ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ ಕನ್ನಡಿಗರಿಗೆ ಧೈರ್ಯಾನೆ ಇಲ್ಲ ಕಣ್ರಿ’ -ಸಿದ್ಧಲಿಂಗಯ್ಯ

By Staff
|
Google Oneindia Kannada News


ಇನ್ನು ಕನ್ನಡ ಹೋರಾಟಗಾರರ ಕಥೆ. ಅವರೆಲ್ಲ ಪ್ರಾಮಾಣಿಕತೆ ಕಳ್ಕೊಂಡಿದಾರೆ. ಅವರ ನಡುವೆ ಐಕ್ಯತೆಯೂ ಇಲ್ಲ . ಇಂಥ ವಿಚಿತ್ರ ಸನ್ನಿವೇಶದಲ್ಲಿ ಕನ್ನಡಕ್ಕೆ ನಿಜವಾಗಿಯೂ ಗಂಡಾಂತರ ಬಂದಿದೆ.

ನಾಯಕರೇ ಇಲ್ಲ ...: ವಾಟಾಳ್‌ ಅಂಥವರು ಬಾವುಟ- ಪ್ರತಿಕೃತಿ ಸುಡುವುದು, ಕತ್ತೆಗಳ ಮೆರವಣಿಗೆ ಮಾಡುವುದನ್ನು ಹೊರತುಪಡಿಸಿದರೆ, ಕನ್ನಡ ಹೋರಾಟದ ಸದ್ದೇ ಅಡಗಿ ಹೋಗಿದೆ. ನಾಯಕರಾದರೂ ಯಾರಿದ್ದಾರೆ? ಇರುವ ಒಬ್ಬಿಬ್ಬರೂ ಕಿಮ್ಮತ್ತು ಕಳಕೊಂಡಿದಾರೆ. ಎಂಥೆಂಥ ನಾಯಕರಿದ್ದರು. ಅ.ನ.ಕೃಷ್ಣರಾಯರು, ಮ.ರಾಮಮೂರ್ತಿ, ಸತ್ಯ, ಪಿ.ವಿ.ನಾರಾಯಣ... ವಿದ್ವತ್‌ ಪರಂಪರೆಯದು... ಸಿದ್ಧಲಿಂಗಯ್ಯ ನೆನಪಿಸಿಕೊಳ್ಳುತ್ತಾರೆ. ಈ ವಿದ್ವತ್‌ ಪರಂಪರೆಯ ಕೊನೆಯ ಕೊಂಡಿ ಚಿದಾನಂದ ಮೂರ್ತಿ. ದುರಾದೃಷ್ಟವಶಾತ್‌ ಅವರೀಗ ಬೀದಿ ಹೋರಾಟಗಾರರ ಶೈಲಿಯಲ್ಲಿ ಮಾತಾಡ್ತಿರೋದರಿಂದ, ಜನರನ್ನ ಸೆಳೆಯೋದಕ್ಕೆ ಅವರಿಗೆ ಸಾಧ್ಯವಾಗ್ತಿಲ್ಲ ಎನ್ನುವ ಸಿದ್ಧಲಿಂಗಯ್ಯ ಅವರ ದೃಷ್ಟಿಯಲ್ಲಿ ಕನ್ನಡ ಚಳವಳಿ ಈಗ ನಾಯಕರ ಕೊರತೆಯಿಂದ ಬಳಲುತ್ತಿದೆ.

ಇದೆಲ್ಲಾ ಸರಿ. ಕನ್ನಡ ಅನುಷ್ಠಾನಗೊಳಿಸುವುದಾದರೂ ಹೇಗೆ? ಮಾತುಗಳನ್ನು ಕಾರ್ಯ ರೂಪಕ್ಕೆ ತರುವುದು ಹೇಗೆ? ಅಧಿಕಾರಿಗಳಿಗೆ ದೃಢತೆ, ಇಚ್ಛಾಶಕ್ತಿ ಇದ್ದಲ್ಲಿ ಆಡಳಿತದಲ್ಲಿ ಕನ್ನಡದ ಅನುಷ್ಠಾನ ಕಷ್ಟವೇನೂ ಅಲ್ಲ ಎನ್ನುವುದು ಸಿದ್ಧಲಿಂಗಯ್ಯನವರ ಅನುಭವದ ಮಾತು.

ಸಿದ್ಧಲಿಂಗಯ್ಯನವರದೇ ಒಂದು ಅನುಭವ ಕೇಳಿ :

‘1986 ರಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಾಯಿಂಟ್‌ ಕಮಿಟಿಗೆ ಅಧ್ಯಕ್ಷನಾಗಿದ್ದೆ. ಅನುದಾನ ಇತ್ಯರ್ಥ ಪಡಿಸುವ ಸಭೆ. ಅಧಿಕಾರಿಗಳೆಲ್ಲ ಬಂದರು. ಎಲ್ಲರೂ ಪ್ರಸ್ತಾವನೆ ತಂದಿದ್ದೀರಾ ಅಂದೆ. ಊಂ ಎಂದರು. ಪ್ರಸ್ತಾವನೆ ಇಂಗ್ಲೀಷಿನಲ್ಲಿದೆಯಾ ಅಂದೆ. ಹೌದು ಸಾರ್‌- ಧ್ವನಿ ಜೋರಾಗಿತ್ತು. ನನಗೆ ಸಿಟ್ಟು ಬಂತು, ಹೇಳಿದೆ- ನೀವೆಲ್ಲ ಸರ್ಕಾರದ 290 ಆದೇಶಗಳನ್ನು ಉಲ್ಲಂಘಿಸಿ ಇಲ್ಲಿಗೆ ಬಂದಿದ್ದೀರಿ. ಎಲ್ಲ ಕಾಗದ ಪತ್ರಗಳು ಕನ್ನಡದಲ್ಲಿರಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ. ನಿಮಗಿನ್ನು 10 ನಿಮಿಷ ಟೈಂ ಕೊಡ್ತೀನಿ. ಜಾಗ ಖಾಲಿ ಮಾಡಬೇಕು. ಇನ್ನೊಂದು ವಾರದಲ್ಲಿ ಕನ್ನಡದಲ್ಲಿ ಪ್ರಸ್ತಾವನೆ ತನ್ನಿ, ಅನುದಾನದ ಮಾತಾಡೋಣ.’

ಇಂಥ ಘಟನೆ ವಿಧಾನಸೌಧದಲ್ಲಿ ನಡೆದದ್ದು ಅದೇ ಮೊದಲು, ಅದೇ ಕೊನೆ. ಎಲ್ಲ ಅಧಿಕಾರಿಗಳೂ ಇದೇ ರೀತಿ ಧೈರ್ಯವನ್ನು ತೋರಿದರೆ ಕನ್ನಡದ ಅನುಷ್ಠಾನ ಯಾಕೆ ಸಾಧ್ಯವಿಲ್ಲ ? ಉತ್ತರ ಸರಳ, ಅಧಿಕಾರಿಗಳಿಗೆ- ಪ್ರಾಧಿಕಾರದ ಅಧ್ಯಕ್ಷರುಗಳಿಗೆ ಇಚ್ಛಾಶಕ್ತಿಯಿಲ್ಲ ; ಕನ್ನಡಕ್ಕೆ ಏಳಿಗೆಯಿಲ್ಲ.

ಕನ್ನಡ ಬಳಸದಿರುವುದು ಸಂವಿಧಾನ ದ್ರೋಹ, ಪ್ರಜಾ ಪ್ರಭುತ್ವ ವಿರೋಧಿ ನಡವಳಿಕೆ ಎನ್ನುತ್ತಾರೆ ಸಿದ್ಧಲಿಂಗಯ್ಯ. ಕನ್ನಡ ಅನುಷ್ಠಾನಕ್ಕಾಗಿ ಸರ್ಕಾರ ಈವರೆಗೂ 290 ಆದೇಶಗಳನ್ನು ಹೊರ ತಂದಿದೆ. ಡಿಪಿಎಆರ್‌ ಈ ಆದೇಶಗಳನ್ನು ಪುಸ್ತಕ ರೂಪದಲ್ಲಿ ಹೊರ ತಂದಿದೆ. ಪುಸ್ತಕ ರೂಪದಲ್ಲಿರುವ ಕನ್ನಡ ಮಸ್ತಕಕ್ಕೆ ಬರುವುದು ಯಾವಾಗ? ಕನ್ನಡಿಗರಲ್ಲಿ ಭಾಷೆಯ ಬಗ್ಗೆ ತುಡಿತ ಉಕ್ಕಬೇಕು, ರಾಜಕೀಯ ಇಚ್ಚಾ ಶಕ್ತಿ ಮೂಡಬೇಕು- ಆಗ ಕನ್ನಡ ಕಸ್ತೂರಿಯಾಗುತ್ತದೆ. ಅದು ಯಾವಾಗ ? ಸಿದ್ಧಲಿಂಗಯ್ಯನವರು ಭವಿಷ್ಯ ನುಡಿಯುವುದಿಲ್ಲ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X