ಪೂರ್ಣಚಂದ್ರ ತೇಜಸ್ವಿ ಅಭಿಮಾನಿಗಳಲ್ಲಿ ನಮ್ಮದೊಂದು ವಿನಂತಿ

Posted By:
Subscribe to Oneindia Kannada


ಪೂರ್ಣಚಂದ್ರ ತೇಜಸ್ವಿ ನಮ್ಮ ಯುವ ಜನಾಂಗಕ್ಕೆ ಅಘೋಷಿತ ನಾಯಕ ಎಂದರೆ ಕಮ್ಮಿಯಾಗುತ್ತದೆ. ತೇಜಸ್ವಿ ನಿಸರ್ಗ ಸ್ಮಾರಕಕ್ಕಾಗಿ ಸರ್ಕಾರದ ಮೊರೆ ಹೋಗಿರುವುದು ಸರಿಯೇ? ತಪ್ಪೇ ಆ ಪ್ರಶ್ನೆ ಬೇರೆ ಆದರೆ ತೇಜಸ್ವಿಯವರ ಆಶಯವನ್ನು ಪ್ರತಿಬಿಂಬಿಸುವ ಕಾಯಕಕ್ಕೆ ನಾವೆಲ್ಲರೂ ಒಂದಾಗಬೇಕಿದೆ.Aviratha team and Nature club demand govt for Tejaswi projectಇದು ಮನವಿಯಾಗಬಹುದು ಅಥವಾ ನಮ್ಮ ಕರ್ತವ್ಯ ಎಂದು ತಿಳಿಯಬಹುದು.

ನಮ್ಮ ನೆಚ್ಚಿನ ಮಾರ್ಗದರ್ಶಿ , ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರ ಅಗಲಿಕೆಯಿಂದ ನಮಗೆಲ್ಲ ದಿಕ್ಕುತೋಚದಂತಾಗಿದೆ. ತೇಜಸ್ವಿಯವರ ಮಾರ್ಗದಲ್ಲಿ ನಡೆದು ಏನಾದರೂ ಮಾಡಬೇಕೆಂಬ ತುಡಿತ ಎಲ್ಲರಲ್ಲೂ ಇದೆ.

ಅಗಲಿಕೆ ಅನಿವಾರ್ಯವಾದ್ದರಿಂದ ಅಗಲಿದ ಚೇತನಕ್ಕೆ ಸರಿಯಾದ ಶ್ರದ್ಧಾಂಜಲಿ ಸಲ್ಲಿಸುವ ನಿಟ್ಟಿನಲ್ಲಿ ಮುಂದಾಗಬೇಕಿದೆ. ತೇಜಸ್ವಿಯವರ ಆಪ್ತರಲ್ಲಿ ಒಬ್ಬರಾದ ಪ್ರದೀಪ ಕೆಂಜಿಗೆಯವರು, ತೇಜಸ್ವಿಯವರ ತತ್ವ, ಆದರ್ಶ ಹಾಗೂ ಪರಿಸರ ಪ್ರಜ್ಞೆಯ ಬಗ್ಗೆ ನಾಡಿನ ಮಕ್ಕಳಿಗೆ ತಿಳಿಸಿಕೊಡುವ ಕಾಯಕದಲ್ಲಿ ತೊಡಗಿದ್ದಾರೆ.

ಇದು ಬರಿ ತೇಜಸ್ವಿ ಸ್ಮಾರಕವಲ್ಲ:

ಮೂಡಿಗೆರೆಯಿಂದ ಸುಮಾರು 15 ಕಿ.ಮೀ ದೂರದ ಬಾಳೂರು ಅರಣ್ಯ ಪ್ರದೇಶ ತೇಜಸ್ವಿಯವರಿಗೆ ಅಚ್ಚುಮೆಚ್ಚಿನ ತಾಣ. ಅವರ ನೇತೃತ್ವದಲ್ಲಿ ಸ್ಥಾಪನೆಯಾದ ಇಲ್ಲಿನ ನೇಚರ್ ಕ್ಲಬ್ ನ ಸದಸ್ಯರು ಈಗ ತೇಜಸ್ವಿ ಯವರ ಆಶಯದಂತೆ ಜೀವ ವೈವಿಧ್ಯ ಕೇಂದ್ರ ಸ್ಥಾಪನೆ ಮಾಡಿ , ಮಕ್ಕಳಿಗೆ ವೈಜ್ಞಾನಿಕ ಹಾಗು ಪರಿಸರ ಕಾಳಜಿ ಹೆಚ್ಚಿಸುವ ಯೋಜನೆ ರೂಪಿಸಿದ್ದಾರೆ.

ಪರಿಸರದ ನಿಗೂಢತೆ ತಿಳಿಯಲು ಸಿನೆಮಾ ಪ್ರದರ್ಶನ, ವಿಜ್ಞಾನ ಪ್ರಾತ್ಯಕ್ಷಿಕೆ, ಕೃಷಿ, ಕೀಟ ಪ್ರಪಂಚದ, ಅಳವಿನಂಚಿನಲ್ಲಿರುವ ಪಶ್ಚಿಮ ಘಟ್ಟದ ವಿವಿಧ ಪ್ರಬೇಧಗಳ ಮಾಹಿತಿ ಇರುತ್ತದೆ. ಯುವಕರಿಗೆ ಚಾರಣ, ಪರಿಸರ ಸಂರಕ್ಷಣೆ ಶಿಬಿರ ಸಹ ಇರುತ್ತದೆ. ಇದಲ್ಲದೆ ದೇಶದಲ್ಲೇ ಪ್ರಥಮ ಬಾರಿಗೆ ಆರ್ಕಿಡ್ ಸಂಗ್ರಹಾಲಯಗಳನ್ನು ಸ್ಥಾಪಿಸಲಾಗುತ್ತಿದೆ.

ಇದಕ್ಕೆ ಅಗತ್ಯವಾದ ಭೂಮಿಯನ್ನು(ಕೇಂದ್ರ ಸ್ಥಾಪನೆಗೆ ಬೇಕಾದ ಜಾಗ) ನೀಡುವಂತೆ ಸರ್ಕಾರವನ್ನು ಈ ಮುಖಾಂತರ ಕೋರುತ್ತಿದ್ದೇವೆ ಎನ್ನುತ್ತಾರೆ ಯೋಜನೆಯ ಉಸ್ತುವಾರಿ ವಹಿಸಿಕೊಂಡಿರುವ ಲೇಖಕ ಪ್ರದೀಪ್ ಕೆಂಜಿಗೆ.

ಈ ಕಾರ್ಯಕ್ಕೆ ಪೂರ್ಣ ಬೆಂಬಲ ನೀಡುವ ಸಲುವಾಗಿ ಹೆಚ್ಚಾಗಿ ಐಟಿ ಕ್ಷೇತ್ರದ ಯುವಕರಿಂದ ಕೂಡಿದ ಅವಿರತ ಸಂಸ್ಥೆಯು ತೇಜಸ್ವಿ ಬೆಂಬಲಿಗರ ಸಹಿ ಸಂಗ್ರಹ ಅಭಿಯಾನವನ್ನು ಹಮ್ಮಿಕೊಂಡಿದ್ದು, ಈಗಾಗಲೇ 175 ಕ್ಕೂ ಜನ ಅಭಿಮಾನಗಳು ಸಹಿ ಹಾಕಿದ್ದಾರೆ ಎಂದು ಅವಿರತ ಟ್ರಸ್ಟ್ ಅಧ್ಯಕ್ಷ ಸತೀಶ್ ಗೌಡ ಹೇಳಿದ್ದಾರೆ.

ಪೂರ್ಣಚಂದ್ರ ತೇಜಸ್ವಿ ಅವರ ಸ್ಮರಣಾರ್ಥ ಸಂಶೋಧನಾ ಕೇಂದ್ರ ಸ್ಥಾಪನೆಗೆ ಅಗತ್ಯವಾದ ಭೂಮಿಗಾಗಿ, ಕರ್ನಾಟಕ ಸರಕಾರವನ್ನು ನಾವು ಮತ್ತು ನೀವು ಒತ್ತಾಯಿಸೋಣ. ಈ ಕಾರ್ಯಕ್ಕೆ ತಮ್ಮೆಲ್ಲರ ಸಹಿಯ ಅಗತ್ಯವಿದ್ದು, ಅವಿರತ ಸಂಸ್ಥೆ ಮುಖಾಂತರ ಈ ಪೆಟಿಷನ್ ಹಾಕುತ್ತಿದ್ದೇವೆ.

ನಾಡಿನಾದ್ಯಂತಇರುವ ತೇಜಸ್ವಿ ಅಭಿಮಾನಿಗಳು ಈ ಸದುದ್ದೇಶಕ್ಕೆ ನೆರವಾಗುತ್ತಾರೆ ಎಂಬ ನಂಬಿಕೆ ನಮ್ಮದು. ಆಸಕ್ತರು ಸಹಿ ಮಾಡಿ, ಬೆಂಬಲ ನೀಡಿ

http://www.petitiononline.com/Tejasvi/petition.html

ಇದನ್ನೂ ಓದಿ :
ಪೂರ್ಣಚಂದ್ರ ತೇಜಸ್ವಿ (08.09.1938 -- 05.04.2007)
ಮೂಡಿಗೆರೆ ಸಂತ ಸದ್ದಿಲ್ಲದೇ ಹೊರಟ!

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ