ಕೇಂಬ್ರಿಜ್ ಪ್ರಕಾಶನದಿಂದ‘ಮಾತನಾಡುವ ನಿಘಂಟು’
ಬೆಂಗಳೂರು : ವಿಶ್ವದ ಅತ್ಯಂತ ಹಳೆಯ ಪ್ರಕಾಶನ ಸಂಸ್ತೆ ಎಂದೇ ಹೆಸರಾಗಿರುವ ಕೇಂಬ್ರಿಜ್ ವಿಶ್ವವಿದ್ಯಾಲಯದ ಪ್ರಕಾಶನ ವಿಭಾಗವು ಮಾತನಾಡುವ ನಿಘಂಟುಗಳ ಸರಣಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಕೇಂಬ್ರಿಜ್ ಕಲಿಕಾ ನಿಘಂಟಿನ ಭಾರತೀಯ ಮುದ್ರಣವನ್ನು ಬುಧವಾರ ಭಾರತ, ಶ್ರೀಲಂಕಾ, ನೇಪಾಳ, ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ಮಾಲ್ಡೀವ್ಸ್‌ಗಳಿಗೆ ಬಿಡುಗಡೆ ಮಾಡಲಾಯಿತು.
ಟಾಕಿಂಗ್ ಡಿಕ್ಷ್‌ನರಿ ಎಂದೇ ಹೆಸರಿಸಲಾಗಿರುವ ಈ ಶ್ರೇಣಿಯಲ್ಲಿ ಪುಸ್ತಕಗಳ ಜೊತೆಗೆ ಸಿಡಿ ರೂಪದ ನಿಘಂಟನ್ನು ಸಹ ನೀಡಲಾಗವುದು. ಈ ಸಿಡಿಗಳಲ್ಲಿ ಪ್ರತಿ ಪದದ ಉಚ್ಚಾರಣೆ, ಅದಕ್ಕೆ ಸೂಕ್ತವಾದ ಚಿತ್ರ ಹಾಗೂ ಅರ್ಥವನ್ನು ನೀಡಲಾಗಿದೆ. ಈ ಸಿಡಿ ರಾಮ್ ಪರಸ್ಪರ ಸಂವಾದ ರೂಪದ್ದಾಗಿದೆ.
ಇಂಗ್ಲಿಷ್ ವ್ಯಾಕರಣದ ಬಗ್ಗೆ ಕೂಡ ಇದರಲ್ಲಿ ವಿವರಣೆ ನೀಡಲಾಗಿದೆ. ಪುಸ್ತಕ ಹಾಗೂ ಸಿಡಿ ರೂಪದಲ್ಲಿ ಲಭ್ಯವಿರುವ ಲರ್ನರ್ ನಿಘಂಟಿನ ಬೆಲೆ 275 ರುಪಾಯಿಗಳು. ಕೇವಲ ಪುಸ್ತಕವಷ್ಟೇ ಬೇಕಾದಲ್ಲಿ ಅದರ ಬೆಲೆ 175. ಕೇಂಬ್ರಿಜ್ ಇಂಟರ್‌ನ್ಯಾಷನಲ್ ಡಿಕ್ಷ್‌ನರಿ ಹಾಗೂ ಸಿಡಿಯ ಬೆಲೆ 395. ಪುಸ್ತಕಕ್ಕೆ 350 ಆಗಿದೆ.
ಕಲಿಕಾ ನಿಘಂಟು ಹೊಸದಾಗಿ ಇಂಗ್ಲಿಷ್ ಕಲಿಯುತ್ತಿರುವವರಿಗೆ ತುಂಬಾ ಉಪಯುಕ್ತ. ಅಂದಹಾಗೆ ಕೇಂಬ್ರಿಜ್ ಅಮೆರಿಕನ್ ಇಂಗ್ಲಿಷ್ ನಿಘಂಟು ಹಾಗೂ ಸಿಡಿ ಸಹ ಸಿದ್ಧವಾಗಿದ್ದು, ಇದರ ಬೆಲೆ 450.
ಮುಖಪುಟ / ಸಾಹಿತ್ಯ ಸೊಗಡು












Click it and Unblock the Notifications