ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಎಸ್‌ನ : ನಿನ ್ನ ಪ್ರೀತಿಗೆ ಅದರ ರೀತಿಗೆ...

By Staff
|
Google Oneindia Kannada News


ಕವಿಯಾಗಿದ್ದ ಅಷ್ಟೂ ದಿನ ಕೆಎಸ್‌ನ ಯಾವ ಪಂಥಕ್ಕೂ ಸೇರಲಿಲ್ಲ. ಯಾರನ್ನೋ ಮೆಚ್ಚಿಸಲು ಬರೆಯಲಿಲ್ಲ. ಅಷ್ಟೇ ಅಲ್ಲ. ಆರು ದಶಕಗಳ ಕಾವ್ಯ ಯಾತ್ರೆಯಲ್ಲಿ ಪ್ರೀತಿಯ ವಿಷಯ ಬಿಟ್ಟು ಬೇರೇನನ್ನೂ ಬರೆಯಲಿಲ್ಲ. ಒಂದೆರಡು ಸಂದರ್ಭಗಳಲ್ಲಿ ಅವರ ವಾರಿಗೆಯ ಕವಿ ಮಿತ್ರರು, ಗಂಡ-ಹೆಂಡತಿಯ ಸರಸ-ಸಲ್ಲಾಪವನ್ನೇ ಅದೆಷ್ಟು ದಿನಾಂತ ಬರೀತೀರಿ? ಬೇರೆ ಏನಾದ್ರೂ ಯೋಚಿಸಿ ಅಂದರಂತೆ! ಕೆಎಸ್‌ನ ಅದಕ್ಕೆ ಪ್ರತಿಯಾಡಲಿಲ್ಲ. ಜತೆಗೆ ಒಲವಿನ ವಿಷಯ ಬಿಟ್ಟು ಬೇರೆಡೆಗೆ ತಿರುಗಲೂ ಇಲ್ಲ!

ಇತ್ತ, ಬುದ್ಧಿ ಹೇಳಿದವರೂ ತೆಪ್ಪಗಿರಲಿಲ್ಲ. ಕೆಎಸ್‌ನರನ್ನು ರೇಗಿಸಿದರು. ಪದ್ಯ ಬರೆದು ಟೀಕಿಸಿದರು. ಯಾವಾಗ್ಲೂ ಅದೇ ಹೂವು, ಚಂದ್ರ, ಮಲ್ಲಿಗೆಯ ಕುರಿತೇ ಬರೀತಾನಲ್ಲಪಾ, ಅವನ ಅನುಭವ ತೆಳುವು ಅಂದೂಬಿಟ್ಟರು. ಈವಾಗಿನ ಕವಿಗಳಾಗಿದ್ದರೆ ಒಂದು ಪತ್ರಿಕಾಗೋಷ್ಠಿ ಕರೆದು ಟೀಕಿಸಿದವರ ಜನ್ಮ ಜಾಲಾಡುತ್ತಿದ್ದರೋ ಏನೋ? ಆದರೆ ಕೆಎಸ್‌ನ ಹಾಗೆ ಮಾಡಲಿಲ್ಲ. ಬದಲಿಗೆ ಹೀಗೆ ಬರೆದರು-

‘ಇವನ ಅನುಭವ ತೆಳುವು’ ಎಂದ ಟೀಕೆಗೆ ನಕ್ಕೆ
ಎಂಟು ಮಕ್ಕಳು ನನಗೆ, ಉತ್ತರಿಸಿದೆ
‘ಅಂದವರ ಬಾಯಿಗಿದೊ ನಾನು ಬೇವಿನ ಚಕ್ಕೆ
ನನ್ನ ದನಿಯನು ಕೂಡ ಎತ್ತರಿಸಿದೆ’

***

ಬದುಕಿದ್ದಿದ್ದರೆ ಇದೇ 26ಕ್ಕೆ ಕೆಎಸ್‌ನ ಅವರಿಗೆ 92 ತುಂಬುತ್ತಿತ್ತು. ಪ್ರತಿ ಬಾರಿಯ ಹುಟ್ಟುಹಬ್ಬದ ಸಂದರ್ಭದಲ್ಲೂ ನನ್ನ ಬರ್ತ್‌ಡೇನ ಇಡೀ ದೇಶವೇ ಆಚರಿಸುತ್ತೆ ಎಂದು ಹೆಮ್ಮೆಯಿಂದ ಹೇಳುತ್ತಿದ್ದ ಅವರು, ಒಂದು ಒಳ್ಳೆಯ ಪದ್ಯ ಬರೆದ ಮರುಕ್ಷಣವೇ ಇನ್ನೊಂದು ಪದ್ಯ ಕುರಿತು ಧ್ಯಾನಿಸುತ್ತಿದ್ದರು.

ಕೆಎಸ್‌ನ ಅವರೊಳಗಿದ್ದ ಕವಿ ಅದೆಷ್ಟು ದೂರದೃಷ್ಟಿ ಹೊಂದಿದ್ದ ಅಂದರೆ- ಅವರು ನಾಲ್ಕು ದಶಕಗಳ ಹಿಂದೆ ಬರೆದ ಪದ್ಯಗಳೇ ಇಂದಿನ ತರುಣ-ತರುಣಿಯರ ಎದೆಯಾ ಳದ ಹಾಡಾಗಿವೆ. ಅವರ ದಾಂಪತ್ಯ ಗೀತೆ ಮನೆ ಮನೆಯ ಮಾತಾಗಿದೆ. ಅವರ ಕವನಗಳಲ್ಲಿನ ಕೋರಿಕೆ ಎಲ್ಲ ಪ್ರೇಮಾತ್ಮಗಳ ಮನದ ಬೇಡಿಕೆಯೂ ಆಗಿದೆ !

ಕೆಎಸ್‌ನ ಈಗ ನಮ್ಮೊಂದಿಗಿಲ್ಲ ಅಂದರೆ, ಲೋಕ ಒಪ್ಪುವುದಿಲ್ಲ. ಎಲ್ಲಿಯವರೆಗೆ ಈ ಜಗತ್ತಿನಲ್ಲಿ ಮಲ್ಲಿಗೆಯ ಕಂಪು, ಒಲವಿನ ಮಾಧುರ್ಯ, ಪಿಸುಮಾತಿನ ಸಂವೇದನೆ, ಪ್ರೀತಿಯ ಮನಸುಗಳ ಕಲರವ ಇರುತ್ತದೋ ಅಲ್ಲಿಯವರೆಗೂ ಕೆಎಸ್‌ನ ಇದ್ದೇ ಇರುತ್ತಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಹೆಂಡತಿಯನ್ನು ನೆನೆದು ಹೀಗೆ ಬರೆದರು-

ನೆನೆಯುತ್ತ ನಿನಗಲ್ಲಿ ತುಂಬು ನಿದ್ದೆಯು ಬರಲಿ
ಹೊಂಗನಸು ನಿದ್ದೆಯಲಿ ಕಂಡು ಬರಲಿ
ನೀ ಮುಡಿದ ಹೂವು ಬಾಡದೆ ಇರಲಿ, ಸುಖವಿರಲಿ
ನಿನ್ನೊಲವೆ ನಿನ್ನನ್ನು ಕಾಪಾಡಲಿ

‘ಅವರನ್ನು’ ನಿನ್ನ ಪ್ರೀತಿಗೆ ಅದರ ರೀತಿಗೆ/ಕಣ್ಣ ಹನಿಗಳೆ ಕಾಣಿಕೆ/ಕಾಲ ವಳಿಸದ ನೆಲದ ಚೆಲುವಿಗೆ/ನಿನ್ನ ಪ್ರೀತಿಯೆ ಹೋಲಿಕೆ? ಎಂಬ ಅವರದೇ ಪದ್ಯದೊಂದಿಗೆ / ನೆನಪಿಸಿಕೊಂಡು ನಮಸ್ಕರಿಸೋಣ...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X