473866astrologerಪ್ರಮಿಳಾ ನೇಸರ್ಗಿಯೂ ಮಂತ್ರಿಸಿದ ನಿಂಬೆಹಣ್ಣೂ/column/humor/2008/0422-subbu-and-magical-lemon.htmlರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಗಲ್ಲಿಗಲ್ಲಿಗಳಲ್ಲಿ ಜ್ಯೋತಿಷಿಗಳು ಹುಟ್ಟಿಕೊಳ್ಳುತ್ತಿದ್ದಾರೆ. ಚುನಾವಣೆ ಇಲ್ಲದಿದ್ದರೂ ಅವರು ಇದ್ದೇ ಇರುತ್ತಾರೆ. ಯಾವ ಪಕ್ಷ ಗೆಲ್ಲುತ್ತೆ? ಮುಮಂ ಯಾರು? ಮೊದಲು ಎಡಗಾಲಿಡಬೇಕೋ, ಬಲಗಾಲಿಡಬೇಕೋ ಅವರೇ ಹೇಳುತ್ತಾರೆ. ಅರಳುತ್ತಿರುವ ಜ್ಯೋತಿಷಿಗಳು ಮರುಳಾಗುತ್ತಿರುವ ರಾಜಕಾರಣಿಗಳ ಕುರಿತು ಒಂದು ವಿಡಂಬನೆ. * ಪ್ರಸಾದ ನಾಯಿಕ ಪಕ್ಕದ ಓಣಿಯಲ್ಲಿದ್ದ ಗೆಳೆಯ ಡಿಬ್ಬಿ ಹಳೆಯ ಕಾಲದ ಚಿತ್ರದಲ್ಲಿ ತಾಯ್ ನಾಗೇಶ್ 2738http://kannada.oneindia.com/img/2009/11/14-pramila-nesargi1e.jpg473866astrologerಶರೀರ ಲಕ್ಷಣ ಜ್ಯೋತಿಷಿ ಎನ್.ಕೆ ಜೋಗಳೇಕರ/column/gv/2009/0418-astrologer-nk-jogalekar-dharwad.htmlಕರ್ನಾಟಕದ ಪ್ರತಿಭಾವಂತ ಜ್ಯೋತಿಷಿ ನಾಗನಾಥ ಕಲ್ಲೋಪಂತ ಜೋಗಳೇಕರರು ನನ್ನ ಬಾಲ್ಯಮಿತ್ರರು. ಎಪ್ಪತ್ತೆಂಟರ ಪಕ್ವ ವಯಸ್ಸಿನಲ್ಲಿಯೂ ತಮ್ಮ ಕಾಯಕದಲ್ಲಿ ಶ್ರದ್ಧೆಯಿಂದ ದುಡಿಯುತ್ತಿದ್ದಾರೆ. ಅವರ ಮುಂದಿನ ಕೃತಿ ಕುಂಡಲೀ ದರ್ಶನ. ಅದು ಸುಮಾರು 600 ಜಗತ್ಪ್ರಸಿದ್ಧ ವ್ಯಕ್ತಿಗಳ ಜಾತಕಗಳ ಸಂಗ್ರಹವಾಗಿದೆ. ಅದನ್ನು ನಾವು ಕುತೂಹಲದಿಂದ ನಿರೀಕ್ಷಿಸುತ್ತಿದ್ದೇವೆ.* ಡಾ. ಜೀವಿ ಕುಲಕರ್ಣಿ, ಮುಂಬಯಿನಾವು ಎಷ್ಟೇ ವೈಜ್ಞಾನಿಕ ವಿಚಾರ ಹೊಂದಿರಲಿ, ಪ್ರಗತಿಪರರಾಗಿರಲಿ, ಜ್ಯೋತಿಷ್ಯದ 36048http://kannada.oneindia.com/img/2009/04/18-jogalekar1.jpg473866astrologerಅಡ್ವಾಣಿಯೇ ಪ್ರಧಾನಿ : ಶಿವಲಿಂಗ ಸ್ವಾಮೀಜಿ ಭವಿಷ್ಯ/news/2009/05/14/2009-may-bring-good-luck-to-advani-astrologer.html15 ಲೋಕಸಭೆ ಚುನಾವಣೆಯ ನಂತರ ಭಾರತದ ಪ್ರಧಾನಿ ಯಾರಾಗಲಿದ್ದಾರೆ? ರಾಜಕೀಯ ಬಣಗಳೊಡನೆ ರಾಷ್ಟ್ರೀಯ, ರಾಜ್ಯ ಮಟ್ಟದ ಪತ್ರಿಕೆಗಳೆಲ್ಲ ಸಾಕಷ್ಟು ಲೆಕ್ಕಾಚಾರ ನಡೆಸಿವೆ. ಹೆಚ್ಚಿನ ಪತ್ರಿಕೆಗಳ ಅಭಿಮತದ ಪ್ರಕಾರ ಕಾಂಗ್ರೆಸ್ ಮುಂದಾಳತ್ವದ ಯುಪಿಎ ಮೈತ್ರಿಕೂಟವೇ ಅಧಿಕಾರ ಹಿಡಿಯುವ ಸಾಧ್ಯತೆಯ ಕುರಿತು ಮಾತಾಡುತ್ತಿವೆ. ಚುನಾವಣೋತ್ತರ ಸಮೀಕ್ಷೆಗಳು ಕೂಡ ಯುಪಿಎ ಮುಖಂಡರಲ್ಲೊಬ್ಬರು ಪ್ರಧಾನಿಯಾಗುತ್ತಾರೆ ಎಂದು ಸಾರುತ್ತಿವೆ.ಸಮೀಕ್ಷೆ ಮಾತ್ರವಲ್ಲ ಅನೇಕ ಜ್ಯೋತಿಷಿಗಳು ಕೂಡ 36623http://kannada.oneindia.com/img/2009/05/14-advani-lk2.jpg473866astrologerಪುನರ್ವಸು ಪುಷ್ಯ ನಕ್ಷತ್ರಕ್ಕೆ ಗ್ರಹಣದ ಬಿಸಿ/literature/articles/2009/0721-total-solar-eclipse-astro-guidance-shesha-sai.htmlನನ್ನ ಪ್ರೀತಿಯ ಸ್ನೇಹಿತರೆ ಮತ್ತು ಸಮಾನ ಮನಸ್ಕ ಬಂಧುಗಳೆ,ಬುಧವಾರ ಜುಲೈ 22ರಂದು ಸಂಭವಿಸಲಿರುವ ಪೂರ್ಣ ಸೂರ್ಯಗ್ರಹಣದ ಬಗೆಗೆ ನಿಮ್ಮೊಂದಿಗೆ ಕೆಲವು ವಿಚಾರಗಳನ್ನು ಹಂಚಿಕೊಳ್ಳಬಯಸುತ್ತೇನೆ. ನಾಳೆ ನಸುಕಿನ 5.31 ಗಂಟೆಗೆ ಗ್ರಹಣ ಆರಂಭ. ಆದರೆ ಗ್ರಹಣ ನೋಡಲು ನಾವು, ಭಾರತದಲ್ಲಿರುವವರು ಇನ್ನೂ ಒಂದು ಗಂಟೆ ಹೆಚ್ಚಿಗೆ ಕಾಯಬೇಕು. ಏಕೆಂದರೆ, ಸೂರ್ಯೋದಯ ಭಾರತೀಯ ಕಾಲಮಾನ 6.25ಕ್ಕೆ. ಮಹತ್ವದ ಸಂಗತಿಯೆಂದರೆ ಪುನರ್ವಸು 38104http://kannada.oneindia.com/img/2009/07/21-shesha-sai1.jpg473866astrologerಬೆಳಕಿನ ಹಬ್ಬ ದೀಪಾವಳಿಯ ಮಹತ್ವ/festivals/diwali/2009/1016-significance-of-deepavali-festival-of-lights.htmlಆಶ್ವಯುಜ ಕೃಷ್ಣ ಚತುರ್ದಶಿಯಿಂದ ಕಾರ್ತಿಕ ಶುಕ್ಲ ಪಾಡ್ಯಮಿವರೆಗೆ ಸಾಲಂಕೃತವಾಗಿ ಬೆಳಗುವ ದೀಪಗಳ ಸಾಲು. ಆಬಾಲ ವೃದ್ಧರಿಗೂ ಮುದನೀಡುವ ದೀಪಾವಳಿ ಹಿಂದೂ ಹಬ್ಬಗಳಲ್ಲೆಲ್ಲಾ ಅತ್ಯಂತ ಜನಪ್ರಿಯ. ಎಲ್ಲರೂ ಆಚರಿಸುವ ದೊಡ್ಡಹಬ್ಬ. ಭವಿಷ್ಯೋತ್ತರ ಪುರಾಣ ಕಾಲದಲ್ಲಿ ಈ ಹಬ್ಬ ಪ್ರಸಿದ್ಧವಾಗಿತ್ತು.* ಆರ್.ಸೀತಾರಾಮಯ್ಯ, ಜೋತಿಷ್ಕರು, ಶಿವಮೊಗ್ಗದೀಪಾವಳಿ ಮೂರುದಿನಗಳ ಹಬ್ಬವಾದರೂ, ದ್ವಿತಿಯತಿಥಿಯೂ ಸೇರಿದಂತೆ ಅದರ ಅವಧಿ ನಾಲ್ಕು ದಿನ ಆಗುತ್ತದೆ. ಇದೇ ಅಕ್ಟೋಬರ್ 39724http://kannada.oneindia.com/img/2009/10/16-seetharamaiah1.jpgnews"> ಪುನರ್ವಸು ಪುಷ್ಯ ನಕ್ಷತ್ರಕ್ಕೆ ಗ್ರಹಣದ ಬಿಸಿ | Solar Eclipse | Astro predictions | Punarvasu | Pushyami | Star gazing | Venkata Shesha Sai - ಪುನರ್ವಸು ಪುಷ್ಯ ನಕ್ಷತ್ರಕ್ಕೆ ಗ್ರಹಣದ ಬಿಸಿ - Kannada Oneindia

ಪುನರ್ವಸು ಪುಷ್ಯ ನಕ್ಷತ್ರಕ್ಕೆ ಗ್ರಹಣದ ಬಿಸಿ

Astrologer Shesha Sai couple
ನನ್ನ ಪ್ರೀತಿಯ ಸ್ನೇಹಿತರೆ ಮತ್ತು ಸಮಾನ ಮನಸ್ಕ ಬಂಧುಗಳೆ,

ಬುಧವಾರ ಜುಲೈ 22ರಂದು ಸಂಭವಿಸಲಿರುವ ಪೂರ್ಣ ಸೂರ್ಯಗ್ರಹಣದ ಬಗೆಗೆ ನಿಮ್ಮೊಂದಿಗೆ ಕೆಲವು ವಿಚಾರಗಳನ್ನು ಹಂಚಿಕೊಳ್ಳಬಯಸುತ್ತೇನೆ. ನಾಳೆ ನಸುಕಿನ 5.31 ಗಂಟೆಗೆ ಗ್ರಹಣ ಆರಂಭ. ಆದರೆ ಗ್ರಹಣ ನೋಡಲು ನಾವು, ಭಾರತದಲ್ಲಿರುವವರು ಇನ್ನೂ ಒಂದು ಗಂಟೆ ಹೆಚ್ಚಿಗೆ ಕಾಯಬೇಕು. ಏಕೆಂದರೆ, ಸೂರ್ಯೋದಯ ಭಾರತೀಯ ಕಾಲಮಾನ 6.25ಕ್ಕೆ. ಮಹತ್ವದ ಸಂಗತಿಯೆಂದರೆ ಪುನರ್ವಸು ನಕ್ಷತ್ರದಿಂದ ಆರಂಭವಾಗುವ ಗ್ರಹಣ ಪುಷ್ಯಮಿ ನಕ್ಷತ್ರದೊಂದಿಗೆ ಅಂತ್ಯಗೊಳ್ಳುತ್ತದೆ. ಎರಡು ಪ್ರಮುಖ ನಕ್ಷತ್ರಗಳನ್ನು ತಳುಕು ಹಾಕಿಕೊಂಡು ಸಂಭವಿಸುತ್ತಿರುವ ಅತ್ಯಂತ ಅಪರೂಪದ ಗ್ರಹಣ ಇದಾಗಿದೆ. ಈ ವಿದ್ಯಮಾನದ ಗುಣಲಕ್ಷಣಗಳು ಭಾರತೀಯ ಪಾರಂಪರಿಕ ವಿಜ್ಞಾನದ ರೀತ್ಯ ಈ ಕೆಳಕಂಡಂತಿವೆ.

ಗ್ರಹಣದ ದಿವಸ ಅಗಲಿದ ಆತ್ಮಗಳಿಗೆ, ಪಿತೃ ವರ್ಗಕ್ಕೆ ತರ್ಪಣ ನೀಡಬೇಕು. ಕರಿ ಎಳ್ಳು ಮತ್ತು ನೀರು ಸಮೇತ ನೀಡುವ ತರ್ಪಣಕ್ಕೆ ವಿಶೇಷ ಅರ್ಥವಿದೆ. ಹಿರಿಯರು ಎಂದರೆ ತಂದೆ, ತಾಯಿ, ಅಜ್ಜ, ಅಜ್ಜಿ, ಸೋದರ, ಸೋದರಿ, ತಂದೆಯ ಸೋದರ ಸೋದರಿ, ತಾಯಿಯ ಸೋದರ ಸೋದರಿ, ಗೊತ್ತಿದ್ದೋ ಗೊತ್ತಿಲ್ಲದೆಯೋ ನಮ್ಮನ್ನು ಎಳವೆಯಿಂದಲೇ ಸಾಕಿ ಸಲುಹಿದ, ಪರೋಕ್ಷವಾಗಿ ಅಥವಾ ಅಪರೋಕ್ಷವಾಗಿ ನಮ್ಮ ಜೀವನವನ್ನು ರೂಪಿಸಿ ಅಗಲಿದ ಎಲ್ಲ ಚೇತನಗಳಿಗೆ ತರ್ಪಣ ಕೊಡುವುದು ಒಬ್ಬ ವ್ಯಕ್ತಿಯ ಜೀವಿತಾವಧಿಯ ಅತ್ಯಂತ ಧನ್ಯ ಕ್ಷಣಗಳಲ್ಲಿ ಒಂದಾಗಿರುತ್ತದೆ.

ತರ್ಪಣವನ್ನು ಗ್ರಹಣ ಮುಗಿದ ನಂತರ ಕೊಡತಕ್ಕದ್ದು. ಸಂಧ್ಯಾವಂದನೆ ಮುಂತಾದ ನಿತ್ಯ ಕರ್ಮಗಳನ್ನು ಪೂರೈಸಿದ ನಂತರವೇ ತರ್ಪಣ ನೀಡಬೇಕು. ಈ ವಿಚಾರಗಳು ಅಷ್ಟಾಗಿ ಗೊತ್ತಿಲ್ಲದವರ ಪ್ರಯೋಜನಕ್ಕಾಗಿ ತರ್ಪಣ ನೀಡುವ ಆದ್ಯಂತ ವಿವರಗಳನ್ನು ನನ್ನ ಬ್ಲಾಗ್ ನಲ್ಲಿ ನಮೂದಿಸಿರುತ್ತೇನೆ. ನೋಡಿ. ಅನೇಕರಿಗೆ ಅರ್ಥವಾಗುವ ಉದ್ದೇಶದಿಂದ ಇಂಗ್ಲಿಷಿನಲ್ಲಿ ಅತ್ಯಂತ ಸರಳ ಭಾಷೆಯಲ್ಲಿ ಬರೆದಿದ್ದೇನೆ.

ಭಾರತೀಯ ಖಗೋಳಶಾಸ್ತ್ರ ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪುನರ್ವಸು ಮತ್ತು ಪುಷ್ಯಮಿ ನಕ್ಷತ್ರದಲ್ಲಿ ಜನಿಸಿದವರು ಈ ಗ್ರಹಣ ನಿಮಿತ್ತ ವಿಶೇಷ ಕಾಳಜಿ, ಎಚ್ಚರ ವಹಿಸಬೇಕಾಗುತ್ತದೆ. ಈ ನಕ್ಷತ್ರದಲ್ಲಿ ಹುಟ್ಟಿದವರು ಶಾಂತಿ ಮಾಡಿಸಬೇಕು. ಶಾಂತಿ ಎಂದರೆ ಅಕ್ಕಿ, ಧಾನ್ಯ, ತರಕಾರಿ ಮತ್ತು ನಾಕಾರು ನಾಣ್ಯಗಳನ್ನು ಗ್ರಹಣದ ಮುನ್ನ ಅಥವಾ ಗ್ರಹಣದ ನಂತರ ದಾನ ಮಾಡಬೇಕು.

ಓಂ ಶಾಂತಿ: ಆಧ್ಯಾತ್ಮಿಕ ರತ್ನ, ಶ್ರೀ ಯಾಗ ವಿದ್ಯಾ ಪ್ರವೀಣ, ಸಹಸ್ರಾಧಿಕ ಯಾಗಕರ್ತ, ಡಾ. ಪಿ. ವಿ. ಶೇಷಸಾಯಿ ಅಶ್ವಮೇಧಯಾಜಿ, ಹೈದರಾಬಾದ್. ಮೊಕ್ಕಾಂ : ನ್ಯೂಯಾರ್ಕ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+