ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಜ್ಯೋತಿಷ್ಯವೆಂಬುದು ವಿಜ್ಞಾನ.. ನಂಬಿದರೆ ತಪ್ಪೇನು?’

By Staff
|
Google Oneindia Kannada News


ಐಶ್ವರ್ಯ ರೈ-ಅಭಿಷೇಕ್‌ ಮದುವೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಬೆಂಗಳೂರಿನ ಚಂದ್ರಶೇಖರ ಸ್ವಾಮೀಜಿ ಜೊತೆ ಮಿನಿ ಸಂದರ್ಶನ.

Astrology is a science, says Chandrashekhara Swamiji1. ನಿಮ್ಮ ದೃಷ್ಟಿಯಲ್ಲಿ ಜ್ಯೋತಿಷ್ಯ ಅಂದ್ರೆ ಏನು?

ಜ್ಯೋತಿಷ್ಯ ಒಂದು ವೈಜ್ಞಾನಿಕ ಶಾಸ್ತ್ರ. ಇಲ್ಲಿ ಪ್ರತಿಯಾಂದಕ್ಕೂ ಆಳವಿದೆ, ಅರ್ಥವಿದೆ. ಇಲ್ಲಿ ಊಹೆಗೆ ಅವಕಾಶವಿಲ್ಲ. ಒಂದು ನಿಯಮಕ್ಕೆ ಅಂಟಿಕೊಂಡಿರುವ ತತ್ತ್ವಬದ್ಧವಾದ ಅಪರೂಪದ ವಿದ್ಯೆ. ಜಗತ್ತಿಗೆ ಭಾರತದ ಕೊಡುಗೆಯಿದು.

2. ಜ್ಯೋತಿಷ್ಯ ವಿಜ್ಞಾನವೆಂದ ಮೇಲೆ ನೂರಕ್ಕೆ ನೂರರಷ್ಟು ನಿಖರ, ಸತ್ಯವಾಗಿರಲೇಬೇಕಲ್ಲ?

ಹೌದು, ಅದರಲ್ಲಿ ಸಂದೇಹವಿಲ್ಲ. ಹುಟ್ಟಿದ ದಿನ, ತಿಂಗಳು, ಇಸವಿ, ಊರು ಮುಂತಾದ ಮಾಹಿತಿಗಳನ್ನು ಆಧರಿಸಿ ಜಾತಕ ಸಿದ್ಧಪಡಿಸಲಾಗುತ್ತದೆ. ಈ ಮಾಹಿತಿ ಇಟ್ಟುಕೊಂಡು ಜ್ಯೋತಿಷಿಗಳು ಜ್ಯೋತಿಷ್ಯ ಹೇಳುತ್ತಾರೆ.

3. ಆದರೂ ಜ್ಯೋತಿಷ್ಯ ಒಮ್ಮೊಮ್ಮೆ ಸುಳ್ಳಾಗುತ್ತದೆ ಏಕೆ?

ಜನರು ನೀಡಿದ ಮಾಹಿತಿ ನಿಖರವಾಗಿಲ್ಲದೇ ಇರಬಹುದು ಅಥವಾ ಜ್ಯೋತಿಷಿಗೆ ಶಾಸ್ತ್ರ ಸರಿಯಾಗಿ ಗೊತ್ತಿಲ್ಲದಿರಬಹುದು. ಈ ಎರಡೂ ಸಂದರ್ಭಗಳಲ್ಲಿ ಜ್ಯೋತಿಷ್ಯ ಸುಳ್ಳಾಗುವುದುಂಟು. ಜ್ಯೋತಿಷಿ ಸುಳ್ಳಾಗಬಹುದೇ ಹೊರತು ಜ್ಯೋತಿಷ್ಯವಲ್ಲ.

4. ಒಬ್ಬನ ಗ್ರಹಗತಿಯನ್ನು ಬದಲಿಸಬಹುದಾ?

ಕೆಲವರ ಹುಟ್ಟಿದ ಊರು, ಸಮಯ, ದಿನಾಂಕಕ್ಕೆ ಅನ್ವಯಿಸಿ ಕೆಲವು ದೋಷಗಳಿರುತ್ತವೆ. ಇದನ್ನು ಗ್ರಹ ದೋಷ ಅಂತಾರೆ. ಇದರ ನಿವಾರಣೆಗೆ ನಿಯಮ ಬದ್ಧ, ಶಾಸ್ತ್ರೋಕ್ತ ಪರಿಹಾರಗಳಿವೆ. ಹೋಮ, ಜಪ-ತಪಾದಿಗಳಿಂದಲೂ ಪರಿಹಾರ ಸಾಧ್ಯ.

5. ಈ ವೈಜ್ಞಾನಿಕ ಯುಗದಲ್ಲೂ ಜನ ಜ್ಯೋತಿಷ್ಯವನ್ನು ನಂಬುತ್ತಾರಲ್ಲ?

ತಪ್ಪೇನು? ಜ್ಯೋತಿಷ್ಯವೊಂದು ವಿಜ್ಞಾನವಾಗಿರುವಾಗ ಇದರಲ್ಲಿ ತಪ್ಪೇನು ಬಂತು? ಯಾವತ್ತೂ ಜ್ಯೋತಿಷ್ಯಕ್ಕೆ ಉಜ್ವಲ ಭವಿಷ್ಯವಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X