‘ಈ ಅಂತರ್ಜಾಲ ಯುಗದಲ್ಲೂ ಪುಸ್ತಕಗಳು ಪ್ರಸ್ತುತ’
ಶಿವಮೊಗ್ಗ : ಸಿರಿಗನ್ನಡ ಪುಸ್ತಕ ಮನೆಯ ಸಹಯೋಗದೊಂದಿಗೆ, ಕರ್ನಾಟಕ ಪುಸ್ತಕ ಪ್ರಾಧಿಕಾರವು ಶಿವಮೊಗ್ಗದಲ್ಲಿ ತನ್ನ ಮಾರಾಟ ಮಳಿಗೆಯನ್ನು ಆರಂಭಿಸಿದೆ.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಬಿ.ಎ.ವಿವೇಕ ರೈ ಮಳಿಗೆ ಉದ್ಘಾಟಿಸಿ ಮಾತನಾಡುತ್ತ, ಅಂತರ್ಜಾಲ ಬಂದ ನಂತರವೂ ಪುಸ್ತಕ ಸಂಸ್ಕೃತಿಗೆ ಯಾವುದೇ ಧಕ್ಕೆಯಾಗಿಲ್ಲ ಎಂದರು.
ಮಾಹಿತಿ ತಂತ್ರಜ್ಞಾನ ಯಾವುದೇ ವಿಷಯಗಳ ಬಗ್ಗೆ ಮಾಹಿತಿ ನೀಡಬಲ್ಲದು. ಆದರೆ ಪುಸ್ತಕಗಳು ಜ್ಞಾನವನ್ನು ನೀಡಬಲ್ಲವು. ಮಾಹಿತಿ ತಂತ್ರಜ್ಞಾನವು, ಜನರನ್ನು ಮಾಹಿತಿಯ ಗುಲಾಮರನ್ನಾಗಿಸಿದೆ. ಆದರೆ ಪುಸ್ತಕಗಳು ಓದುಗರನ್ನು, ಸಮಸ್ಯೆಗಳ ಬಗ್ಗೆ ತೀವ್ರ ಕಾಳಜಿಯಿಂದ ಯೋಚಿಸುವಂತೆ ಮಾಡಿವೆ ಎಂದು ಅಭಿಪ್ರಾಯಪಟ್ಟರು.
ಓದುಗರು ಮತ್ತು ಲೇಖಕರ ಮಧ್ಯೆ ಮುಖಾಮುಖಿ ಸಂವಾದ ಏರ್ಪಡುವುದು ಕೇವಲ ಪುಸ್ತಕಗಳಿಂದ ಸಾಧ್ಯ. ಆ ಕಾರಣದಿಂದಲೇ ಮಾಹಿತಿ ತಂತ್ರಜ್ಞಾನ ಯುಗದಲ್ಲೂ, ಪುಸ್ತಕ ಸಂಸ್ಕೃತಿ ಹೆಚ್ಚು ಪ್ರಸ್ತುತ ಎನಿಸಿಕೊಂಡಿದೆ ಎಂದು ಹೇಳಿದರು.
(ಇನ್ಫೋ ವಾರ್ತೆ)












Click it and Unblock the Notifications