ಮಾರ್ಚ್ 23 ಭಗತ್ ಸಿಂಗ್ ಹುತಾತ್ಮರಾದ ದಿನ

ಇಂದು ಭಾರತದ ಮಹಾನ್ ಕ್ರಾಂತಿಕಾರರು ಹುತಾತ್ಮರಾದ ದಿನ. ಮಾರ್ಚ್ 23, 1931ರಂದು ಭಗತ್ ಸಿಂಗ್ ರನ್ನು ಗಲ್ಲಿಗೇರಿಸಿದಾಗ ಆತನಿಗಿನ್ನೂ 23ರ ಹರೆಯ. ಆತನ ಜೊತೆಗೆ ಸಹಚರರಾದ ರಾಜಗುರು ಮತ್ತು ಸುಖದೇವ್ ಕೂಡ ತಮ್ಮ ಪ್ರಾಣ ದೇಶಕ್ಕೆ ಅರ್ಪಿಸಿದರು. ಇವರ ಮರಣ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಸಂಚಲನವನ್ನು ಉಂಟು ಮಾಡಿತು. ಆದರೆ ಇಂದಿಗೂ ಕೂಡ ಭಗತ್ ಹಾಗೂ ಸಹಚರರಿಗೆ ಬ್ರಿಟಿಷ್ ಸರ್ಕಾರ ಶಿಕ್ಷೆ ನೀಡಿದ ರೀತಿಯ ಬಗ್ಗೆ ಅನುಮಾನ ಕಾಡುತ್ತಲೇ ಇವೆ.

ಕುತೂಹಲದ ವಿಷಯವೆಂದರೆ, ಭಗತ್ ಸಿಂಗ್ ಅವರನ್ನು ಮಾರ್ಚ್ 24ರಂದು ಗಲ್ಲಿಗೇರಿಸಬೇಕಾಗಿತ್ತು. ಆದರೆ ಜನವಿರೋಧಿ ಬ್ರಿಟಿಷ್ ಸರ್ಕಾರ, ಜನರ ಪ್ರತಿಭಟನೆಯ ಮುನ್ಸೂಚನೆ ಅರಿತು ಒಂದು ದಿನ ಮುಂಚಿತವಾಗಿ ತರಾತುರಿಯಲ್ಲಿ ಗಲ್ಲಿಗೇರಿಸುವ ನಿರ್ಧಾರ ಕೈಗೊಂಡಿತು. ಈ ಮೂಲಕ ಅಂತಾರಾಷ್ಟ್ರೀಯ ಕಾನೂನನ್ನು ಬ್ರಿಟಿಷ್ ಸರ್ಕಾರ ಮುರಿಯಿತು. ನಿಗದಿತ ದಿನಾಂಕಕ್ಕಿಂತ ಮುಂಚಿತವಾಗಿ ಗಲ್ಲಿಗೇರಿಸಬೇಕಾದರೆ ಭಗತ್ ಸಿಂಗ್ ಅವರ ಬಗ್ಗೆ ಸರ್ಕಾರಕ್ಕೆ ಇನ್ನೆಷ್ಟು ಭಯವಿತ್ತು ಎಂಬುದನ್ನು ಕಾಣಬಹುದು. ಆದರೆ ಈ ರೀತಿ ಕಾನೂನು ಉಲ್ಲಂಘನೆ ಇತಿಹಾಸದಲ್ಲಿ ಹಿಂದೆ ನಡೆದಿರಲಿಲ್ಲ ಎಂದು ಇತಿಹಾಸಕಾರ ಸುಧೀರ್ ಹೇಳುತ್ತಾರೆ.

0323-bhagat-singh-martyrdom-march-23

ಲಾಹೋರ್ ಷಡ್ಯಂತ್ರದ ಕೇಸ್ ನಲ್ಲಿ ಭಗತ್ ಸಿಂಗ್, ರಾಜ್ ಗುರು ಹಾಗೂ ಸುಖದೇವ್ ಅವರಿಗೆ ಸರ್ಕಾರ ಶಿಕ್ಷೆ ಘೋಷಿಸಿದ ಮೇಲೆ ಎಲ್ಲೆಡೆ ಬಹು ಚರ್ಚೆಯ ವಿಷಯವಾಯಿತು. 23 ವರ್ಷದ ಭಗತ್ ಕೋರ್ಟಿನಲ್ಲಿ ನಡೆದುಕೊಂಡ ರೀತಿ, ಸರ್ಕಾರ ನೀಡಿದ ಶಿಕ್ಷೆ ಎಲ್ಲವೂ ಮರುದಿನ ಪ್ರಮುಖ ಪತ್ರಿಕೆಯ ಮುಖಪುಟವನ್ನು ಅಲಂಕರಿಸಿದವು. ವಿಶ್ವದ ಅನೇಕ ದಿನಪತ್ರಿಕೆಗಳು ಈ ಬಗ್ಗೆ ಸುದ್ದಿ ಪ್ರಕಟಿಸಿದವು. ಮಾ.24ರಂದು ಮೂವರಿಗೆ ಗಲ್ಲು ಎಂದು ಪ್ರಕಟಿಸಲಾಗಿತ್ತು. ಆದರೆ ಆದದ್ದೇ ಬೇರೆ ಒಂದು ದಿನ ಮೊದಲೇ ಭಗತ್ ಹುತಾತ್ಮರಾದರು.

ಭಗತ್ ಸಿಂಗ್ ಅವರ ಆತ್ಮಕತೆ ಬರೆದ ಬಿಪಿನ್ ಚಂದ್ರ, ಗಾಂಧೀಜಿ ದೃಷ್ಟಿಯಲ್ಲಿ ಭಗತ್ ಹಾಗೂ ಸಹಚರರ ಬಗ್ಗೆ ಯಾವ ನಿಲುವಿತ್ತು ಎಂದು ಒಂದು ಮಹತ್ವದ ಹೇಳಿಕೆಯನ್ನು ಉಲ್ಲೇಖಿಸುತ್ತಾರೆ. "ನಾನು ಲಾಹೋರ್ ನಲ್ಲಿ ಭಗತ್ ನನ್ನು ವಿದ್ಯಾರ್ಥಿ ರೂಪದಲ್ಲಿ ನೋಡಿದ್ದೇನೆ. ದೇಶದ ಬಗ್ಗೆ ಅವನಿಗಿರುವ ಭಕ್ತಿ, ಅಭಿಮಾನವನ್ನು ಶಬ್ದಗಳಿಂದ ವರ್ಣಸಲು ಸಾಧ್ಯವಿಲ್ಲ. ಆದರೆ, ಆ ಯುವಕ ತನ್ನ ಅಸಾಧಾರಣ ಶಕ್ತಿಯನ್ನು ದುರುಪಯೋಗ ಮಾಡಿದ ಎನ್ನಿಸುತ್ತದೆ. ದೇಶದ ಬಗ್ಗೆ ಭಗತ್ ಹಾಗೂ ಅತನ ಸಹಚರರು ದೇಶದ ಬಗ್ಗೆ ಹೊಂದಿರುವ ಕಾಳಜಿಯನ್ನು ಒಪ್ಪಿದರೂ, ಯುವ ಪೀಳಿಗೆ ಅವರ ಹಾದಿ ಹಿಡಿಯುವುದು ಉಚಿತವಲ್ಲ ಎಂಬ ಮಾತನ್ನು ಹೇಳುತ್ತೇನೆ" ಎಂದು ಗಾಂಧೀಜಿ ನುಡಿದಿದ್ದರಂತೆ.

ರಾಷ್ಟ್ರಪಿತ ಈ ಹೇಳಿಕೆ ಅನಗತ್ಯವಾಗಿತ್ತು. ಈ ರೀತಿಯ ಉಲ್ಲೇಖದಿಂದ ರಾಷ್ಟ್ರದ ಕಾಂತ್ರಿಕಾರಿ ಹೋರಾಟಗಾರ ಕೀರ್ತಿಗೆ ಕುಂದುಂಟಾದಂತೆ ಎನ್ನುತ್ತಾರೆ ಭಗತ್ ಅವರ ಸೋದರ ಸಂಬಂಧಿಯ ಮೊಮ್ಮಗ ಬಾಬರ್ ಸಿಂಗ್ ಸಂಧು ಯದ್ವಿಂದರ್ ಸಿಂಗ್.

ಒಟ್ಟಿನಲ್ಲಿ ದೇಶ ಕಂಡ ಅಪ್ರತಿಮ ಕಾಂತ್ರಿಕಾರರಲ್ಲಿ ಭಗತ್ ಸಿಂಗ್, ರಾಜ್ ಗುರು, ಸುಖದೇವ್, ಚಂದ್ರಶೇಖರ್ ಅಜಾದ್ ಇಂದಿಗೂ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ. ತೀರಾ ತಡವಾಗಿಯಾದರೂ ಭಗತ್ ಅವರ ಊರಲ್ಲಿ ಸ್ಮಾರಕ ನಿರ್ಮಾಣವಾಗಿದೆ. ಹತ್ತಾರು ಸಿನಿಮಾಗಳು, ನಾಟಕಗಳು ಯಶಸ್ವಿ ಪ್ರದರ್ಶನ ಕಂಡಿವೆ. ದೇಶದ ಸ್ವಾತಂತ್ರ್ಯಕ್ಕಾಗಿ ಭಗತ್ ಮತ್ತು ಸಹಚರರು ಜೀವದ ಹಂಗು ತೊರೆದು ಮಾಡಿದ ಹೋರಾಟ, ತ್ಯಾಗ, ಬಲಿದಾನ ಚಿರಸ್ಮರಣೀಯ.

ಪೂರಕ ಓದಿಗೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+