ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಪ್ರೇಮಿಗಳ ದಿನ-2007

By Staff
|
Google Oneindia Kannada News


(‘ಜಗತ್ತಿನಲ್ಲಿ ರೊಟ್ಟಿ ಇಲ್ಲದೆ ಸತ್ತವರಿಗಿಂತಲೂ, ಪ್ರೇಮದ ಹಸಿವಿನಿಂದ ಸತ್ತವರ ಸಂಖ್ಯೆಯೇ ದೊಡ್ಡದು’ ಎನ್ನುತ್ತದೆ ಒಂದು ಲೋಕೋಕ್ತಿ. ಹೌದು, ಪ್ರೇಮದ ‘ಮತ್ತು-ಗಮ್ಮತ್ತು’ ಬಲ್ಲವನಿಗಷ್ಟೇ ಗೊತ್ತು! ಪ್ರೇಮಕ್ಕಾಗಿ ಮಿಡಿಯುವ ಹೃದಯಗಳಿಗಾಗಿ ಪ್ರೇಮದ ಸರಪಣಿ ಇಲ್ಲಿದೆ. ಪದ್ಯ, ಜೋಕ್ಸ್‌, ಲೇಖನಗಳು, ಅನಿಸಿಕೆಗಳು, ಅನುಭವ, ಚಿತ್ರಪಟಗಳು ಎಲ್ಲವೂ ಇಲ್ಲಿವೆ... -ಸಂಪಾದಕ)

ಪ್ರೇಮದ ಹನಿ-1
ಪದ್ಮರಾಗ

  • ಮಾಲಾ ರಾವ್‌, ಸನ್ನಿವೇಲ್‌, ಕ್ಯಾಲಿಫೋರ್ನಿಯ.
  • ನನ್ನತ್ತ ಬಂದಿದ್ದು...
    ಯಾರು?
    ಅವಳು...
    ಯಾವ ಹೊತ್ತೋ...?
    ಪೂರ್ವ ಕೆಂಪಾದಾಗ, ನಡುಗುತ್ತಾ...
    ಯಾಕೋ?
    ಕೋಪ ಬರುತ್ತಲ್ಲಾ...
    ಯಾರಿಗೆ?
    ಅವಳಪ್ಪನಿಗೆ...ಶ್‌! ಶ್‌!

    ಎರಡು ಬಾರಿ ಮುತ್ತಿಟ್ಟೆ
    ಎಲ್ಲಿಗೆ?
    ಅವಳ ಒದ್ದೆ ತುಟಿಗೆ...
    ತುಟಿ...?
    ಉಹುಂ...
    ಹಾಗಾದ್ರೆ ಏನದು?
    ಪದ್ಮರಾಗ...
    ಹೇಗಿತ್ತು...?
    ಸಿಹಿ...ತುಂಬಾ ಸಿಹಿ...

    (ಪದ್ಮರಾಗ ಅಂದರೆ ತಾವರೆಯ (ನಸುಗೆಂಪಿನ) ಬಣ್ಣದ ಅಮೂಲ್ಯ ರತ್ನ ಎಂದರ್ಥ. ಮೇಲ್ಕಂಡ ಈ ಪದ್ಯ ಹತ್ತನೇ ಶತಮಾನದ ಪರ್ಷಿಯನ್‌ ಕವಿ ‘ರುದಕಿ’ಯ ಕವನವೊಂದರ ಭಾವಾನುವಾದ)

    ಚಿತ್ರ ಕೃಪೆ - ಅರವಿಂದ ಚೀನ್ಯಾ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X