• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶ್ವಪ್ರೇಮಿಗಳ ದಿನ-2007

By Staff
|

ಪ್ರೇಮದ ಹನಿ-2

ಹುಡುಗ-ಹುಡುಗಿ ಪ್ರೀತ್ಸೋದು ತಪ್ಪಾ?

ಹರಯ ಬಂದಾಗ ಯುವಕ-ಯುವತಿಯರ ಮನದಲ್ಲಿ ತನನಂ ತನನಂ... ಒಪ್ಪಿಕೊಂಡ ಪ್ರೀತಿ ಕೈಜಾರಿದಾಗ ಏನ್‌ ಮಾಡಬೇಕು? ಪ್ರೇಮಿಗಳಿಗೊಂದಿಷ್ಟು ಕಿವಿಮಾತು.

ಯುವ ಪ್ರೇಮ ತಪ್ಪೇ ? ತಪ್ಪೇ ? ಅನೇಕ ಯುವತಿಯರನ್ನು ಕಾಡುವ ಪ್ರಶ್ನೆ ಇದು. ಅವರ ಇತರ ಗೆಳತಿಯರ ಹಾಗೇ ತಾವೂ ರೊಮಾನ್ಸ್‌ ಅನುಭವಿಸಬೇಕೆಂದು ಅನಿಸುತ್ತದೆ. ಆದರೆ ಮನೆಯಲ್ಲಿ ಕಲಿತ ಮೌಲ್ಯಗಳಿಗೆ ಅದು ವಿರುಧ್ಧ ಎನಿಸಿ ಅದು ತಪ್ಪು, ಮಾಡಬಾರದು ಎನಿಸುತ್ತದೆ. ಈ ಆಸೆ ಮತ್ತು ಕಟ್ಟುಪಾಡುಗಳ ನಡುವೆ ಮನಸ್ಸಿನಲ್ಲಿ ನಡೆಯುವ ಸಂಘರ್ಷಗಳ ನಡುವೆ ಅವರ ಮನಸ್ಸು ಗೊಂದಲದಲ್ಲಿ ಬಿದ್ದು ಮುಖದಲ್ಲಿ ನಗೆಯನು ಅಳಿಸಿ ಬಿಡುತ್ತದೆ.

ಮಕ್ಕಳು ಹದಿ ವಯಸ್ಸಿಗೆ ಬರುತ್ತಿದ್ದ ಹಾಗೆ ದೈಹಿಕ ಹಾಗೂ ಮಾನಸಿಕ ಬದಲಾವಣೆಗಳು ಅವರ ನಡವಳಿಕೆಯನ್ನು ರೂಪಿಸಲಾರಂಭಿಸುತ್ತದೆ. ಕೆಲವೊಂದು ವಿಚಾರಗಳಲ್ಲಿ ಅವರು ಇನ್ನೂ ಮಕ್ಕಳಂತೆಯೇ ನಡೆದುಕೊಂದರೂ ಕೆಲವು ವಿಚಾರಗಳಲ್ಲಿ ಅವರು ಪ್ರೌಢರಂತೆ ವರ್ತಿಸಬೇಕು ಎಂದು ಬಯಸುವರು. ಇದಕ್ಕೆ ತಂದೆ ತಾಯಿಯರೂ ತಮ್ಮ ಕಾಣಿಕೆ ಸಲ್ಲಿಸುವರು - ಕೆಲವೊಮ್ಮೆ ನೀನೇನು ಎಳೆಯ ಮಗುವಾ ಎಂದು, ಕೆಲವೊಮ್ಮೆ ನೀನು ಇನ್ನೂ ಚಿಕ್ಕವನು/ಳು, ನಿನಗೆ ಗೊತ್ತಾಗುವುದಿಲ್ಲ ಎನ್ನುವರು..ಬಯ್ಯುವ ಧಾಟಿಯಲ್ಲಿ..

ಮನೆಯಲ್ಲಿ 7- 8ನೇಯ ವಯಸ್ಸಿನವರೆಗೆ ಕೇಳಿ, ನೋಡಿ ಕಲಿತ ಪಾಠಗಳು, ಅನಂತರ 12ನೆಯ ವಯಸ್ಸಿನವರೆಗೆ ಶಾಲೆಯಲ್ಲಿ ಕಲಿತ ಪಾಠಗಳು ಜೀವನದ ಉದ್ದಕ್ಕೂ ನಮ್ಮ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತಿರುತ್ತವೆ. 12ನೆಯ ವಯಸ್ಸಿನಿಂದ ಆಚೆಗೆ ಹೊರಗಿನವರ ಪ್ರಭಾವ ನಮ್ಮ ಮೇಲೆ ಆಗಲು ಪ್ರಾರಂಭ. ಇಲ್ಲಿ ಈ ಮುಂಚೆ ನಾವು ಕಲಿತ ಪಾಠಗಳಿಗೂ ಹೊರ ಪ್ರಪಂಚದಲ್ಲಿ ಕಾಣುವ ವಾಸ್ತವಿಕೆಗೂ ನಡುವೆ ಇರುವ ವ್ಯತ್ಯಾಸ ಮನಸ್ಸಿನಲ್ಲಿ ಮತ್ತಷ್ಟು ಸಂಘರ್ಷವನ್ನು ಉಂಟು ಮಾಡುವುದು.

ಯುವ ಜನರ ಮನಸ್ಸಿನಲ್ಲಿ ಈ ರೀತಿ ಹಲವು ಸಂಘರ್ಷಗಳು ನಡೆಯುತ್ತಿರುತ್ತವೆ. ಅವುಗಳಿಗೆ ಪರಿಹಾರ ಎಲ್ಲಿ ಸಿಗುವುದು? ಯಾರು ಕೊಡುತ್ತಾರೆ? ಯಾರನ್ನು ಕೇಳಬಹುದು, ಕೇಳಿದರೆ ನಮ್ಮ ವ್ಯಕ್ತಿತ್ವದ ಬಗ್ಗೆ ಬೇರೆಯವರು ಏನು ತಿಳಿದುಕೊಳ್ಳಬಹುದು ಎಂಬೆಲ್ಲ ಪ್ರಶ್ನೆಗಳು...

ಅವರ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎಂದು ಅರ್ಥ ಮಾಡಿಕೊಂಡರೆ ಆಗ ಅವರಿಗೆ ಸೂಕ್ತ ಸಲಹೆ, ಮಾರ್ಗದರ್ಶನ ಕೊಡಲು ಸಾಧ್ಯ. ಅರ್ಥವೇ ಆಗದಿದ್ದರೆ ಕೊಡುವುದಾದರೂ ಏನು? ಇದು ಸಾಧ್ಯವಾಗಬೇಕಾದರೆ ಪೋಷಕರು ಮತ್ತು ಹದಿ ವಯಸ್ಸಿನ ಮಕ್ಕಳ ನಡುವೆ ಮುಕ್ತ ವಿಚಾರ ವಿನಿಮಯಕ್ಕೆ ಅವಕಾಶ ಇರಬೇಕು, ಅವರಿಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಲು ಅವಕಾಶ ಇರಬೇಕು.

ಇದಕ್ಕೆ ಅವಕಾಶ ಸಿಗದೇ ಹೋದಲ್ಲಿ ಅವರಿಗೆ ಯಾರದಾದರೂ ಗೆಳೆಯ/ಗೆಳತಿಯ ಆಸರೆ ಬೇಕಾಗುತ್ತದೆ. ವಯಸ್ಸಿಗನುಗುಣವಾಗೆ ಭಿನ್ನ ಲಿಂಗಿಗಳ ನಡುವೆ ಸ್ನೇಹ ಆಕರ್ಷಕವಾಗಿ ಕಾಣುವುದರಿಂದ ಅವರಲ್ಲಿ ಗೆಳೆತನ ಪ್ರಾರಂಭವಾಗುವುದು. ಆದರೆ ಯಾವುದೇ ಹುಡುಗ ಮತ್ತು ಹುಡುಗಿಯ ನಡುವಿನ ಸ್ನೇಹ ಅನುಮಾನದ ಕಣ್ಣುಗಳಿಂದಲೇ ನೋಡಲ್ಪಡುವುದರಿಂದ ಅವರು ಸಹಜ ಸ್ನೇಹಕ್ಕೆ ತಮ್ಮ ಸಂಬಂಧವನ್ನು ಸೀಮಿತಗೊಳಿಸಲು ಸಾಧ್ಯವಾಗುವುದಿಲ್ಲ. ಜೊತೆಗೆ ಸಹ ವಯಸ್ಕರ ಪ್ರಭಾವದಿಂದ ಪ್ರೇಮಿಯ ಅಗತ್ಯವಿದೆ ಎಂದೂ ಅವರು ನಂಬುವರು.

ಇದು ಯಾವುದೂ ತಪ್ಪಲ್ಲ. ವಯೋಧರ್ಮಕ್ಕೆ ಅನುಗುಣವಾಗಿ ನಡೆಯುವ ಪ್ರಕ್ರಿಯೆಗಳು ಅಷ್ಟೆ.

ಆದರೆ ಇದೇ ಶಾಶ್ವತ, ಈ ವಯಸ್ಸಿನಲ್ಲಿರುವ ಭಾವನೆಗಳು ಜೀವನದ ಉದ್ದಕ್ಕೂ ಇರುತ್ತವೆ ಎಂದೆಲ್ಲ ನಂಬಿಕೊಂಡು ಅದಕ್ಕೆ ಮನೆಯವರ ಒಪ್ಪಿಗೆ ಸಿಗದೇ ಹೋದಾಗ ಬದುಕಿ ಉಪಯೋಗವಿಲ್ಲ ಎಂದು ಸಣ್ಣ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದೇ ಸರಿ ಎಂಬ ನಿರ್ಧಾರಕ್ಕೆ ಬರುವುದು ತಪ್ಪು.

ಅಪಕ್ವ ಮನಸ್ಸಿನಲ್ಲಿ ಮೂಡುವ ಪ್ರೇಮ ಮನಸ್ಸು ಪಕ್ವ ವಾಗುವ ವೇಳೆಗೆ ಹೊಸ ಸಮಸ್ಯೆಗಳನ್ನು ಉಂಟು ಮಾಡುತ್ತವೆ. ಮೊದಲು ಒಬ್ಬರನ್ನು ಬಿಟ್ಟು ಮತ್ತೊಬ್ಬರಿರಲು ಸಾಧ್ಯವೇ ಇಲ್ಲ ಎಂದೆಲ್ಲ ವಾದಿಸಿದವರೇ ಮದುವೆಯಾದ ಆರು ತಿಂಗಳ ನಂತರ ಒಟ್ಟಿಗೆ ಇರಲು ಸಾಧ್ಯವೇ ಇಲ್ಲ ಎಂದು ವಾದಿಸಲು ಪ್ರಾರಂಭಿಸುವರು.!

ಪ್ರೇಮ ವಿವಾಹಗಳಲ್ಲಿ ಹೆಚ್ಚನವು ವಿಫಲವಾಗಲು ಮನಸ್ಸಿನ ಭಾವನೆಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ತಾವು ಅಮರ ಪ್ರೇಮಿಗಳು ಎಂದು ನಂಬಿಕೊಳ್ಳುವುದೇ ಕಾರಣ. ಮದುವೆಗೆ ಮುಂಚೆ ತಮ್ಮ ಪ್ರೇಮಿಯಲ್ಲಿ ಇರುವ ಅವಗುಣಗಳು ಕಾಣುವುದೇ ಇಲ್ಲ - ಕಾರಣ ಪ್ರೇಮಕ್ಕೆ ಕಣ್ಣಿಲ್ಲ!

ಅದರ ಜೊತೆಗೆ ಪ್ರೇಮಿಗಳಿಗೆ ಒಂದು ವಿಶೇಷ ಕಣ್ಣಿರುತ್ತದೆ. ಅದರ ಮೂಲಕವೇ ತಮ್ಮ ಸಂಬಂಧವನ್ನು ನೋಡುವ ಇವರಿಗೆ ಬೇರೆ ಯಾರ ಕಣ್ಣಿಗೂ ಕಾಣದ ವಿಶೇಷ ಗುಣಗಳು ತಮ್ಮ ಪ್ರೇಮಿಯಲ್ಲಿ ಕಾಣುತ್ತವೆ!

ಇಂತಹವರು ಹಠ ಹಿಡಿದು ಮದುವೆಯಾದರೆ ಆಗ ಈ ವಿಶೇಷ ಕಣ್ಣು ಮುಚ್ಚಿ, ಈ ಮುಂಚೆ ಕುರುಡಾಗಿದ್ದ ಕಣ್ಣು ತೆರೆದು ತಮ್ಮ ಪ್ರೇಮಿಯಲ್ಲಿ ಈ ಮುಂಚೆ ಕಾಣದಿದ್ದ ಎಲ್ಲ ದೋಷಗಳು ಕಾಣಲು ಪ್ರಾರಂಭವಾಗುತ್ತವೆ.

ಇದಕ್ಕೆ ಪರಿಹಾರವೇನು?

  • ಯುವ ಪ್ರೇಮ ತಪ್ಪಲ್ಲ. ಆದ್ದರಿಂದ ಅದರ ಬಗ್ಗೆ ಗೊಂದಲ ಅಗತ್ಯವಿಲ್ಲ.
  • ಈ ಭಾವನೆಗಳು ಶಾಶ್ವತವಲ್ಲ. ನೀವು ಬೆಳೆಯುತ್ತ ಹೋದಂತೆ ನಿಮ್ಮ ಮನಸ್ಸು ಪಕ್ವ ವಾಗುತ್ತ ಹೋದಂತೆ ನಿಮ್ಮ ಪ್ರೇಮ ಭಾವನೆಯಲ್ಲಿಯೂ ಬದಲಾಗುತ್ತವೆ. ಇದಕ್ಕೆ ಅನುಗುಣವಾಗಿ ಒಬ್ಬರು ತಮ್ಮ ನಿಲುವಿನಲ್ಲಿ ಬದಲಾವಣೆ ಮಾಡಿಕೊಂಡರೆ ಮತ್ತೊಬ್ಬರು ಬದಲಾವಣೆ ಮಾಡಿಕೊಳ್ಳದೇ ಹೋದರೆ ಕೈ ಕೊಟ್ಟಾ/ಳು ಎನ್ನು ಅನುಮಾನ ಪ್ರಾರಂಭವಾಗುತ್ತದೆ..
  • ಯುವ ವಯಸ್ಸಿನಲ್ಲಿ ಪ್ರೇಮ ಎಂಬ ಪದದ ಅರ್ಥ ಹುಡುಗರಿಗೇ ಬೇರೆಯ ತರಹ, ಹುಡುಗಿಯರಿಗೇ ಬೇರೆ ತರಹ.
  • ತಮ್ಮ ಪ್ರೀತಿಗೆ ಕೆಟ್ಟ ದಾರಿಯಲಿ ಹೋಗುತ್ತಿರುವ ಹುಡುಗರನ್ನು ಸರಿ ದಾರಿಗೆ ತರುವ ಶಕ್ತಿ ಇದೆ ಎಂಬ ಮೂಢನಂಬಿಕೆ ಇರುವುದು. ಇದು ಪ್ರೀತಿಗೆ ಸರಿಯಾದ ಆಧಾರವಲ್ಲ.
  • ಆತ್ಮ ವಿಶ್ವಾಸದ ಕೊರತೆ ಇರುವವ ಹುಡುಗ ಅಥವ ಹುಡುಗಿ ತನ್ನ ಪ್ರೇಮಿಗೆ ಮೇಲಿಂದ ಮೇಲೆ ಮಾನಸಿಕವಾಗಿ ಹಿಂಸೆ ಕೊಡುವುದು ಹೆಚ್ಚು. ತನ್ನ ಕೊರತೆಯನ್ನು ಗುರುತಿಸಿ ತನ್ನ ಪ್ರೇಮಿ ಬಿಟ್ಟು ಹೋದರೆ ಏನು ಮಾಡುವುದು ಎಂಬ ಅಭದ್ರತೆಯ ಭಯ ಅವರಿಗೆ. ಇಂತಹ ಸಂಬಂಧಗಳಿಂದ ದೂರ ಇರುವುದು ಒಳ್ಳೆಯದು. ಇಲ್ಲದೇ ಹೋದರೆ ಹಿಂಸೆ ಅನುಭವಿಸುವ ಪ್ರೇಮಿ ಜೀವನದ ಉದ್ದಕ್ಕೂ ಇದನ್ನು ಆಗಾಗ ಅನುಭವಿಸುತ್ತಿರುತ್ತಲೇ ಬೇಕಾಗುವುದು.
  • ನಿಮ್ಮ ಪ್ರೇಮ ಸಂಬಂಧ ಜೀವನದಲ್ಲಿ ಸಾಧನೆ ಮಾಡಲು, ಉತ್ತ ಮೌಲ್ಯಯುತ ದಾರಿಯಲ್ಲಿ ಸಾಗಲು ಸಹಾಯ ಮಾಡುವಂತಿರಬೇಕು. ಹುಡುಗರು 26-26 ದಾಟುವ ವರೆಗೆ, ಹುಡುಗಿಯರು 23-24 ಡಾಟುವ ವರೆಗೆ ತಮ್ಮ ಪ್ರೇಮ ಸಂಬಂಧಕ್ಕೆ ದಾಂಪತ್ಯ ಜೀವನದ ಅರ್ಥ ಕಲ್ಪಿಸದಿರುವುದು ಒಳ್ಳೆಯದು.
  • ನಿಮ್ಮ ಪ್ರೇಮಿ ನಿಮ್ಮನ್ನು ನಿಯಂತ್ರಿಸ ತೊಡಗಿದರೆ, ನೀವು ಯಾರೊಟ್ಟಿಗೆ ಇರಬೇಕು, ಏನು ಮಾಡಬೇಕು ಎಂದೆಲ್ಲ ನಿಮಗೆ ಆದೇಶಿಸ ತೊಡಗಿದರೆ, ನಿಮ್ಮ ಬಗ್ಗೆ ಮತ್ಸರ, ಅಸೂಯೆ ತೋರಿಸತೊಡಗಿದರೆ, ನಿಮ್ಮ ಪ್ರೇಮದ ಸಲುವಾಗಿ ನಿಮ್ಮನ್ನು ಪ್ರೀತಿಸುವ ಪೋಷಕರಿಗೆ ನೀವು ಸುಳ್ಳು ಹೇಳುವಂತಹ ಪ್ರಕರಣಗಳು ಆಗುತ್ತಿದ್ದರೆ, ಆಲಿಂಗನ, ಚುಂಬನ, ಹೇಗೂ ಮದುವೆಯಾಗುವರು ಎಂಬ ನೆಪದಲ್ಲಿ ಲೈಂಗಿಕ ಸಂಬಂಧಕ್ಕೆ ಪ್ರೇರೇಪಿಸಿದರೆ ಅಂತಹ ಸಂಬಂಧವನ್ನು ಮುರಿದು ನಿಮ್ಮ ಮೌಲ್ಯಗಳನ್ನು ಕಾಪಾಡಿಕೊಳ್ಳುವುದು ಒಳ್ಳೆಯದು.

ನಿಮ್ಮ ಪ್ರೇಮ ಸಂಬಂಧ ನಿಮಗೆ ಮೇಲಿಂದ ಮೇಲೆ ಖಿನ್ನತೆಯೆಡೆಗೆ ಎಳೆಯುತ್ತಿದ್ದರೆ ಆತ್ಮ ಹತ್ಯೆಗೆ ನಿಮ್ಮನ್ನು ಪ್ರಚೋದಿಸಿಕೊಳ್ಳದೆ, ಸಮಾಜದಲ್ಲಿ ಗೌರವಾನ್ವಿತ ಹಾಗೂ ಉಪಯುಕ್ತ ಜೀವನ ನಡೆಸುವಂತೆ ಇರಬೇಕು.

(ಸಲಹೆ ಮಾರ್ಗದರ್ಶನಕ್ಕೆ ಇ-ಮೇಲ್‌ ವಿಳಾಸ -yuvamithravijaya@rediffmail.com)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more