• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತಮಿಳರು ಮೊದಲು ಸರ್ವಜ್ಞ ಪ್ರತಿಮೆ ಚೆನ್ನೈನಲ್ಲಿ ಸ್ಥಾಪಿಸಲಿ

By Staff
|

ಈ ಹಿಂದೆ ಇವರಿಬ್ಬರ ಪ್ರತಿಮೆ ಸ್ಥಾಪನೆ ಕುರಿತಂತೆ ಎರಡೂ ರಾಜ್ಯಗಳಲ್ಲಿ ಭಿನ್ನಾಭಿಪ್ರಾಯ ತಲೆದೋರಿತ್ತು. ವೈಮನಸ್ಯಕ್ಕೆ ಅನುವು ಮಾಡಿಕೊಡದ ಎರಡೂ ರಾಜ್ಯಗಳ ಸರ್ಕಾರಗಳು ಬೆಂಗಳೂರಿನಲ್ಲಿ ತಿರುವಳ್ಳುವರ್ ಮತ್ತು ಚೆನ್ನೈನಲ್ಲಿ ಸರ್ವಜ್ಞ ಪ್ರತಿಮೆ ಸ್ಥಾಪಿಸಬೇಕೆಂದು ಒಪ್ಪಂದಕ್ಕೆ ಬಂದಿದ್ದವು.

ಕಳೆದ ವಾರ ತಿರುವಳ್ಳುವರ್ ಪ್ರತಿಮೆ ಇದ್ದಕ್ಕಿದ್ದಂತೆ ಬೆಂಗಳೂರಿನ ಹಲಸೂರು ಕೆರೆ ದಂಡೆಯಲ್ಲಿ ಪ್ರತ್ಯಕ್ಷಗೊಂಡು ಮತ್ತೆ ಗೋಣಿಚೀಲ ಹೊದ್ದು ಮಲಗಿದ ಘಟನೆ ನಡೆದಿದೆ.

ಈ ಹಿಂದೆ ಇವರಿಬ್ಬರ ಪ್ರತಿಮೆ ಸ್ಥಾಪನೆ ಕುರಿತಂತೆ ಎರಡೂ ರಾಜ್ಯಗಳಲ್ಲಿ ಭಿನ್ನಾಭಿಪ್ರಾಯ ತಲೆದೋರಿತ್ತು. ವೈಮನಸ್ಯಕ್ಕೆ ಅನುವು ಮಾಡಿಕೊಡದ ಎರಡೂ ರಾಜ್ಯಗಳ ಸರ್ಕಾರಗಳು ಬೆಂಗಳೂರಿನಲ್ಲಿ ತಿರುವಳ್ಳುವರ್ ಮತ್ತು ಚೆನ್ನೈನಲ್ಲಿ ಸರ್ವಜ್ಞ ಪ್ರತಿಮೆ ಸ್ಥಾಪಿಸಬೇಕೆಂದು ಒಪ್ಪಂದಕ್ಕೆ ಬಂದಿದ್ದವು.

1991ರ ಸೆಪ್ಟೆಂಬರ್ ತಿಂಗಳಿನಲ್ಲಿ, ಬೆಂಗಳೂರಿನ ಹಲಸೂರು ಕೆರೆ ಅಂಗಳದಲ್ಲಿ ತಿರುವಳ್ಳುವರ್ ಪ್ರತಿಮೆ ಅನಾವರಣಕ್ಕೆ ಅಂದಿನ ಬೆಂಗಳೂರು ನಗರ ಪಾಲಿಕೆ, ಕೆಲವು ತಮಿಳು ಹಿತಾಸಕ್ತಿದಾರರ ಒತ್ತಾಯಕ್ಕೆ ಮಣಿದು ಅನುಮತಿ ನೀಡಿತ್ತು. ತಮಿಳರ ಪರವಾದ ಈ ನಿಲುವು ಸಹಜವಾಗಿ ಕನ್ನಡಿಗರ ಸ್ವಾಭಿಮಾನವನ್ನು ಕೆಣಕಿತ್ತು. ಕನ್ನಡಪರ ಸಂಘಟನೆಗಳ ಒಗ್ಗೂಡಿದ ಪ್ರತಿಭಟನೆಯಿಂದಾಗಿ ಅನಾವರಣ ಸ್ಥಗಿತಗೊಂಡಿತ್ತು.

ಸಹೃದಯಿ ಕನ್ನಡಿಗರು ತಮಿಳರು ಸೇರಿದಂತೆ ಇತರ ಭಾಷಿಕರನ್ನು ಇಲ್ಲಿ ಸಹೋದರರಂತೆ ಬೆಳೆಸಿದ್ದಾರೆ. ಅವರ ಎಲ್ಲಾ ಆಗುಹೋಗುಗಳಿಗೆ ಸ್ಪಂದಿಸಿದ್ದಾರೆ. ತಿರುವಳ್ಳುವರ್ ಪ್ರತಿಮೆ ಸ್ಥಾಪನೆಗೆ ಸಹ ಕನ್ನಡಿಗ ಬೇಡವೆಂದಿಲ್ಲ, ಪರ್ಯಾಯವಾಗಿ ಚೆನ್ನೈನ ಪ್ರಮುಖ ಸ್ಥಳದಲ್ಲಿ ನಮ್ಮ ಸರ್ವಜ್ಞ ಕವಿಯ ಪ್ರತಿಮೆಯಿರಿಸಿ ಎಂಬ ಬೇಡಿಕೆ ಮಾತ್ರ ಇಟ್ಟಿದ್ದಾನೆ.

ಪ್ರತಿಮೆ ಸ್ಥಾಪನೆಯ ಹಿಂದಿನ ಉದ್ದೇಶಗಳು :
  • ಅಂದು ತಮಿಳರು ನಾವು ಬೆಂಗಳೂರಿನವರು ಆದರೆ ಕರ್ನಾಟಕಕ್ಕೆ ಸೇರಿದವರಲ್ಲ ಎಂದರು. ಅವರ ಉದ್ದೇಶ ಬೆಂಗಳೂರನ್ನು ಕೇಂದ್ರಾಡಳಿತ ಮಾಡುವುದು.
  • ಭಾರತ ಗಣರಾಜ್ಯವಾಗುವ ಸಮಯದಲ್ಲಿ ತಮಿಳರಿಗೆ ಬೇರೆಯದೆ ತಮಿಳು ದೇಶ ಬೇಕಿತ್ತು. ಆದರೆ ತಿರುವಳ್ಳುವರ್ "ರಾಷ್ಟ್ರ ಕವಿ", ಅವರ ಪ್ರತಿಮೆ ಸ್ಥಾಪನೆ ಬೇಡ ಎನ್ನುವ ಕನ್ನಡಿಗರು ಎಂತಹ ದೇಶ ಭಕ್ತರು ಎಂದು ಪ್ರಶ್ನಿಸಿದ್ದರು.
  • ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪಿಸಿ ಎಂದು ಬರಹಗಳನ್ನು ಬರೆಸಿ, ಸರ್ಕಾರವನ್ನು ಆಗ್ರಹಿಸಿದ್ದರು.
  • ತಿರುವಳ್ಳುವರ್ ಪ್ರತಿಮೆ ಸ್ಥಾಪಿಸಲು ಭರವಸೆ ನೀಡುವ, ಅದಕ್ಕೆ ಪ್ರಯತ್ನಿಸುವ ಸದಸ್ಯನಿಗೆ ಮಾತ್ರ ಚುನಾವಣೆಗಳಲ್ಲಿ ಮತ ಹಾಕಿ ಎಂದು ಇಲ್ಲಿನ ತಮಿಳು ಸಮುದಾಯಕ್ಕೆ ಆದೇಶವಿತ್ತು.
  • ವೀರಪ್ಪನ್ ಒತ್ತಾಸೆಯಿಂದ ರಾಜಕುಮಾರ್ ಬಿಡುಗಡೆ ಆಗಬೇಕಾದ್ರೆ ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪನೆ ಆಗಬೇಕು ಎಂಬ ಹಠವಿತ್ತು.

ತಮಿಳರು ಮೊದಲು ಸರ್ವಜ್ಞ ಪ್ರತಿಮೆಯನ್ನು ತಮಿಳುನಾಡಿನಲ್ಲಿ ಸ್ಥಾಪಿಸಿ ಒಮ್ಮೆಯಾದರೂ ದೊಡ್ಡವರೆನಿಸಿಕೊಳ್ಳಲಿ, ನಂತರದಲ್ಲಿ ಕನ್ನಡಿಗರು ತಿರುವಳ್ಳುವರ್ ಪ್ರತಿಮೆ ಸ್ಥಾಪನೆಗೆ ತಾವೇ ಖುದ್ದಾಗಿ ಮುಂದಾಗುತ್ತಾರೆ. ಎರಡು ಸರ್ಕಾರಗಳು-ಸಂಘಟನೆಗಳು ಕೂಡಿ ಇದನ್ನು ನಿರ್ಧರಿಸಿ ಪರಸ್ಪರರ ಸಂಸ್ಕೃತಿಯ ಬೆಳವಣಿಗೆಗೆ ಸಹಕಾರಿಯಾಗುವ ನಿಲುವು ಕಂಡುಕೊಳ್ಳಬೇಕಿದೆ.

ಇಬ್ಬರೂ ಐಕ್ಯತೆಯ ಸಂಕೇತ : ಸರ್ವಜ್ಞ 16-17ನೆಯ ಶತಮಾನದಲ್ಲಿ ನಮ್ಮ ನೆಲದಲ್ಲಿ ಜೀವಿಸಿದ್ದ ಕನ್ನಡದ ಮಹಾ ಧೀಮಂತ ವಚನಕಾರ. ಸಮಾಜದ ಅಂಕು-ಡೊಂಕುಗಳನ್ನು ಬಯಲಿಗೆಳೆದು, ಪರ-ವಿರೋಧಿ ಭಾವನೆಗಳನ್ನು ತ್ರಿಪದಿಗಳೆಂಬ ವಚನಗಳ ಮೂಲಕ ಜನಸಾಮಾನ್ಯರಲ್ಲಿ ಬಿತ್ತಿ ವಿಚಾರವಂತರನ್ನಾಗಿಸಿದ್ದ ಮಹಾನ್ ಕವಿ. ಆದರೆ ತಿರುವಳ್ಳುವರ್ ಜೀವನಕಾಲಕ್ಕೆ ಸಂಬಂದಪಟ್ಟ ಸ್ಥಳ, ಕಾಲ, ಇತ್ಯಾದಿ ಯಾವ ವಾಸ್ತವ ಸಂಗತಿಯೂ ಇದುವರೆಗೂ ತಿಳಿದುಬಂದಿಲ್ಲ. ತಮಿಳರು ಅವರನ್ನು ತಮ್ಮ ಕವಿ ಎಂದು ಸಾರಿದ್ದಾರೆ. ಬಲ್ಲವರು ತಿರುವಳ್ಳುವರ್ 2,000 ವರ್ಷಗಳ ಹಿಂದೆ ಜೀವಿಸಿದ್ದರು ಎಂದು ಹೇಳುತ್ತಾರೆ. ಸರ್ವಜ್ಙ ವಚನಗಳಂತೆ ತಿರುವಳ್ಳುವರ್ ರಚಿಸಿದ ತಿರುಕ್ಕುರುಳ್ ಸಹ ಯಾವುದೇ ಜಾತಿ, ಮತ, ಪಂಥಗಳ ಸಂಪ್ರದಾಯಗಳಿಗೂ ಕಟ್ಟು ಬೀಳದೆ ಮಾನವ ಕಲ್ಯಾಣವನ್ನೇ ಪರಮಗುರಿಯಾಗಿಸಿದ್ದ ವಿಚಾರಪೂರ್ಣ ಕೃತಿ.

ತಿರುವಳ್ಳುವರ್ ಹೇಳಿದ್ದಾರೆ : ತಮ್ಮ ಕರ್ತವ್ಯದಲ್ಲಿ ದೋಷವುಂಟಾಗದಂತೆ ಇನ್ನೊಬ್ಬರ ವಿಷಯದಲ್ಲಿ ಅನುಕಂಪವನ್ನು ತೋರಿಸುವವನಿಗೆ ಮತ್ತು ಕೊಟ್ಟು-ಪಡೆಯುವವನಿಗೆ ಈ ಜಗತ್ತೇ ಅಧೀನನಾಗುವುದು. ತಮಿಳು ನಾಯಕರು ತಿರುಕ್ಕುರಳ್ ಅನ್ನು ಮತ್ತೊಮ್ಮೆ ಅಧ್ಯಯನ ಮಾಡಿ ಪರರಾಜ್ಯಗಳವರೊಡನೆ ಹೇಗೆ ಅನ್ಯೋನ್ಯದಿಂದಿರಬೇಕು ಎಂಬುದನ್ನು ಇನ್ನೂ ಸರಿಯಾಗಿ ಅರಿಯಬೇಕಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more