ಕೆಲ ಜೈವಿಕ ಇಂಧನಗಳೂ ಪರಿಸರಕ್ಕೆ ಮಾರಿಯೇ!


ಕೆಲ ಜೈವಿಕ ಇಂಧನಗಳೂ ಪರಿಸರಕ್ಕೆ ಮಾರಿಯೇ!ಇದುವರೆಗೂ ನಾವು ಖನಿಜ ಇಂಧನಗಳ ಬಳಕೆಯಿಂದ ಪರಿಸರ ಹಾಳಾಗುತ್ತದೆ, "ಹಸಿರುಮನೆ ಆಘಾತ" ಉಂಟಾಗುತ್ತದೆ, ಭೂಮಿಯ ತಾಪಮಾನ ಏರುತ್ತದೆ, ಸಾಲದ್ದಕ್ಕೆ ಖನಿಜ ಇಂಧನಗಳ ಬೆಲೆ ದಿನೇದಿನೇ ಅಧಿಕವಾಗಿ ಬಳಕೆದಾರರು ಹೈರಾಣಾಗುತ್ತಾರೆ. ಈ ಎಲ್ಲಾ ಕಾರಣಗಳಿಂದ ಖನಿಜಮೂಲ ಇಂಧನಗಳಿಗಿಂತ ಜೈವಿಕ ಇಂಧನಗಳು ಹೆಚ್ಚು ಸೂಕ್ತ ಎಂದು ತಿಳಿದಿದ್ದೆವು. ಇದಕ್ಕೆಲ್ಲಾ ಪರಿಹಾರ ಎಂದರೆ ಜೈವಿಕ ಇಂಧನ ಎಂದು ನಂಬಲಾಗಿತ್ತು. ಹಾಗಾಗಿ ತಯಾರಕರು ಜೈವಿಕ ಇಂಧನಗಳ ಕಡೆ ತಮ್ಮ ಗಮನ ನೆಟ್ಟರು. ಆದರೆ ಇವು ಖನಿಜ ಇಂಧನಗಳಿಗಿಂತ ಅಪಾಯಕಾರಿ ಎಂದು ಸ್ಮಿತ್‌ಸೋನಿಯನ್ ಸಂಶೋಧಕರು ಹೇಳುತ್ತಿದ್ದಾರೆ.

ಅದರಲ್ಲೂ ಇಂಧನ ಎಂದರೆ ಕೇಳಬೇಕೆ. ಇದೊಂದು ರೀತಿ ದ್ರವ ರೂಪದ ಬಂಗಾರ ಇದ್ದಂತೆ. ಈ ಬಂಗಾರ ಬೆಳೆಯಲು, ಭವಿಷ್ಯದ ಇಂಧನ ಸೃಷ್ಟಿಸಲು ಜನ ಹೆಚ್ಚುಹೆಚ್ಚಾಗಿ ಜೋಳ, ಸೋಯಾ ಮತ್ತು ಕಬ್ಬನ್ನು ಬೆಳೆಯಲು ಮುಂದಾದರು. ಇದನ್ನು ಗಮನಿಸಿದ ಸಂಶೋಧಕರು ನೀವು ಯದ್ವಾತದ್ವಾ ಬೆಳೆಗಳನ್ನು ಜೈವಿಕ ಇಂಧನಕ್ಕಾಗಿ ಬೆಳೆಯುತ್ತಾ ಹೋದರೆ ಪರಿಸರ ಮತ್ತಷ್ಟು ಹಾಳಾಗುತ್ತದೆ, ಆಹಾರದ ಕೊರತೆ ಉಂಟಾಗುತ್ತದೆ. ಹಾಗೆಯೇ ಎಲ್ಲಾ ಜೈವಿಕ ಇಂಧನಗಳೂ ಪರಿಸರ ಸ್ನೇಹಿ ಅಲ್ಲಾ ಎಂದು ಈಗ ಕಿವಿಮಾತು ಹೇಳಿದ್ದಾರೆ ಸಂಶೋಧಕರು.

ಭೂಮಿಯ ತಾಪಮಾನವನ್ನು ಹೆಚ್ಚುಸುವಲ್ಲಿ ಖನಿಜ ಇಂಧನಗಳ ಪಾತ್ರವೇನೂ ಕಡಿಮೆ ಇಲ್ಲ. ಇದಕ್ಕೆ ಬದಲಿಯಾಗಿ ಜೈವಿಕ ಇಂಧನಗಳನ್ನು ಬಳಸುವುದು ಮತ್ತಷ್ಟು ಪರಿಸರ ನಾಶಕ್ಕೆ, ಮಾಲಿನ್ಯಕ್ಕೆ, ಮಾನವನ ಆರೋಗ್ಯವನ್ನು ಹದಗೆಡಿಸಲು ಕಾರಣವಾಗುತ್ತವೆ ಎಂದು ಸ್ಮಿತ್‌ಸೋನಿಯನ್ ಟ್ರಾಫಿಕಲ್ ರೀಸರ್ಚ್ ಇನ್‌ಸ್ಟಿಟ್ಯೂಟ್‌ನ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕದ ಜೋಳ, ಬ್ರೆಜಿಲ್‌ನ ಸೋಯಾ ಮತ್ತು ಮಲೇಷಿಯಾದ ತಾಳೆಯಿಂದ ತಯಾರಾಗುವ ಜೈವಿಕ ಇಂಧನಗಳು ಖನಿಜಾಧಾರಿತ ಇಂಧನಗಳಿಗಿಂತಲೂ ಹೆಚ್ಚು ಅಪಾಯಕಾರಿ. ಇದಕ್ಕೆ ಬದಲಿಯಾಗಿ ಪುನರ್ಬಳಕೆ ಮಾಡಬಹುದಾದ ಅಡುಗೆ ಎಣ್ಣೆ, ಹುಲ್ಲು ಮತ್ತು ಕಟ್ಟಿಗೆಗಳಿಂದ ತಯಾರಾದ ಎಥನಾಲ್ ಬಳಸುವುದು ಹೆಚ್ಚು ಉಪಯುಕ್ತ ಎಂದು ಸಂಶೋಧಕರು ತಿಳಿಸಿದ್ದಾರೆ.

(ಏಜನ್ಸೀಸ್)

ಅಯೋವಾದ ಜೋಳದ ನೆನಪು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+