• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜೇಸುದಾಸ್‌ ವಿವಾದ : ಆತನೊಲಿದಮೇಲೆ ಯಾತರ ಕುಲವಯ್ಯಾ?

By Staff
|

ಹೆಸರಾಂತ ಗಾಯಕ ಜೇಸುದಾಸ್‌, ಗುರುವಾಯೂರಿನ ಕೃಷ್ಣ ದೇಗುಲ ಪ್ರವೇಶಿಸಬಹುದೇ? -ಇದು ಧರ್ಮ ಸೂಕ್ಷ್ಮ. ಜೊತೆಗೆ ಸದ್ಯದ ದೊಡ್ಡ ವಿವಾದ! ಈ ಲೇಖನದ ಆರಂಭದಲ್ಲಿ ಹಿಂದೂ ಧರ್ಮದ ಸಾರಸತ್ವಗಳನ್ನು ವಿವರಿಸಿ, ಅವುಗಳನ್ವಯ ವಿವಾದಕ್ಕೆ ತೆರೆ ಎಳೆಯುವ ಮಾರ್ಗಸೂತ್ರವನ್ನು ಕೊನೆಯಲ್ಲಿ ಪ್ರಕಟಿಸಲಾಗಿದೆ...

K.J. Yesudas has taken music beyond any religion‘ಹಿಂದೂ ಧರ್ಮ ನಿಂತ ನೀರಲ್ಲ, ಇದೊಂದು ನಿರ್ಮಲ ಪ್ರವಾಹ ಎಂಬುದನ್ನು ಅರಿತವರು ಬದಲಾವಣೆಗೆ ಹೆದರುವುದಿಲ್ಲ’

ಇಸ್ಲಾಂ, ಕ್ರೈಸ್ತ ಮತ್ತಿತರ ‘ಮತ’ಗಳಂತೆ ಹಿಂದೂ ಧರ್ಮ ಕೇವಲ ನಂಬಿಕೆಯಮೇಲೆ ನಿಂತಿಲ್ಲ. ಇತರ ಮತಗಳು ಸರಳವಾಗಿವೆ. ಎಲ್ಲಾ ಮಾನವರೂ ಸಾಮರ್ಥ್ಯದಲ್ಲಿ ಸಮಾನರು ಹಾಗೂ ಸ್ವರೂಪತ: ಪಾಪಿಗಳು ಎಂದು ಬೋಧಿಸುತ್ತವೆ. ಯಾರೂ ಕಂಡಿಲ್ಲದ ಅಮೂರ್ತವಾದ ದೇವರಿಗೆ ಶರಣಾಗಿ ನಡೆದುಕೊಂಡಲ್ಲಿ ಸಕಲ ಪಾಪಗಳೂ ಪರಿಹಾರವಾಗಿ ಮರಣದ ನಂತರ ಸುಖಲೋಕ ಪ್ರಾಪ್ತಿಯಾಗುತ್ತದೆ ಎಂದು ತಿಳಿಸುತ್ತವೆ. ಹೀಗೆ ‘ಕ್ಯಾರಟ್‌ ಅನ್ಡ್‌ ಸ್ಟಿಕ್‌’ ತತ್ವವೇ ಈ ಮತಗಳ ಮೂಲ ಮಂತ್ರ.

ಹಿಂದೂ ಪದ್ಧತಿಯನ್ನು ಧರ್ಮವೆಂದು ಕರೆಯಬಹುದಾದರೆ ಇತರ ಪದ್ಧತಿಗಳನ್ನು ‘ಮತ’ ಎಂದು ಕರೆಯುವುದು ಸೂಕ್ತ. ಹಿಂದೂ ಪದ್ಧತಿಯ ಧರ್ಮ ಶಬ್ದ ವಿಸ್ತೃತವಾದ, ವಿವಿಧ ವಿವರಣೆಸಹಿತ ರೂಪುಗೊಂಡಿದೆ. ಇದಕ್ಕೆ ಇಂಗ್ಲೀಷಿನ ‘ರಿಲಿಜಿಯನ್‌’ ಶಬ್ದ ಸಮನಾದದ್ದಾಗಲಿ ಸೂಕ್ತವಾದದ್ದಾಗಲೀ ಅಲ್ಲ.

ಈ ಇತರ ಮತಗಳಲ್ಲಿ ತನ್ನ ಅನುಯಾಯಿಗಳಿಗೆ ಹೆಚ್ಚಿನ ಸ್ವಾತಂತ್ರವೇನೂ ಇಲ್ಲ. ಆಯಾ ಧರ್ಮಗುರುಗಳು ಹೇಳಿದ್ದನ್ನು ಪಾಲಿಸುವುದಷ್ಟೇ ಕರ್ತವ್ಯ. ಇಸ್ಲಾಂ ಮತದಲ್ಲಂತೂ ತನ್ನ ಧರ್ಮೀಯರ ಆಚರಣೆಗಳ ತಪ್ಪು ಒಪ್ಪುಗಳನ್ನು ಪರಿವೀಕ್ಷಿಸುವ ಸಮಿತಿಯೇ ಇದೆ. ತಬ್ಲೀಗ್‌, ಮುಸಲ್ಮಾನರು ಯಾವ ಮಸೀದಿಗೆ ಹೋಗುತ್ತಾರೆ, ನಮಾಜ್‌ ಮಾಡುತ್ತಾರೆಯೇ ಇಲ್ಲವೇ, ಜಕಾತ್‌ ಕೊಡುತ್ತಿದ್ದಾರೆಯೇ ಇಲ್ಲವೇ, ವಸ್ತ್ರಸಂಹಿತೆಯ ಪಾಲನೆ ಇತ್ಯಾದಿ ವಿವರಗಳನ್ನು ಪರಿಶೀಲಿಸುತ್ತಾ ಕಣ್ಣಿಟ್ಟಿರುತ್ತದೆ.

ಕ್ರೈಸ್ತರಲ್ಲಿ ಈ ಮಟ್ಟದ ‘ನಿಗಾ’ ಇಲ್ಲದಿದ್ದರೂ ಚರ್ಚಿನಲ್ಲಿ ತನ್ನವರ ವಿವರಗಳನ್ನು ದಾಖಲಿಡುವ ವ್ಯವಸ್ಥೆಇದೆ. ಆದರೆ ಹಿಂದೂಗಳಲ್ಲಿ ಯಾರು ಯಾವ ದೇವಸ್ಥಾನಕ್ಕಾದರೂ, ಮಠಕ್ಕಾದರೂ ಹೋಗಬಹುದು, ಹೋಗದಿರಲೂಬಹುದು, ಕಾಣಿಕೆ ಕೊಟ್ಟರೂ ಸರಿಯೇ, ಕೊಡದೆ ಬಿಟ್ಟವರೂ ಸರಿಯೇ, ಇಲ್ಲಿ ಕಣ್ಗಾವಲು, ನಿಗಾ ವಹಿಸುವುದು (ಪರೋಕ್ಷ ಬೆದರಿದೆ) ಇತ್ಯಾದಿ ಇಲ್ಲವೇ ಇಲ್ಲ.

ಇನ್ನು ಆಧ್ಯಾತ್ಮಿಕ ವಿಚಾರಗಳನ್ನು ಹೋಲಿಸುವುದಾದರೆ, ಹಿಂದೂಧರ್ಮದಲ್ಲಿ ನಂಬಿಕೆಯಿಂದ ಪ್ರಾರಂಭಮಾಡಿ ಕೊನೆಗೆ ಅದು ಸ್ವಾನುಭವದಲ್ಲಿ ಪರ್ಯವಸಾನವಾಗಬೇಕು. ಪ್ರಾರಂಭಕ್ಕೆ ನಂಬಿಕೆ, ಗುರುವಿನ ಮಾರ್ಗದರ್ಶನ, ಕೊನೆಯಲ್ಲಿ ಸಾಕ್ಷಾತ್ಕಾರ, ಈ ಶಿಷ್ಯ ತನ್ನ ಗುರುವಿಗೇ ಗುರುವಾಗಬಹುದು, (ಶಿಷ್ಯಾದಿಛ್ಛೇತ್‌ ಪರಾಜಯಂ) ಇಷ್ಟು ಸುಂದರವಾದ ಸುಲಭವಾದ ಸಾಧ್ಯತೆ ಬೇರೆಲ್ಲಿಯಾದರೂ ಇದ್ದರೆ ನನಗೆ ತಿಳಿದಿಲ್ಲ.

ಹಿಂದೂ ಸಂಸ್ಕೃತಿಯಲ್ಲಿ ಪ್ರತಿವ್ಯಕ್ತಿಯ ಅಃತಸ್ಸತ್ವ ವಿಶಿಷ್ಟವಾದದ್ದು. ಪ್ರತಿಯಾಬ್ಬರೂ ಅಮೃತಪುತ್ರರು, ಅಜ್ಞಾನದ ತೆರೆ ಸರಿದೊಡನೆ ದಿವ್ಯಾತ್ಮರು. ದೇವರು ಪೂಜಾಕ್ರಮಗಳು ಇವೆಲ್ಲಾ ಚಿತ್ತ ಶುದ್ಧಿಗಾಗಿ ಮಾಡುವ ಮನೋವ್ಯಾಯಾಮ. ಶುದ್ಧಚಿತ್ತಕ್ಕೆ ಅಲೌಕಿಕ ಆನಂದವೇ ಪ್ರಸಾದ, ನಿರವಧಿಸುಖ, ಇದು ತೀರ ವೈಯಕ್ತಿಕ ಅನುಭೂತಿ ಹಾಗೂ ಅನಿರ್ವಚನೀಯ. ಹೀಗಾಗಿ ಇಲ್ಲಿ ಯಾರಿಗೂ ಯಾರ ಕಾವಲೂ ಬೇಕಿಲ್ಲ, ಶಿಕ್ಷೆಯ ಬೆದರಿಕೆಯೂ ಇಲ್ಲ. ಇತರ ಮತಗಳಲ್ಲಿನ ಗುಲಾಮೀ ಪದ್ಧತಿ ಇಲ್ಲಿ ಅನಗತ್ಯ.

ದೈವ-ಮಾನುಷ ಸಂಬಂಧದ ಕುರಿತಾಗಿ ಹೋಲಿಸಿದರೆ ಹಿಂದೂಗಳಲ್ಲಿ ಈ ಸಂಬಂಧ ಅತ್ಯಂತ ವಿಶಿಷ್ಟವಾದದ್ದು, ಆಪ್ತವಾದದ್ದು. ಮನುಷ್ಯ-ಮನುಷ್ಯರ ನಡುವಿನ ಎಲ್ಲಾ ಸಂಬಂಧಗಳೂ ದೈವದೊಂದಿಗೆ ಸಾಧ್ಯ. ಇಲ್ಲಿರುವ ನಿಂದಾಸ್ತುತಿಗಳನ್ನು ಗಮನಿಸುವ ಇತರ ಮತೀಯರಿಗೆ ಇದರ ಮರ್ಮ ಅರಿವಾಗುವುದು ದು:ಸ್ಸಾಧ್ಯ. ಗೊಂದಲಗೊಳಿಸಬಹುದಾದ ಈ ವಿಚಾರ ತೀರಾ ಸಂಕೀರ್ಣವಾದದ್ದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more