಿವರ ಇಲ್ಲಿದೆ ;
ಪುಸ್ತಕ ಪ್ರಸವ ಒಂದು : ಸುಮುಖ ಪ್ರಕಾಶನ ಸಂಸ್ಥೆಯ ಎರಡನೇ ವಾರ್ಷಿಕೋತ್ಸವ ಹಾಗೂ ಆರು ಪುಸ್ತಕಗಳು ಬಿಡುಗಡೆ ಸಮಾರಂಭದಲ್ಲಿ ಹಂ.ಪ. ನಾಗರಾಜಯ್ಯ ಹಾಗೂ ಡಾ। ಸಾ.ಶಿ. ಮರುಳಯ್ಯ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಸ್ಥಳ : ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್‌ನ ಪಂಪ ಸಭಾಂಗಣ
ಸಮಯ : ಸಂಜೆ 5.30
ಬಿಡುಗಡೆಯಾಗಲಿರುವ ಪುಸ್ತಕಗಳು :
ಪುಸ್ತಕ ಪ್ರಸವ ಎರಡು : ವಿಜಯಕರ್ನಾಟಕ ಪತ್ರಿಕೆಯ ಎಚ್.ಡುಂಡಿರಾಜ್ ಅವರ ಅಂಕಣ ಬರಹ ‘ಮಾತು ಕ(ವಿ)ತೆ’ ಅದೇ ಹೆಸರಲ್ಲಿ ಪುಸ್ತಕ ರೂಪದಲ್ಲಿ ಅನಾವರಣಗೊಳ್ಳುತ್ತಿದೆ.
ಸ್ಥಳ : ಬಸವನಗುಡಿಯ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣ
ಸಮಯ : ಬೆಳಗ್ಗೆ 10.30ಕ್ಕೆ
ಮುಖ್ಯ ಆಹ್ವಾನಿತರು : ಎಸ್. ಷಡಕ್ಷರಿ, ರಮಣಶ್ರೀ ಗ್ರೂಪ್ಸ್‌ನ ವ್ಯವಸ್ಥಾಪಕ ನಿರ್ದೇಶಕರು .,
ವಿಶ್ವೇಶ್ವರ ಭಟ್, ಪತ್ರಕರ್ತ., ಪ್ರೊ। ಅ.ರಾ. ಮಿತ್ರ, ಹಾಸ್ಯ ಸಾಹಿತಿ.
(ಇನ್ಫೋ ವಾರ್ತೆ)












Click it and Unblock the Notifications