• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶೂದ್ರಕವಿ ಶೇಕ್ಸ್ ಪಿಯರ್ ಹುಟ್ಟುಹಬ್ಬ

By * ಸಿದ್ದು ಯಾಪಲಪರವಿ, ಗದಗ
|
William Shakespeare
ಇಂಗ್ಲೆಂಡಿನ ನಾಟಕಕಾರ ವಿಲಿಯಂ ಶೇಕ್ಸ್ ಪಿಯರ್ ನ ಹೆಸರು ಕೇಳದವರಾರು? ಮಹಾನ್ ಲೇಖಕ ಇಂಗ್ಲೆಂಡ್ ದೇಶದ ಪುಟ್ಟ ಹಳ್ಳಿ ಸ್ಟ್ರ್ಯಾಟ್ ಫೋರ್ಡ ಆನ್ ಎವಾನ್ ನಲ್ಲಿ 1564 ರಂದು ಜನಿಸಿದ. ತೀರಿಕೊಂಡ ದಿನ 23 ಏಪ್ರಿಲ್ 1616. ಹುಟ್ಟಿದ ದಿನಾಂಕದಂದೇ ಆತ ಮರಣ ಹೊಂದಿದನೆಂಬ ನಂಬಿಕೆ ಜನಜನಿತ. ಇಂದಿಗೆ ಆತ ಮರೆಯಾಗಿ 384 ವರ್ಷ ತುಂಬಿತು.

ವಿಲಿಯಂ ಶೇಕ್ಸ್ ಪಿಯರ್ ಕುರಿ ಉಣ್ಣೆ ವ್ಯಾಪಾರ ಮಾಡುವ ಓರ್ವ ಸಮೃದ್ಧ ವ್ಯಾಪಾರಿಯಾಗಿದ್ದ. ಇಂಗ್ಲೆಂಡಿನ ವರ್ಗ ಸಂಘರ್ಷದ ಆ ದಿನಗಳಲ್ಲಿ ಶೂದ್ರ ಮನೆತನದಲ್ಲಿ ಜನಿಸಿದ ವಿಲಿಯಂ ಜಗತ್ಪ್ರಸಿದ್ಧ ನಾಟಕಕಾರನಾಗುತ್ತಾನೆ ಎಂದು ಯಾರು ಅಂದುಕೊಂಡಿರಲಿಲ್ಲ.

ಹಳ್ಳಿಯಿಂದ ಇಂಗ್ಲೆಂಡಿಗೆ ಓಡಿ ಬಂದ ವಿಲಿಯಂ ತನ್ನ ಆಸಕ್ತ ಕ್ಷೇತ್ರ ರಂಗಭೂಮಿ ಸೇರಿದ. ಅದು ಕೇವಲ ಸೇವಕನಾಗಿ. ನಾಟಕ ಕಂಪನಿಯಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡಿ ನಟನಾಗಿ, ನಿರ್ದೇಶಕನಾಗಿ ನಂತರ ಶ್ರೇಷ್ಠ ನಾಟಕಾರನಾಗಿ ಆತ ಬೆಳೆದುಬಂದ ಬಗೆಗೆ ಅನೇಕ ರಂಜನೀಯ ಕಥೆಗಳಿವೆ. ಅವನ ವೈಯಕ್ತಿಕ ಇತಿಹಾಸ ಸಮರ್ಪಕವಾಗಿ ನಮಗೆ ಲಭ್ಯವಿಲ್ಲವಾದರೂ, ಅವನು ಬರೆದ ಸರಿಸುಮಾರು 36 ನಾಟಕಗಳು ಇಂದಿಗೂ ನಮ್ಮೊಂದಿಗಿದ್ದು ವಿಶ್ವರಂಗಚರಿತ್ರೆಯಲ್ಲಿ ಅತನನ್ನು ಅಮರನನ್ನಾಗಿಸಿವೆ. ಶೇಕ್ಸ್ ಪಿಯರ್ 36 ನಾಟಕಗಳನ್ನು ಬರೆದ ಆದರೆ ಅವನ ಕೃತಿಗಳ ಬಗೆಗೆ ವ್ಯಾಖ್ಯಾನಗಳು, ವಿಮರ್ಶೆಗಳು, ವಿಶ್ಲೇಷಣೆಗಳು ಸಾವಿರಾರು ಪ್ರಕಟವಾಗಿವೆ. ಇಂಥ ಗೌರವ ಜಾಗತಿಕ ಸಾಹಿತ್ಯ ನಕಾಶೆಯಲ್ಲಿ ಯಾರಿಗೂ ದಕ್ಕಿಲ್ಲ.

1989 ರಲ್ಲಿ ನಾನು ಎಂ.ಎಂ. ಓದುವಾಗ ಒಂದು ಪೇಪರ್ ಗಾಗಿ ವಿಲಿಯಂನ ಸಮಗ್ರ ಅಧ್ಯಯನ ಸಾಧ್ಯವಾಯಿತು. ಎಳೆಯ ಪ್ರಾಯದಲ್ಲಿ ಪೂರ್ಣವಾಗಿ ದಕ್ಕದಿದ್ದರೂ, ಇಂಗ್ಲಿಷ್ ಕಲಿಸುವ ಸಮಯದಲ್ಲಿ ಹಂತ ಹಂತವಾಗಿ ವಿಲಿಯಂ ಮನಸ್ಸಿಗೆ ಹತ್ತಿರವಾಗತೊಡಗಿದ. ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿಗಳ ಪಾಲಿನ craze ಎಂದರೆ shakespeare. ಶೇಕ್ಸ್ ಪಿಯರ್ ಬರೀ ಹೆಸರಲ್ಲ. ಅದೊಂದು ಮಹಿಮೆ!ಸಾಹಿತ್ಯ ಕ್ಷೇತ್ರದಲ್ಲಿ ನಿಧಾನವಾಗಿ ಕಾಲೂರುವಾಗ ಹಲವಾರು ಕಾರಣಗಳಿಂದ ನನಗೆ ಶೇಕ್ಸಪಿಯರ್ ಆದರ್ಶಪ್ರಾಯನಾದ. ವೈಯಕ್ತಿಕವಾಗಿ ಅವನ ನಾಲ್ಕು ದುರಂತ ನಾಟಕಗಳಾದ, ಒಥೆಲೊ, ಹ್ಯಾಮ್ಲೆಟ್, ಕಿಂಗ್ ಲಿಯರ್ ಹಾಗೂ ಮ್ಯಾಕ್ ಬೆತ್ ನನ್ನನ್ನು ಆವರಿಸಿಕೊಂಡು, ಹೊಸ ವಿಚಾರಗಳಿಂದ ಮತ್ತೆ, ಮತ್ತೆ ಓದಿಸಿಕೊಳ್ಳುತ್ತವೆ.

ಕಳೆದ ವರ್ಷ ನಮ್ಮ ಸಂಸ್ಥೆಯ P.G ವಿದ್ಯಾರ್ಥಿಗಳಿಗಾಗಿ king lear ಕಲಿಸುವ ಸಮಯದಲ್ಲಿ ಅವನ ಎಲ್ಲ tragedies ಓದಿ ದಂಗಾದೆ. ಈಗ ವಿಲಿಯಂ ಇನ್ನೂ ವಿಸ್ತೃತವಾಗಿ ಅರ್ಥವಾಗುತ್ತಾನೆ ಅನಿಸಿತು. ವಿಲಿಯಂನಷ್ಟು ಅದ್ಭುತವಾಗಿ ಮನುಷ್ಯ ಸ್ವಭಾವಗಳನ್ನು ಚಿತ್ರಿಸಿದ ಇನ್ನೊಬ್ಬ ನಾಟಕಕಾರನಿಲ್ಲ. ಅವನ ದುರಂತ ನಾಟಕಗಳ ನಾಯಕರ ದುರಂತಕ್ಕೆ ಅವರೇ ಕಾರಣ, ಅವರ tragic flaw ನಿಂದಾಗಿ ಅವರು ಎದುರಿಸುವ ದುರಂತವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತಾನೆ. ಕಥೆಯ ನಿರ್ವಹಣೆಯೊಂದಿಗೆ, ಅವನ ವೈಚಾರಿಕ ಕಾವ್ಯಮಯ ಸಂಭಾಷಣೆ ಮನಸ್ಸಿಗೆ ನಾಟುತ್ತವೆ. ಅವನ ಹಾಗೆ ಬರೆಯಲು ಪ್ರಯತ್ನಿಸಿ ವಿಫಲರಾದ university wits ಅಪಮಾನವನ್ನು ಎದುರಿಸಿದರು. oxford, cambridge ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು ಅವನ ಖ್ಯಾತಿಯನ್ನು ಸವಾಲಾಗಿ ಸ್ವೀಕರಿಸಿ ಅವನನ್ನು ಮೀರಿ ಬೆಳೆಯಲು ಯತ್ನಿಸಿ ವಿಫಲರಾದ ಕಥೆಗಳು ಬೇಕಾದಷ್ಟಿವೆ.

ವಿಶ್ವವಿದ್ಯಾಲಯದ ಕಟ್ಟೆ ಏರದ ಹಳ್ಳಿಹೈದನನ್ನು ಎದುರಿಸಲಾಗದೆ, ಶೂದ್ರನೊಬ್ಬನ ಸಾಮರ್ಥ್ಯವನ್ನು ಸಹಿಸಲಾಗದೆ ಅವನೊಬ್ಬcheap writer ಎಂದು 'ಪಂಡಿತವರೇಣ್ಯರು' ಬಿಂಬಿಸಿದರು . ಶೂದ್ರ ಶಕ್ತಿಯನ್ನು ತುಳಿಯುವ ಹುನ್ನಾರವನ್ನು ವಿಫಲಗೊಳಿಸಿ ತನ್ನ ಪ್ರಖರ ಪ್ರತಿಭೆಯಿಂದ ಮೇಲೇರಿದ ವಿಲಿಯಂ, globe theatre ನ ಒಡೆಯನಾಗಿ ಇಂಗ್ಲೆಂಡ್ ರಾಣಿಗೆ ಆಪ್ತನಾದದ್ದು ಸಣ್ಣ ವಿಜಯವೇನೆಲ್ಲ. ಕಾಳಿದಾಸ, ಕನಕದಾಸರ ಹಾಗೆ ಶೇಕ್ಸಪಿಯರ್ ಕೂಡಾ ಕುರುಬ ಜನಾಂಗಕ್ಕೆ ಸೇರಿದವನೆಂಬ ಸತ್ಯ ಬಹುಪಾಲು ಜನರಿಗೆ ಗೊತ್ತಿಲ್ಲ. ಅವನು ರಚಿಸಿದ ಸಾನೆಟ್ ಗಳು ಬದುಕಿಗಿರುವ ಜೀವನೋತ್ಸಾಹವನ್ನು ವಿಜೃಂಭಿಸುತ್ತವೆ. ನೂರಾರು ವರ್ಷಗಳಿಂದ ರಕ್ಷಿಸಿರುವ ಅವನ ಮನೆ ಸುಂದರ ಹೂದೋಟ ನೋಡಿದಾಗಿನ ಸಂಭ್ರಮ ನೆನಪಿಸಿಕೊಂಡರೆ ಈಗಲೂ ಮೈ ಝುಂ ಎನ್ನುತ್ತದೆ.

ನಿಜವಾದ ರಂಗಾಸಕ್ತರು, ಸಾಹಿತ್ಯಾಸಕ್ತರು ಇಂದಿಗೂ, ಎಂದೆಂದಿಗೂ ಅವನನ್ನು ಆರಾಧಿಸುತ್ತಾರೆ. ಇಂಗ್ಲೆಂಡಿನ ಎಲ್ಲ ರಂಗಮಂದಿರಗಳಲ್ಲಿ ಹೊಸರೂಪ ಪಡೆದ ಅವನ ನಾಟಕಗಳು ಪ್ರದರ್ಶನಗೊಳ್ಳುತ್ತವೆ. ಇಂಗ್ಲೆಂಡಿನ ಅವನ ಮನೆಗೆ ಹೋದಾಗ, ಮನೆಯಂಗಳದಲಲ್ಲಿ mid summer.. ನಾಟಕ ನೋಡಿದೆ. ಪ್ರತಿಭಾನ್ವಿತ ಕಲಾವಿದರೊಂದಿಗೆ ನಲಿದಾಡಿದೆ. ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿಯಾಗಿ ಅವನ ಹುಟ್ಟೂರು ನೋಡುವ ಕನಸು ನನಸಾಗಿದ್ದಕ್ಕೆ ಸಂಭ್ರಮಿಸಿದೆ.

ಆ ಸಂಭ್ರಮದ ಕ್ಷಣಗಳನ್ನು ಅವನ ಜನ್ಮ ದಿನದಂದು ನಿಮ್ಮೊಂದಿಗೆ ಹಂಚಿಕೊಂಡು, ಶೇಕ್ಸಪಿಯರ್ ಹುಟ್ಟು ಹಬ್ಬದ ಕಾಣಿಕೆಯಾಗಿ ಈ ಪುಟ್ಟ ಬರಹ ನೀಡುತ್ತಲಿದ್ದೇನೆ. Happy Birthday to you Mr. William. ಎಂದು ಹೇಳುವುದು ಸೌಜನ್ಯ ಮತ್ತು ವಾಡಿಕೆ. ಆದರೆ ಅಮೂಲ್ಯವಾದ ಸಾಹಿತ್ಯವನ್ನು ಆತನಿಂದ ಪಡೆದು ಧನ್ಯರಾದ ನಾವು ನಮಗೆ ನಾವೇ ಶುಭಾಶಯ ಹೇಳಿಕೊಳ್ಳುವುದು ಉತ್ತಮ!

ಲೇಖಕರ ವಿಳಾಸ : Siddu Yapalaparvi, Lect. in English, Sangatya Prakashana Kalasapur road, Gadag - 582103

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
William Shakespeare's Birthday (23 April) brings many happy returns for us! Great to remember a play wright who did not attend any university classes. A travelogue to William's England home by Siddu Yapalaparvi from Gadag.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more