ಧಾರವಾಡ ಅಸಲಿ ಕನ್ನಡ ಭಾಷೆಯ ಕಗ್ಗೊಲೆ

Mahesh Gajabar, Belgaum
ಶಾಮ್ ಅವರಿಗೆ,

ನಾನು ದಟ್ಸ್ ಕನ್ನಡದ ಅಭಿಮಾನಿ ಬಳಗದ ಖಾಯಂ ಸದಸ್ಯ. ನಿಮ್ಮ ಈ ವೆಬ್ ಸೈಟನ್ನು ಕಳೆದ ಮೂರು ವರ್ಷಗಳಿಂದ ಓದುತ್ತಿದ್ದೇನೆ. ಓದುಗ ವೃಂದದವರೂ ಕೂಡ ವರದಿಗಾರರಾಗಬಹುದು ಎಂದು ಅವರಿಗೆ ನೀವು ವೇದಿಕೆ ಕಲ್ಪಿಸಿಕೊಟ್ಟಿದಕ್ಕೆ ತುಂಬಾ ಧನ್ಯವಾದಗಳು.

ನಾನು ಬೆಳಗಾವಿ ಜಿಲ್ಲೆಯವನು. ಅಂದ್ರೆ ಉತ್ತರ ಕರ್ನಾಟಕದವನು. ಸಂಪೂರ್ಣ ನೂರಕ್ಕೆ ನೂರು ಶೇಕಡ ಮರಾಠಿ ಮಾತಾಡೋ ಊರು ನನ್ನದು. ಆದ್ರು ಕನ್ನಡ ನನ್ನ ಕಲಿಕಾ ಭಾಷೆ ಮತ್ತು ಹೃದಯದ ಭಾಷೆ. ನನ್ನ ಉತ್ತರ ಕರ್ನಾಟಕ ಭಾಷಾ ಸೊಗಡಿಗೆ ಧಕ್ಕೆ ತರುವ ಪ್ರಯತ್ನ ನಿರಂತರವಾಗಿ ಕನ್ನಡ ದೃಶ್ಯ ಮಾಧ್ಯಮಗಳಿಂದ ನಡೀತಾನೆ ಇದೆ.

ಇದನ್ನ ಪ್ರತಿಭಟಿಸುವುದಕ್ಕೆ ನನಗೆ ಒಂದು ವೇದಿಕೆ ಬೇಕು. ಅದನ್ನ ನೀವು ಕಲ್ಪಿಸುತ್ತೀರಿ ಎಂಬ ನಂಬಿಕೆಯಿದೆ. ನನ್ನ ಲೇಖನದಲ್ಲಿ ನಾನು ಬೆಳಗಾವಿ-ಧಾರವಾಡ ಜಿಲ್ಲೆಗಳಲ್ಲಿ ಬಳಸೋ ಕನ್ನಡ ಶಬ್ದಗಳ ಸಂಗ್ರಹವನ್ನು ಸಂಪಾದಿಸಿದ್ದೇನೆ. ಅದನ್ನು ನೀವು ಕಂತು ಕಂತುಗಳಲ್ಲಿ ಪ್ರಕಟಿಸಿ ಇಲ್ಲಿನ ಭಾಷಾ ಶೈಲಿಯನ್ನು ಬೇರೆಯವರು ತಿಳಿದುಕೊಳ್ಳುವುದಕ್ಕೆ ಮತ್ತು ದೃಶ್ಯ ಮಾಧ್ಯಮದ ನಕಲಿ ಅಪಹಾಸ್ಯವನ್ನು ಅಳಿಸಿ, ಬದಲಿಗೆ ಉತ್ತರ ಕರ್ನಾಟಕ ಕನ್ನಡದ ನಿಜವಾದ ಸೊಗಡನ್ನು ಜನರ ಮುಂದೆ ಇಡಬೇಕೆಂದು ಕೋರುತ್ತೇನೆ.

ಉತ್ತರ ಕರ್ನಾಟಕದಲ್ಲೂ ಕೂಡ ಒಂದೇ ತರಹದ ಶೈಲಿ ಇಲ್ಲ. ಅದನ್ನ ನನಗೆ ಬೇರೆ ಜನರಿಗೆ ಸಾರಿ ಹೇಳಬೇಕಾಗಿದೆ. ಸರ್, ದಯವಿಟ್ಟು ತಾವು ನನ್ನ ಶಬ್ದ ಸಂಗ್ರಹವನ್ನು ಅವಶ್ಯವಿದ್ದರೆ ಬದಲಾವಣೆ ಮಾಡಿ ಕಂತುಗಳಲ್ಲಿ ಪ್ರಕಟಿಸಿ ಅಂತಾ ಕೋರುತ್ತೇನೆ. ಪ್ರಕಟಿಸಿದರೆ ಇಡೀ ಉತ್ತರ ಕರ್ನಾಟಕದ ಪರವಾಗಿ ನಾನು ನಿಮಗೆ ಚಿರಋಣಿ.

ಧನ್ಯವಾದಗಳೊಂದಿಗೆ

ಮಹೇಶ ಗಜಬರ B.E,M.Tech
ನಂ.36, ಚಿಕ್ಕಲವಾಳ, ಚಿಕ್ಕೋಡಿ ವಿಧಾನಸಭಾ ಕ್ಷೇತ್ರ
ತಾ:ಚಿಕ್ಕೋಡಿ, ಜಿ:ಬೆಳಗಾವಿ-591237 ಕರ್ನಾಟಕ
ಮಿಂಚೆ ವಿಳಾಸ : [email protected]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+