ದೆಹಲಿಯಲ್ಲಿ ಮೊಳಗಿದ ಜಾನಪದ ಕಲಾ ಉತ್ಸವ


ಹೊರನಾಡ ಕನ್ನಡ ಮಕ್ಕಳಿಗೆ ಕನ್ನಡ ಸಂಸ್ಕೃತಿಯ ಪರಿಚಯವನ್ನು ಮಾಡಿಕೊಡಲು ಅಗತ್ಯವಾದ ವೇದಿಕೆ ಜಾನಪದ ಕಲಾ ಮೇಳದ ಮೂಲಕ ದೆಹಲಿಯಲ್ಲಿ ನಿರ್ಮಾಣವಾಗುತ್ತಿದೆ.

Karnataka folk festival held at delhiದೆಹಲಿ ಕರ್ನಾಟಕ ಸಂಘಕ್ಕೆ ಕರ್ನಾಟಕ ಸರ್ಕಾರವು 50 ಲಕ್ಷ ದೇಣಿಗೆಯನ್ನು ಬಿಡುಗಡೆ ಮಾಡುವುದಾಗಿ ಕನ್ನಡ ಸಂಸ್ಕೃತಿ ಇಲಾಖೆಯ ಸಚಿವ ಎಚ್.ಎಸ್.ಮಹದೇವ ಪ್ರಸಾದ್ ಅವರು ಹೇಳಿದ್ದಾರೆ.

ದೆಹಲಿಯಲ್ಲಿ ಶನಿವಾರದಂದು ನಡೆದ ಜಾನಪದ ಕಲಾ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು ದೆಹಲಿಯಲ್ಲಿ ಕನ್ನಡ ಕಲಿಕಾ ತರಬೇತಿ ಸರ್ಟಿಫಿಕೇಟ್ ಕೋರ್ಸ್ ಅನ್ನು ಪ್ರಾರಂಭಿಸಲು ಕರ್ನಾಟಕ ಸರ್ಕಾರವು ಪ್ರಯತ್ನಿಸಲಿದೆ ಎಂದು ಕಾರ್ಯಕ್ರಮದಲ್ಲಿ ಹೇಳಿದರು. ಅವರು ದೆಹಲಿ ಕರ್ನಾಟಕ ಸಂಘವು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಜಂಟಿಯಾಗಿ ದೆಹಲಿಯಲ್ಲಿ ಜುಲೈ 21ಮತ್ತು22 ರಂದು ನಡೆಸುವ ಎರಡು ದಿನಗಳ ಕರ್ನಾಟಕ ಜಾನಪದ ಉತ್ಸವವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ದೆಹಲಿಯಲ್ಲಿ ಕರ್ನಾಟಕದ ವಿವಿಧ ಪ್ರದೇಶಗಳಿಂದ ಸುಮಾರು ಹದಿಮೂರು ತಂಡಗಳು ವಿವಿಧ ಜಾನಪದ ಕಲಾ ಪ್ರಕಾರಗಳನ್ನು ಪ್ರದರ್ಶಿಸುತ್ತ್ತಿವೆ.

ಹೊರನಾಡ ಕನ್ನಡ ಮಕ್ಕಳಿಗೆ ಕನ್ನಡ ಸಂಸ್ಕೃತಿಯ ಪರಿಚಯವನ್ನು ಮಾಡಿಕೊಡಲು ಬೆಂಗಳೂರಿನಲ್ಲಿ ಕ್ರಿಸ್‌ಮಸ್ ರಜೆ ಸಮಯದಲ್ಲಿ 10 ದಿನಗಳ ಶಿಬಿರವೊಂದನ್ನು ನಡೆಸಲಾಗುವುದು ಎಂದು ಅವರು ತಿಳಿಸಿದರು. ಇದೇ ಸಂದರ್ಭದಲ್ಲಿ ಅವರು ದೇಶದ ನಾಲ್ಕು ಮಹಾನಗರದಲ್ಲಿ ಸುವರ್ಣ ಕರ್ನಾಟಕ ಉತ್ಸವಾಚರಣೆಯನ್ನು ನಡೆಸುವ ಬಗ್ಗೆ ಕೂಡ ತಿಳಿಸಿದರು.

Karnataka folk festival held at delhiಸಮಾರಂಭದ ಅದ್ಯಕ್ಷತೆಯನ್ನು ವಹಿಸಿದ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಅದ್ಯಕ್ಷ ಕೆರೆಮನೆ ಶಂಭು ಹೆಗಡೆಯವರು ಕರ್ನಾಟಕದ ಎಲ್ಲಾ ಕಲಾ ಪ್ರಕಾರಗಳನ್ನು ಅಂತಾರಾ ಷ್ಟ್ರೀಯ ಮಟ್ಟದಲ್ಲಿ ಕೊಂಡೊಯ್ದು ಅದನ್ನು ಜಾಗತಿಕ ಮಟ್ಟದಲ್ಲಿ ಪಸರಿಸಬೇಕೆಂದು ಕರೆ ನೀಡಿದರು. ಸಾಂಸ್ಕೃತಿಕ ವಿನಿಮಯದಿಂದಲೇ ವಿವಿಧ ಕಲಾ ಪ್ರಕಾರಗಳು ಬೆಳವಣಿಗೆ ಹೊಂದುತ್ತವೆ ಎಂದು ಅವರು ಹೇಳಿದರು.

ದೆಹಲಿ ಕರ್ನಾಟಕ ಸಂಘದ ಅದ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆಯವರು ಪ್ರಾಸ್ತವಿಕವಾಗಿ ಮಾತನಾಡುತ್ತ ಕರ್ನಾಟಕ ಜಾನಪದ ಕಲೆಗಳು ಕಾಲ, ಸ್ಥಳ ಮತ್ತು ಸಮುದಾಯ ಬದ್ಧವಾಗಿದ್ದು ಅದನ್ನು ಮೀರುವ ಪ್ರಯತ್ನವನ್ನು ಮಾಡಿದಾಗ ಅದು ಬೆಳವಣಿಗೆ ಹೊಂದುತ್ತದೆ ಎಂದು ಹೇಳಿದರು. ಅದೇ ಸಂದರ್ಭದಲ್ಲಿ ಜಾನಪದ ಯಕ್ಷಗಾನ ಅಕಾಡೆಮಿಯು ಡಾ.ಬಿಳಿಮಲೆಯವರಿಗೆ 2006 ನೇ ಸಾಲಿನ ಹೊರನಾಡ ಕನ್ನಡಿಗ ಪ್ರಶಸ್ತಿಯನ್ನು ನೀಡಿ ಗೌರವಿಸಿತು.

ಪೂರಕ ಓದಿಗೆ:

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+