ನರಸಿಂಹಯ್ಯ ಸೇರಿದಂತೆ ಐವರಿಗೆ ರಾಜ್ಯ ಅಕಾಡೆಮಿ ಗರಿ
ಬೆಂಗಳೂರು : 550 ಪತ್ತೇದಾರಿ ಕಾದಂಬರಿಗಳ ಜನಕ ಎನ್.ನರಸಿಂಹಯ್ಯ ಸೇರಿದಂತೆ ಐದು ಮಂದಿ ಅಕ್ಷರ ನಿಪುಣರು, 2006ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಅಕಾಡೆಮಿ ಅಧ್ಯಕ್ಷೆ ಗೀತಾ ನಾಗಭೂಷಣ್ ಈ ಕುರಿತು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ್ದಾರೆ. ನರಸಿಂಹಯ್ಯ ಅವರೊಂದಿಗೆ ಸಂಶೋಧಕ ಪ್ರೊ.ಸುಧಾಕರ್, ಸಂಶೋಧಕ-ವಿಮರ್ಶಕ ಮಲ್ಲೇಪುರಂ ಜಿ. ವೆಂಕಟೇಶ್, ಕವಯತ್ರಿ ಎಚ್.ಎಸ್.ಮುಕ್ತಾಯಕ್ಕ, ಲೇಖಕಿ ಎ.ಪಿ.ಮಾಲತಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಪ್ರಶಸ್ತಿ 10ಸಾವಿರ ರೂ. ನಗದು ಹೊಂದಿದ್ದು, ಬೆಳಗಾವಿಯಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications