ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಸ್ಟರ್ ಹಿರಣ್ಣಯ್ಯ ನಾಟಕದ ವಿಸಿಡಿ ಬಿಡುಗಡೆ

By Staff
|
Google Oneindia Kannada News

Master Hirannaiah's Makmal topi VCD releaseಹಾಸ್ಯದ ಮೂಲಕ ಸರ್ಕಾರದ ಸಮಸ್ಯೆಗಳನ್ನು ಎತ್ತಿ ಹಿಡಿದವರಲ್ಲಿ ಹಿರಣ್ಣಯ್ಯ ಪ್ರಮುಖರು. 1947ರಲ್ಲಿ ಆರಂಭವಾದ ಅವರ ಮಿತ್ರ ಮಂಡಲಿ ಈ ವರೆಗೂ 'ಲಂಚಾವತಾರ', 'ಬ್ರಷ್ಟಾಚಾರ', 'ಗೌಡ್ರಗದ್ಲ', 'ಮುದುಕನ ಮದುವೆ' ಹಾಗೂ 'ಪಶ್ಚಾತಾಪ' ಮೊದಲಾದ ಕೌಟುಂಬಿಕ, ಸಾಮಾಜಿಕ ಹಾಗೂ ಹಾಸ್ಯ ನಾಟಕಗಳನ್ನು ಜನತೆಗೆ ನೀಡುತ್ತಾ ಬಂದವರು.

ಪ್ರಸ್ತುತ ಕೃಷ್ಣ ಮ್ಯೂಸಿಕ್ ಅವರು ಜನಪ್ರಿಯ ನಗೆನಾಟಕ 'ಮಕ್ಮಲ್‌ಟೋಪಿ'ಯ ವಿಸಿಡಿಯನ್ನು ಬಿಡುಗಡೆಗೊಳಿಸಿದ್ದಾರೆ. ನಾಟಕದ ಮೂಲಕಥೆ ದಿವಂಗತ ಹುಣಸೂರು ಕೃಷ್ಣಮೂರ್ತಿ ಅವರದು. ಕೆ.ಹಿರಣ್ಣಯ್ಯನವರು ಪರಿಷ್ಕರಿಸಿದ ಈ ನಗೆನಾಟಕವನ್ನು ಮಾಸ್ಟರ್ ಹಿರಣ್ಣಯ್ಯ ನಿರ್ದೇಶಿಸಿದ್ದಾರೆ. ಬಾಬು ಹಿರಣ್ಣಯ್ಯ ಸಹ ನಿರ್ದೇಶನ ಮಾಡಿದ್ದಾರೆ.

ಮಾಸ್ಟರ್ ಹಿರಣ್ಣಯ್ಯನವರು ನಾಣಿ ಪಾತ್ರದಲ್ಲಿ, ಬಾಬು ಹಿರಣ್ಣಯ್ಯ ಸಾಹುಕಾರ್ ಬಸಪ್ಪನಾಗಿ ಅಭಿನಯಿಸಿರುವ ನಾಟಕದ ಉಳಿದ ಪಾತ್ರದಲ್ಲಿ ರಾಜುಸಕ್ಕರೆಪಟ್ಟಣ್ಣ(ರಾಮ), ವಾಸುದೇವನ್(ಸೆಕ್ರೆಟರಿ), ದೇವರಾಜ್(ಮೇಷ್ಟ್ರು), ಸಿ.ಆರ್.ಸುಧೀಂದ್ರ(ಕವಿ ಮತ್ತು ಶಿರೋಮಣಿ), ಪರಮೇಶ್(ಭೂಪಾಲ್‌ರಾವ್), ಶಶಿಕಲ(ಪರಿಮಳ), ಶಕುಂತಲ ಒಡೆಯರ್(ಪಂಕಜಾಕ್ಷಿ) ಹಾಗೂ ಚಂದ್ರಶೇಖರ್ ಒಡೆಯರ್ (ವಾದ್ಯ) ಇದ್ದಾರೆ. ಎರಡು ಭಾಗಗಳಲ್ಲಿ ಹೊರಹೊಮ್ಮಿರುವ ಈ ಸಾಮಾಜಿಕ ನಗೆನಾಟಕದ ವಿಸಿಡಿಯ ಹೊದಿಕೆ ಆಕರ್ಷಕವಾಗಿದೆ. ಈ ವಿಡಿಯೋ ಸೀಡಿಯ ಬಿಡಿ ಮಾರಾಟದರ - 65 ರು.ಗಳು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X