• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತ ದೇಶಕ್ಕೆ ಬಡತನ ವರವಾಗಬಲ್ಲದೆ?

By Staff
|

Mohanchand Patil, Karwarಭಾರತ, ಅಮೆರಿಕ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಆರ್ಥಿಕ ಬೆಳವಣಿಗೆ ಇಳಿಮುಖವಾಗಿದೆ. ಹಣದುಬ್ಬರದ ಆಟಾಟೋಪದಿಂದ ದಿನಬಳಕೆ ವಸ್ತುಗಳ ಬೆಲೆ ವಿಪರೀತ ಏರಿ ಜನಸಾಮಾನ್ಯರು ಪರದಾಡುವಂತಾಗಿದೆ. ಆದರೆ, ನೈಸರ್ಗಿಕವಾಗಿ ಅತಿ ಸಮೃದ್ಧವಾಗಿರುವ ಭಾರತದಂಥ ರಾಷ್ಟ್ರದಲ್ಲಿ ಶಿಕ್ಷಣ ಮಟ್ಟ ಸುಧಾರಿಸಿದರೆ ಆರ್ಥಿಕವಾಗಿ ಇನ್ನೂ ಬಲಾಢ್ಯವಾಗಿ ಬೆಳೆಯಲು ಸಾಧ್ಯವೆ? ದೇಶದ ಪ್ರಸ್ತುತ ಆರ್ಥಿಕ ಸ್ಥಿತಿಗತಿಯತ್ತ ಒಂದು ನೋಟ.

ಬರಹಗಾರ : ಮೋಹನಚಂದ ಪಾಟೀಲ, ಕಾರವಾರ

ಜಾಗತೀಕರಣದಿಂದ ಸ್ಪರ್ಧೆ ವರ್ಧಿಸಿದಂತೆ ಬಡತನವು ವರವಾಗಿ ಪರಿಣಮಿಸಬಹುದು. ಉತ್ಪಾದನಾ ವೆಚ್ಚ ಕಡಿಮೆ ಮಾಡಲು ಉದ್ಯಮಿಗಳು ಜಗತ್ತನ್ನೇ ಸುತ್ತಬೇಕಾಗುತ್ತದೆ. ಸಂಬಳ ಮತ್ತು ಕೂಲಿ ಕಡಿಮೆ ಇದ್ದರೆ ಉತ್ಪಾದನಾ ವೆಚ್ಚ ಕಡಿಮೆಯಾಗಿ ಮಾರಾಟ ಸ್ಪಿರ್ಧಾತ್ಮಕವಾಗಿರುವದು. ಆದರೆ ಇಂಥ ದೇಶ ಬಂಡವಾಳ ಹೂಡಿಕೆಗೆ ಅನುಕೂಲಕರ ವಾತಾವರಣವನ್ನು ನಿರ್ಮಿಸಬೇಕಾಗುವದು - ಸಾರಿಗೆ ಸಂಪರ್ಕ, ತಂತ್ರಜ್ಞಾನ, ಕಾರ್ಯ ಕುಶಲತೆ, ಇವೆಲ್ಲ ಸೌಕರ್ಯಗಳಿದ್ದರೆ ಬಡತನ ವರವಾಗುವದು. ಜಗತ್ತಿನಲ್ಲಿಯ ಉತ್ಪಾದನೆಗಳು ಸೇವೆಗಳು ಆ ದೇಶಕ್ಕೆ ಸ್ಥಳಾಂತರಗೊಳ್ಳುವವು. ಚೀನಾ ಮತ್ತು ಏಷ್ಯಾದ ಇತರ ರಾಷ್ಟ್ರಗಳು ಇದನ್ನು ಸಾಧಿಸಿವೆ. ಈಗ ಭಾರತ ಆ ಮಾರ್ಗದಲ್ಲಿದೆ.

ಬಡದೇಶಗಳು ಮತ್ತು ಮಧ್ಯಮ-ಅದಾಯದ ದೇಶಗಳನ್ನು ತುಲನೆ ಮಾಡಿದಾಗ ಇದು ಸರಿಯೆಂದು ತೋರುವುದಿಲ್ಲ. ಜಾಗತೀಕರಣದಿಂದ ಅಥವಾ ಮುಕ್ತ-ವ್ಯಾಪಾರ ಧೋರಣೆಯಿಂದ ಬಡದೇಶಗಳಿಗೆ ಲಾಭವಾದರೆ ಮಧ್ಯಮ-ಅದಾಯದ ದೇಶಗಳಿಗೆ ಲಾಭವಾಗಿಲ್ಲ. ಮಧ್ಯಮ-ಅದಾಯದ ದೇಶಗಳಲ್ಲಿ ವಾರ್ಷಿಕ ತಲಾ ಅದಾಯವು ರೂ. 135000ದಿಂದ ರೂ. 4500000 ಇದ್ದರೆ ಭಾರತದಲ್ಲಿ ಅದು ರೂ. 33750 ಇದೆ. ಅಮೇರಿಕ ಮತ್ತು ಜಪಾನ್ ದೇಶಗಳಲ್ಲಿಯ ಕಾರ್ಯಕ್ಷಮತೆ, ನೈಪುಣ್ಯತೆ ಮಧ್ಯಮ-ಅದಾಯದ ದೇಶಗಳಲ್ಲಿ ಇರುವುದಿಲ್ಲ. ಅಲ್ಲದೇ ಭಾರತದಲ್ಲಿ ಇರುವಂಥ ಕಡಿಮೆ ಸಂಬಳವೂ ಇಲ್ಲಿ ಇರುವುದಿಲ್ಲ. ಕಾರಣ ಉತ್ಪಾದನೆಯಲ್ಲಿ ಗರಿಷ್ಠತೆಯನ್ನೂ, ವೆಚ್ಚದಲ್ಲಿ ಕನಿಷ್ಠತೆಯನ್ನು ಸಾಧಿಸಲು ಇವರಿಗೆ ಆಗುವುದಿಲ್ಲ. ಜಾಗತೀಕರಣದಿಂದಾಗಿ ಎರಡೂ ಬದಿಯಿಂದ ಇವು ನುಗ್ಗಾಗುತ್ತವೆ. ಹೀಗಾಗಿ ದಕ್ಷಿಣ ಅಮೆರಿಕದ ಮಧ್ಯಮ-ಅದಾಯದ ದೇಶಗಳು ಆರ್ಥಿಕ ಬೆಳವಣಿಗೆಯನ್ನು ಕಳೆದ ಎರಡು ದಶಕಗಳಲ್ಲಿ ಸಾಧಿಸಿಲ್ಲ. ದಕ್ಷಿಣ ಆಫ್ರಿಕಾದಲ್ಲಿ ಬಿಳಿತಂತ್ರಜ್ಞ ವರ್ಷಕ್ಕೆ ರೂ. 13,00,000 ಗಳಿಸಿದರೆ ಕರಿತಂತ್ರಜ್ಞ ಕೇವಲ ರೂ. 1,30,000 ಗಳಿಸುತ್ತಾನೆ.

ಭಾರತ ಮತ್ತು ಚೀನ ದೇಶಗಳು ಇದಕ್ಕಿಂತ ಹತ್ತು ಪಟ್ಟು ಕಡಿಮೆ ಸಂಬಳಕ್ಕೆ ಕೆಲಸ ಮಾಡುವ ಲಕ್ಷ ಲಕ್ಷ ತಂತ್ರಜ್ಞರನ್ನು ತಯಾರಿಸುತ್ತಿರುವಾಗ ದಕ್ಷಿಣ ಆಫ್ರಿಕಾದ ಬಿಳಿ ಮತ್ತು ಕರಿ ತಂತ್ರಜ್ಞರಿಗೆ ಸ್ಪರ್ಧಿಸಲು ಹೇಗೆ ಸಾಧ್ಯ? ಭಾರತದ ಹಿರಿಯ ಮತ್ತು ಪ್ರಥಮ ದರ್ಜೆಯ ಸಾಫ್ಟವೇರ್ ತಂತ್ರಜ್ಞರು ಹೆಚ್ಚು ಗಳಿಸಿದರೂ ಖಾಸಗಿ ಕಾಲೇಜುಗಳು ಲಕ್ಷಲಕ್ಷಗಟ್ಟಲೆ ಡಿಪ್ಲೋಮಾಗಳನ್ನು ತಯಾರಿಸುತ್ತಿವೆ. ಭಾರತ ಫೋರ್ಜ ಕಂಪನಿಯಲ್ಲಿ ಇಂಥ ಕಡಿಮೆ ಸಂಬಳದ ತಂತ್ರಜ್ಞರೇ ಇದ್ದಾರೆ; ಕೆಲಸಗಾರರಿಲ್ಲ. ಕಾರಣ ಅವರ ಉತ್ಪಾದನೆ ಲಾಭಕರವಾಗಿದ್ದು, ಬೇರೆ ಬೇರೆ ದೇಶಗಳಲ್ಲಿ ಕಾರಖಾನೆಗಳನ್ನು ಖರೀದಿಸಿದ್ದು ಜಗತ್ತಿನಲ್ಲಿ ಮೊದಲನೇಯ ಸ್ಥಾನ ಆಶಯ ಹೊಂದಿದ್ದಾರೆ. ಇದು ಜಾಗತೀಕರಣದ ಉತ್ತಮ ಉದಾಹರಣೆ. ಬಜಾಜ್ ಅಟೋ ಕಂಪನಿಯಲ್ಲಿ ಶೇ. 80 ಕಾರ್ಮಿಕರು ಡಿಪ್ಲೋಮಾ ತಂತ್ರಜ್ಞರಿದ್ದಾರೆ. ಅವರ ಅದಾಯ ವರ್ಷಕ್ಕೆ ರೂ. 1,44,000 ಇದೆ. ಮಧ್ಯಮ-ಅದಾಯದ ದೇಶಗಳಾದ ದಕ್ಷಿಣ ಆಫ್ರಿಕಾ, ಅರ್ಜೆಂಟಿನಾಕ್ಕಿಂತ ಇದು ಹೆಚ್ಚಾಗಿಲ್ಲ. ಈ ದೇಶಗಳು ಜಾಗತೀಕರಣದಿಂದಾಗಿ ಪರದಾಡಬೇಕಾಗಿದೆ.

ಜಾಗತೀಕರಣವು ಬೇರೆಬೇರೆ ಪ್ರತಿಕ್ರಿಯೆಗಳನ್ನು ಪ್ರಪಂಚದಾದ್ಯಂತ ಹುಟ್ಟುಹಾಕುತ್ತದೆ. ಬಡದೇಶಗಳು ಎಷ್ಯಾದಲ್ಲಿ ಅತ್ಯುತ್ತಮ ಪರಿಣಾಮ ಕೊಟ್ಟರೆ, ಶ್ರೀಮಂತ ದೇಶಗಳು ಉತ್ಪಾದನೆಯನ್ನು ಹೆಚ್ಚಿಸಿವೆ. ಮಧ್ಯಮ-ಅದಾಯದ ದೇಶಗಳಲ್ಲಿ ಇದರ ಪರಿಣಾಮ ಮಿಶ್ರವಾಗಿದೆ. ಮುಕ್ತವ್ಯಾಪಾರ ಧೋರಣೆಗೆ ಬದ್ಧವಾದ ಮಧ್ಯಮ-ಅದಾಯದ ದೇಶಗಳಲ್ಲಿ ಆರ್ಥಿಕ ಯೋಜನೆಯ ಕೊರತೆ ಇದ್ದರೆ, ಅವರಿಗೆ ಅದು ನಿರಾಶೆಯುಂಟುಮಾಡಿದೆ. ಬ್ರಜಿಲ್, ಭಾರತ, ರಷ್ಯಾ ಮತ್ತು ಚೀನ ದೇಶಗಳ ಪೈಕಿ ಬ್ರಜಿಲ್ ದೇಶದ ಆರ್ಥಿಕ ಬೆಳವಣಿಗೆಯ ವೇಗ ಕಡಿಮೆಯಾಗಿದೆ. 1982ರಲ್ಲಿಯ ಸಾಲದ ಮುಗ್ಗಟ್ಟಿನಿಂದಾಗಿ ಅದರ ಅದಾಯದಲ್ಲಿ ಹೆಚ್ಚೇನು ಸುಧಾರಣೆಯಾಗಿಲ್ಲ. 1998ರಲ್ಲಿ ಅರ್ಜೆಂಟಿನ ಮುಗ್ಗರಿಸಿತು. ಮೆಕ್ಸಿಕೋದಲ್ಲಿ ಜೀವನಮಟ್ಟ 1990ದಿಂದ ಸಾವಕಾಶವಾಗಿ ಸುಧಾರಿಸುತ್ತಿದೆ. ಮೊದಮೊದಲು ಕಾರ್ಮಿಕ ಪ್ರಧಾನ ಉದ್ಯಮಗಳು ಅಮೇರಿಕದಿಂದ ಮೆಕ್ಸಿಕೋಗೆ ಬಂದರೂ ಈಗ ಅಲ್ಲಿಂದ ಚೀನಕ್ಕೆ ವಲಸೆ ಹೋಗುತ್ತಿವೆ. 1970ರಲ್ಲಿ ಗ್ರಾಹಕ ವಸ್ತುಗಳ ಬೆಲೆಗಳು ಇಳಿದಾಗ ಜೀವನ ಮಟ್ಟ ಕಾಯ್ದುಕೊಳ್ಳುವುದು ಅವರಿಗೆ ದುರ್ಭರವಾಯಿತು. ಅವರಿಗೆ ವ್ಯಾಪಾರೀ ರಂಗದಿಂದ ಉತ್ಪಾದನಾ ರಂಗಕ್ಕೆ ಹೋಗುವುದು ಆಗ ಯೋಗ್ಯವೆಂದು ಗೊತ್ತಿದ್ದರೂ ಸಾಧ್ಯವಾಗಲಿಲ್ಲ ಮತ್ತು ಭಾರತ, ಚೀನಾದ ಉತ್ಪಾದನೆಗಳೊಂದಿಗೆ ಸ್ಪರ್ಧಿಸಲು ಅವರಿಗೆ ಸಾಧ್ಯವಾಗಲಿಲ್ಲ. ಈಗ ಚೀನ ಮತ್ತು ಭಾರತ ದೇಶಗಳ ಆರ್ಥಿಕ ವ್ಯವಸ್ಥೆ ಬಲಗೊಳುತ್ತಿರುವುದರಿಂದ ಮತ್ತು ಅಲ್ಲಿ ಗ್ರಾಹಕ ವಸ್ತುಗಳ ಬೇಡಿಕೆ ಹೆಚ್ಚುತ್ತಿರುವುದರಿಂದ ಮಧ್ಯಮ-ಅದಾಯದ ದೇಶಗಳಲ್ಲಿ ಆಶಾಕಿರಣ ಮೂಡಿದಂತಾಗಿದೆ. ಈಗ ಗ್ರಾಹಕ ವಸ್ತುಗಳ ಬೆಲೆಗಳೂ ಏರತೊಡಗಿವೆಯಾದ್ದರಿಂದ ಮಧ್ಯಮ-ಅದಾಯದ ದೇಶಗಳು ಈಗ ರಫ್ತು ಮಾಡಬಹುದಾಗಿದೆ. ಇದು ಎಷ್ಟು ದಿನ ಮುಂದುವರಿಯುವುದೆಂದು ಕಾಯ್ದುನೋಡಬೇಕು.

ಮಧ್ಯಮ-ಅದಾಯದ ದೇಶಗಳಿಗಾಗಿ ನಾವು ಕನಿಕರಪಡಬೇಕಾಗಿಲ್ಲ. ಇಲ್ಲಿ ದಾಳಿಮಾಡಿ ಬಂದ ಬಿಳಿಯರು ಸ್ಥಳೀಯರನ್ನು ನಾಶ ಮಾಡಿ, ಇಲ್ಲಿಯ ಖನಿಜ ಸಂಪತ್ತನ್ನಾಧರಿಸಿದ ದೊಡ್ಡ ಉದ್ದಿಮೆಗಳನ್ನು ಸ್ಥಾಪಿಸಿ, ಈ ದೇಶಗಳ ಅದಾಯವನ್ನು ಹೆಚ್ಚಿಸಿದರು. ಆದರೆ ಇಲ್ಲಿಯ ಉತ್ಪಾದಕತೆಯ ಗುಣಮಟ್ಟವನ್ನು ಅಲಕ್ಶ್ಯ ಮಾಡಿ, ನೈಸರ್ಗಿಕ ಸಂಪನ್ಮೂಲಗಳಿಗೆ ಒತ್ತು ನೀಡಿದರು. ಮಧ್ಯಮ-ಅದಾಯದ ದೇಶಗಳ ದುಸ್ಥಿತಿಯಿಂದಾಗಿ ಏಷ್ಯಾದ ದೇಶಗಳು ಅಭಿವೃದ್ಧಿ ಹೊಂದುತ್ತಿರುವದು ಜಾಗತಿಕ ಸಮಾನತೆಯೆಡೆಗೆ ಹೆಜ್ಜೆಯಿಟ್ಟಂತಾಗಿದೆ. ಮುಂದಿನ ಮೂವತ್ತು ವರ್ಷಗಳಲ್ಲಿ ಮಧ್ಯಮ-ಅದಾಯದ ದೇಶಗಳು ಏಷ್ಯಾದ ದೇಶಗಳಿಗಿಂತ ಅಭಿವೃದ್ಧಿ ಹೊಂದುವವೆಂದು ಅರ್ಥ ಶಾಸ್ತ್ರಜ್ಞ ಸ್ವಾಮಿನಾಥನ ಅವರ ಅಭಿಪ್ರಾಯವಾಗಿದೆ. ಪ್ರಾಥಮಿಕ ಬಡತನದ ಲಾಭ ಪುನಃ ಈ ದೇಶಗಳಿಗೆ ಲಭ್ಯವಾಗತೊಡಗುವದು.

ಈಗ ನಮ್ಮ ದೇಶದ ಆರ್ಥಿಕ ಅಭಿವೃದ್ಧಿ ಶೇ.9 ಗತಿಯಲ್ಲಿ ಸಾಗಿದ್ದು, ಗ್ರಾಹಕ ವಸ್ತುಗಳ ಬೆಲೆಯೂ ಹೆಚ್ಚುತ್ತಿವೆ, ಜನರ ಅದಾಯವೂ ಏರುತ್ತಿದೆ. ಔದ್ಯಮಿಕ ರಂಗದಲ್ಲಿ ಸಂಬಳವು ವರ್ಷಕ್ಕೆ ಶೇ. 10ರಿಂದ 15 ಬೆಳೆಯುತ್ತಿದೆ. ವಸ್ತುಗಳ ಬೆಲೆ ಏರಿಕೆ ಮತ್ತು ಅದಾಯ ಏರಿಕೆ ಒಂದಕ್ಕೊಂದು ಪೂರಕವಾಗಿವೆ. ತಾಂತ್ರಿಕ ಅಭಿವೃದ್ಧಿಯಿಂದಾಗಿ ಉತ್ಪಾದನೆಯೂ ವರ್ಧಿಸುತ್ತಿದೆ. ಅತಿಪ್ರಸರಣವು ಹಿತಕರ ಮಟ್ಟದಲ್ಲಿದೆ. ಕಾರಣ ಜೀವನದ ಗುಣಮಟ್ಟವು ಉತ್ತಮಗೊಳ್ಳುತ್ತಿದೆ. ಬಡತನವು ಕ್ರಮೇಣ ಕಡಿಮೆಯಾಗುತ್ತಿದೆ. ಕಾರಣ ಜನರು ಉತ್ತಮ ಗುಣಮಟ್ಟದ ವಸ್ತುಗಳನ್ನು ಬಯಸುವುದರಿಂದ ಮಧ್ಯಮ ಅದಾಯದ ದೇಶಗಳಿಕೆ ನಮಗೆ ರಫ್ತು ಮಾಡಲು ಅವಕಾಶವಾಗಿದ್ದು ಅವು ಪುನಃ ಅಭಿವೃದ್ಧಿ ಮುಖಿಯಾಗಿವೆ. ಈಗಿನ ನಮ್ಮ ವಾರ್ಷಿಕ ತಲಾ ಅದಾಯ ರೂ 33,750 ಮುಂದೆ ಬೆಳೆಯುತ್ತ ಲಕ್ಷ ಆಗುವದು. ಆಗ ನಮ್ಮ ವಸ್ತುಗಳ ಬೆಲೆಯೂ ಕ್ರಮೇಣ ಹೆಚ್ಹಾಗಿ ಬೇರೆದೇಶಗಳೊಡನೆ ಸ್ಪರ್ಧಿಸುವುದು ದುಸ್ತರವಾಗಬಹುದು. ಆದ್ದರಿಂದ ನಾವು ತಾಂತ್ರಿಕತೆ ಮತ್ತು ವಸ್ತುಗಳ ಗುಣಮಟ್ಟವನ್ನು ಸುಧಾರಿಸುತ್ತಿರಲೇಬೇಕಾಗುವುದು. ಇಲ್ಲದಿದ್ದರೆ ಕ್ರಮೇಣ ಗಳಿಸಿದ ಶ್ರೀಮಂತಿಕೆಯ ಭಾರವನ್ನು ಹೊರುವದು ಕಷ್ಟವಾಗಬಹುದು.

ವೈದ್ಯಕೀಯ ರಂಗದಲ್ಲಿನ ಹೊಸ ಹೊಸ ಅವಿಷ್ಕಾರಗಳಿಂದಾಗಿ ನಮ್ಮ ಜನರ ಆಯುಷ್ಯ ವರ್ಧಿಸಿ ಅನುಪ್ತಾದಕ ಜನಸಂಖ್ಯೆಯ ಪ್ರಮಾಣ ಹೆಚ್ಚಾಗಿ ಆರ್ಥಿಕ ವ್ಯವಸ್ತೆಯ ಮೇಲೆ ಭಾರ ಬೀಳುವುದು. ಈ ಪರಿಸ್ಥಿತಿ ಈಗ ಜಪಾನ್, ಅಮೇರಿಕ ಮತ್ತು ಯುರೋಪ ದೇಶಗಳಲ್ಲಿ ಉಲ್ಬಣಿಸುತ್ತಿದೆ. ಇದನ್ನು ನೊಡಿದರೆ ಅತಿ ಶ್ರೀಮಂತಿಕೆ ದೇಶಕ್ಕೆ ಹಾನಿಕಾರಕ ಎಂದು ಎನ್ನಿಸುವದು. ಇಂಥ ಪರಿಸ್ತಿತಿಯನ್ನು ತಲುಪದಂತೆ ನಾವು ಮೊದಲೇ ಮಾನವ ಸಂಪನ್ಮೂಲ ಯೋಜನೆಗಳನ್ನು ಹಾಕಿಕೊಳ್ಳಬೇಕಾಗುವದು.

ಯಾವದೇ ದೇಶದಲ್ಲಿ ನೈಸರ್ಗಿಕ ಸಂಪತ್ತು ಸಮೃದ್ಧವಾಗಿದ್ದು, ಆ ದೇಶದ ಜನರಲ್ಲಿ ಬೌದ್ಧಿಕತೆ, ಕಾರ್ಯಕ್ಷಮತೆ ಇದ್ದರೆ ದೇಶದ ಶಿಕ್ಷಣ ಮಟ್ಟವನ್ನು ಸುಧಾರಿಸಿದರೆ ಆರ್ಥಿಕ ಸುಧಾರಣೆ ಸುಲಲಿತವಾಗುವದು. ಇಂಥ ಸ್ಥಿತಿಯಲ್ಲಿ ಪ್ರಾಥಮಿಕ ಹಂತದಲ್ಲಿಯ ಬಡತನ ಲಾಭದಾಯಕವಾಗುವುದು. ಸ್ವಾತಂತ್ರ್ಯಾ ನಂತರದಿಂದ ಇಲ್ಲಿಯವರೆಗೆ ನಮ್ಮ ದೇಶದ ಆರ್ಥಿಕ ಸುಧಾರಣೆಯನ್ನು ಅವಲೋಕಿಸಿದರೆ ಇದು ನಿಜವೆನ್ನಿಸದಿರದು. ಅಭಿವೃದ್ಧಿಯಾದಂತೆ ಆರ್ಥಿಕ ಸಂತುಲತೆಯನ್ನು ಹಂತ ಹಂತವಾಗಿ ಸಾಧಿಸುತ್ತ, ಕಾಯುತ್ತ, ನಾವು ಮುಂದುವರೆಯಬೇಕಾಗುತ್ತದೆ. ಇದನ್ನು ಸಾಧಿಸಲು ನಮ್ಮಲ್ಲಿ ಚಾಣಾಕ್ಷ ಯೋಜನಾಕಾರರು ಯೋಜನೆಗಳನ್ನು ರೂಪಿಸಬೇಕಾಗುತ್ತದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more