ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತ್ತೇದಾರಿಕಾದಂಬರಿಕಾರ ನರಸಿಂಹಯ್ಯನವರ ಆತ್ಮಕಥೆ ಬಿಡುಗಡೆ

By Oneindia Staff
|
Google Oneindia Kannada News

ಬೆಂಗಳೂರು : ಕನ್ನಡದ ಓದುಗರಿಗೆ ಪತ್ತೇದಾರಿ ಸಾಹಿತ್ಯದ ಹುಚ್ಚು ಹಿಡಿಸಿದ ಖ್ಯಾತಿಯ ಹಿರಿಯ ಪತ್ತೇದಾರಿ ಕಾದಂಬರಿಕಾರ ಎನ್‌.ನರಸಿಂಹಯ್ಯ ಅವರ ಆತ್ಮಕಥೆ ‘ನನ್ನ ನೋವು ನನ್ನ ನಲಿವು’ ಶುಕ್ರವಾರ ನಗರದಲ್ಲಿ ಬಿಡುಗಡೆಯಾಯಿತು.

ಬೆಂಗಳೂರು ಪ್ರೆಸ್‌ಕ್ಲಬ್‌ ಆವರಣದಲ್ಲಿ ಶುಕ್ರವಾರ ನಡೆದ ಸರಳ ಕಾರ್ಯಕ್ರಮದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯ ಪ್ರೊ.ಟಿ.ಶಿವಣ್ಣ ಅವರು ನರಸಿಂಹಯ್ಯನವರ ಆತ್ಮಕಥೆಯನ್ನು ಬಿಡುಗಡೆ ಮಾಡಿದರು. ಕನ್ನಡದ ಓದುಗರಿಗೆ ವಾಚನಾಭಿರುಚಿಯನ್ನು ಮೂಡಿಸಿದ ಗರಿಮೆ ನರಸಿಂಹಯ್ಯನವರಿಗೆ ಸಲ್ಲುತ್ತದೆ ಎಂದು ಶಿವಣ್ಣ ಬಣ್ಣಿಸಿದರು.

ಆತ್ಮಕಥೆಯ ಬಿಡುಗಡೆಯ ಸಂಭ್ರಮ-ಮುಜುಗರದಲ್ಲಿದ್ದ ಲೇಖಕ ನರಸಿಂಹಯ್ಯನವರು ತಮ್ಮ ಬದುಕಿನ ಹಿನ್ನೋಟದತ್ತ ನೋಟ ಹಾಯಿಸಿದರು. ಕೇವಲ 4 ನೇ ತರಗತಿವರೆಗೆ ಕಲಿತಿದ್ದರೂ, ಒಟ್ಟು 520 ಪುಸ್ತಕ ಬರೆದಿದ್ದೇನೆ. ಇದೆಲ್ಲ ಸಾಧ್ಯವಾದದ್ದು ಕನ್ನಡದ ಅಭಿಮಾನಿಗಳಿಂದ ಎಂದು ನರಸಿಂಹಯ್ಯ ಭಾವುಕತೆಯಿಂದ ಹೇಳಿದರು.

ನರಸಿಂಹಯ್ಯನವರ ಆತ್ಮಕಥೆ ‘ನನ್ನ ನೋವು ನನ್ನ ನಲಿವು’ ಕೃತಿ ಪ್ರಕಟಿಸಿದ ಅಳಿಲು ಸೇವಾ ಸಂಸ್ಥೆಯ ಅಧ್ಯಕ್ಷ ಟಿ.ಎಸ್‌.ವಿಶ್ವನಾಥ್‌ ಕಾರ್ಯಕ್ರಮದಲ್ಲಿ ಹಾಜರಿದ್ದರು.
(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X