• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೆಎಸ್‌ನ : ನಿನ ್ನ ಪ್ರೀತಿಗೆ ಅದರ ರೀತಿಗೆ...

By Staff
|

ಬದುಕಿದ್ದಿದ್ದರೆ ಇಂದಿಗೆ(ಜ.26) ಕೆ.ಎಸ್‌.ನರಸಿಂಹಸ್ವಾಮಿ ಅವರಿಗೆ 92 ತುಂಬುತ್ತಿತ್ತು. ಪ್ರತಿ ಬಾರಿಯ ಹುಟ್ಟುಹಬ್ಬದ ಸಂದರ್ಭದಲ್ಲೂ ನನ್ನ ಬರ್ತ್‌ಡೇನ ಇಡೀ ದೇಶವೇ ಆಚರಿಸುತ್ತೆ ಎಂದು ಹೆಮ್ಮೆಯಿಂದ ಹೇಳುತ್ತಿದ್ದ ಅವರು, ತಮ್ಮ ಪದ್ಯಗಳ ಮೂಲಕ ಸದಾ ಅಮರ.

ನಕ್ಕ ಹಾಗೆ ನಟಿಸಬೇಡ, ನಕ್ಕು ಬಿಡು ಸುಮ್ಮನೆ;

ಬೆಳಕಾಗಲಿ ತಂಪಾಗಲಿ ನಿನ್ನೊಲವಿನ ಒಳಮನೆ

ನಿನ್ನೊಲವಿನ ತೆರೆಗಳಲ್ಲಿ ಬೆಳ್ದಿಂಗಳು ಹೊರಳಲಿ

ನಿನ್ನ ಹಸಿರು ಕನಸಿನಲ್ಲಿ ಮಲ್ಲಿಗೆ ಹೂವರಳಲಿ!

Noted Kannada Poet K S Narasimhaswamyಮೈಸೂರು ಅನಂತಸ್ವಾಮಿಯವರ ಇಂಪಿಂಪು ದನಿಯಲ್ಲಿ ಈ ಹಾಡು ಕೇಳುತ್ತಿದ್ದರೆ ಮನಸ್ಸು ತಲ್ಲಣಗೊಳ್ಳುತ್ತದೆ. ನೆನಪೆಂಬುದು ಯೌವನದ ದಿನಗಳಿಗೆ ಹಾರಿ ಹೋಗುತ್ತದೆ. ಹೌದಲ್ಲವಾ? ಆ ದಿನಗಳಲ್ಲಿ ನಮಗೆ ಗೆಳತಿ ಇದ್ದಳು. ಅವಳೊಂದಿಗೆ ಸಲುಗೆಯಿತ್ತು. ಅದು ಪ್ರೀತಿಯೂ ಆಗಿತ್ತು. ಅದೇ ಖುಷಿಯಲ್ಲಿ ಗೆಳತಿಯಾಂದಿಗೆ ಮಾತಿಗೆ ಕೂತು ಅ ‘‘ಸಾಯುವವರೆಗೂ ನಾವು ಜತೆಯಾಗಿಯೇ ಇರೋಣ. ಒಂದಾಗಿ ಬಾಳೋಣ. ಸುಖ-ದುಃಖ ಹಂಚಿಕೊಳ್ಳೋಣ. ಹುಸಿ ಮುನಿಸು ದೂರವಿಡೋಣ ಮತ್ತು ಜಗಳವನ್ನು ಆಡದೇ ಇರೋಣ’’ ಎಂದು ಆಣೆಪ್ರಮಾಣ ಮಾಡಿದ್ದೆವಲ್ಲ? ಹೀಗೆ ಮಾತಾಡಿಕೊಂಡ ತಾಸೆರಡು ತಾಸಿಗೇ ಯಾವುದೋ ಕಾರಣಕ್ಕೆ ಗೆಳತಿ ಮುನಿದು ಕೂತಾಗ, ರಾಜಿಗೆ ನಿಂತಿದ್ದೆವಲ್ಲ? ಕಡೆಗೂ ಆ ಗೆಳತಿ ಮುನಿಸು ಮರೆತು, ಹುಸಿಮುನಿಸು ತೋರುತ್ತಲೇ ಎದುರು ನಿಂತಾಗ ನಾವೆಲ್ಲರೂ ಹಾಡಿದ್ದ ಹಾಡೇ ಅದು-

ನಕ್ಕ ಹಾಗೆ ನಟಿಸ ಬೇಡ, ನಕ್ಕು ಬಿಡು ಸುಮ್ಮನೆ;

ಬೆಳಕಾಗಲಿ ತಂಪಾಗಲಿ ನಿನ್ನೊಲವಿನ ಒಳಮನೆ !

ಜಗತ್ತಿಗೇ ಗೊತ್ತಿರುವ ಹಾಗೆ- ‘ನಕ್ಕ ಹಾಗೆ ನಟಿಸಬೇಡ’ ಹಾಡು ಬರೆದವರು ಕೆ.ಎಸ್‌. ನರಸಿಂಹಸ್ವಾಮಿ. ಆದರೆ, ಅವರ ಬಹುಪಾಲು ಪದ್ಯಗಳನ್ನು ಓದಿದಾಗೆಲ್ಲ ಅರೆ, ಇದು ನಮ್ಮೆದೆಯ ಪಿಸುಮಾತೇ ಅಲ್ಲವೆ? ಅದೆಷ್ಟೋ ಸಂದರ್ಭಗಳಲ್ಲಿ ಒಲಿದು ಬಂದವಳ ನೆಪದಲ್ಲಿ ನಾವೆಲ್ಲ ಅಂಥ ಹಾಡುಗಳಲ್ಲೇ ತೇಲಿದವರಲ್ಲವೆ? ‘ಅವಳ’ ಮುಂದೆ ಮಂಡಿಯೂರಿ ಕೂತು ಬೇಡಿಕೊಂಡವರೇ ಅಲ್ಲವೆ? ನಮ್ಮೊಳಗಿನ ಹಾಡು ಅಲ್ಲೆಲ್ಲೋ ಕೂತು ಪದ್ಯ ಬರೆದ ನರಸಿಂಹಸ್ವಾಮಿಯವರಿಗೆ ಹೇಗೆ ಕೇಳಿಸಿತು? ಅಥವಾ ನಮ್ಮೊಳಗೆ ಬಂದಂಥ ಭಾವನೆ ಕೆ.ಎಸ್‌.ನ. ಅವರನ್ನೂ ಕಾಡಿತ್ತೇ? ಅವರು ಪ್ರತಿಯಾಂದನ್ನೂ ಅನುಭವಿಸಿ ಬರೆದರೋ ಅಥವಾ ಯಾರನ್ನೋ ಆವಾಹಿಸಿಕೊಂಡು ಬರೆದರೋ...? ಎಂಬ ಪ್ರಶ್ನೆಗಳು ಬಿಡದೆ ಕಾಡುತ್ತವೆ.

ಕೆ.ಎಸ್‌.ನ. ಅವರ ನಂತರ ಅವರನ್ನು ಸರಿಗಟ್ಟುವಂಥ ಇನ್ನೊಬ್ಬ ಕವಿ ಬರಲೇ ಇಲ್ಲ ಅನಿಸಿದಾಗ ಮಾತ್ರ ಅವರ ಪದ್ಯಗಳೆಲ್ಲ ‘ಅನುಭವದ ಮಲ್ಲಿಗೆಯ ತೋಟದಲ್ಲಿ ಅರಳಿದಂಥವೇ’ ಎಂಬುದು ಖಚಿತವಾಗುತ್ತದೆ. ಅವರ ಪದ್ಯಗಳು ಈಗಲೂ ನಮ್ಮ ಬದುಕಿನ ಹಾಡುಗಳೇ ಆಗಿವೆ ಎಂಬುದು ಸ್ಪಷ್ಟವಾಗುತ್ತದೆ. ಅವರ ಪದ್ಯಗಳು ನಮ್ಮ ಬದುಕಿನ ಹಾಡುಗಳೇ ಆಗಿವೆ ಎಂಬುದು ನೆನಪಾದಾಗ ಮಾತ್ರ ಮನಸ್ಸು ಅನಿರ್ವಚನೀಯ ಆನಂದದ ಕಡಲಲ್ಲಿ ಮಿಂದು ಉದ್ಗರಿಸುತ್ತದೆ; ಕೆ.ಎಸ್‌.ನ. ಅವರಿಗೆ ನಮಸ್ಕಾರ!

***

ದೀಪವೂ ನಿನ್ನದೆ, ಗಾಳಿಯೂ ನಿನ್ನದೆ ಆರದಿರಲಿ ಬೆಳಕು ಕಡಲೂ ನಿನ್ನದೆ, ಹಡಗೂ ನಿನ್ನದೆಮುಳುಗದಿರಲಿ ಬದುಕು ಎಂದು ಬರೆದವರು ಕೆಎಸ್‌ನ. ಸ್ವಾರಸ್ಯದ ಸಂಗತಿ ಎಂದರೆ ತಮ್ಮ ಎಲ್ಲ ಪದ್ಯಗಳಿಗೂ ಅವರು, ಪತ್ನಿ ವೆಂಕಮ್ಮ ಅವರನ್ನೇ ನಾಯಕಿ ಮಾಡಿಕೊಂಡು ಬರೆದರು. ಪದ್ಯಗಳ ಸಂಖ್ಯೆ ಹೆಚ್ಚುತ್ತ ಹೋದಂತೆಲ್ಲ ಕವಿಗೂ, ಅವರ ಪತ್ನಿಗೂ ವಯಸ್ಸಾಯಿತು. ಆದರೆ ಅವರ ಪ್ರೀತಿಗೆ ವಯಸ್ಸಾಗಲಿಲ್ಲ. ಅವರ ಕಥಾನಾಯಕಿಗೂ ವಯಸ್ಸಾಗಲಿಲ್ಲ! 80ರ ದಶಕದಲ್ಲಿ ಅನಂತನಾಗ್‌-ಲಕ್ಷ್ಮಿ ಜೋಡಿಯ ‘ಅಮರಾ ಮಧುರಾ ಪ್ರೇಮ’ದ ಸಿನಿಮಾಗಳಿದ್ದವಲ್ಲ? ಬಹುಶಃ ಬದುಕಿಡೀ ಕೆಎಸ್‌ನ-ವೆಂಕಮ್ಮ ದಂಪತಿ ಹಾಗೇ ಬದುಕಿದರು.

ಅವರು ಪರಸ್ಪರರ ಮೇಲೆ ಸಿಡುಕಿದ್ದು ಯಾರಿಗೂ ಗೊತ್ತಾಗಲಿಲ್ಲ. ಸಂಕಟದ ಸಂದರ್ಭದಲ್ಲಿ ಇಬ್ಬರೂ ಬಿಕ್ಕಳಿಸಿದರು ನಿಜ. ಆಗಲೂ ಸದ್ದಾಗಲಿಲ್ಲ. ಆದರೆ, ಒಂದೊಂದು ಹೊಸ ಪದ್ಯದಲ್ಲೂ ಅವರ ದಾಂಪತ್ಯದ ನರುಗಂಪಿತ್ತು. ಕೆಎಸ್‌ನ ಅವರಿಗೆ ತಮ್ಮ ಪತ್ನಿಯ ಮೇಲೆ ಅದೆಂಥ ಮೋಹವಿತ್ತೆಂದರೆ-ಅವರು ಕನಸಿನಲ್ಲಿ ಸಹ ಆಕೆಯನ್ನೇ ಬಯಸಿದರು. ಆಕೆಯಾಂದಿಗೇ ಮಾತಾಡಿದರು. ಅದನ್ನೇ ‘ಒಂದಿರುಳ ಕನಸಿನಲಿ ನನ್ನವಳ ಕೇಳಿದೆನು’ ಎಂದು ಬರೆದೂ ಬಿಟ್ಟರು! ಪ್ರಾಮಾಣಿಕವಾಗಿ ಒಪ್ಪಿಕೊಳ್ಳೋಣ: ಕನಸಿನಲ್ಲಿ ಹೆಂಡತಿಯ ಬದಲು ಬೇರೆ ಹೆಂಗಸೇ ಬರಲಿ ಎಂಬುದು ನಮ್ಮ ನಿಮ್ಮೆಲ್ಲರ ಕಳ್ಳ ಆಸೆ. ಆದರೆ ಕನಸಿನಲ್ಲೂ ಹೆಂಡತಿಯನ್ನೇ ಬಯಸಿದರಲ್ಲ ಕೆಎಸ್‌ನ? ಅವರು ಗ್ರೇಟ್‌ ಮತ್ತು ಗ್ರೇಟೆಸ್ಟ್‌ ಅನ್ನಲು ಮತ್ಯಾವ ಸಾಕ್ಷಿ ಬೇಕು?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X