ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಆವರಣ’ದ ಉದ್ದೇಶ ರಂಜನೆಯಲ್ಲ.. ಸತ್ಯಾನ್ವೇಷಣೆ -ಭೈರಪ್ಪ

By Staff
|
Google Oneindia Kannada News


Bhyrappa hits out at critics ಹುಬ್ಬಳ್ಳಿ : ತಮ್ಮ ‘ಆವರಣ’ ಪುಸ್ತಕದ ಬಗ್ಗೆ ಬರುತ್ತಿರುವ ಟೀಕೆಗಳಿಗೆ, ವಿಮರ್ಶೆಗಳಿಗೆ ಕೊನೆಗೂ ಕಾದಂಬರಿಕಾರ ಎಸ್‌.ಎಲ್‌.ಭೈರಪ್ಪ ಉತ್ತರ ನೀಡಿದ್ದಾರೆ.

ನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ಏರ್ಪಡಿಸಲಾಗಿದ್ದ ‘ಆವರಣದ ಓದು’ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತ, ನಾನು ‘ಆವರಣ’ ಬರೆದದ್ದು ಸತ್ಯಾನ್ವೇಷಣೆಗಾಗಿಯೇ ಹೊರತು, ರಂಜನೆಗಾಗಿ ಅಲ್ಲ ಎಂದರು.

ಭೈರಪ್ಪ ಅವರ ಮಾತಿನ ಸಾರ :

  • ‘ಆವರಣ’ ಐತಿಹಾಸಿಕ ಕಾದಂಬರಿಯಾದ್ದರಿಂದ, ಭಾವನೆಗಳನ್ನು ನಿರೀಕ್ಷಿಸಬಾರದು. ಉದ್ದೇಶ ಪೂರ್ವಕವಾಗಿಯೇ ನ್ಯೂಟ್ರಲ್‌ ಭಾಷೆ ಬಳಸಿದ್ದೇನೆ. ಇತಿಹಾಸವನ್ನು ಕಾವ್ಯದ ಭಾಷೆಯಲ್ಲಿ ಬರೆಯಬಾರದು.
  • ಸತತ ಐದು ವರ್ಷಗಳ ಸಂಶೋಧನೆಯ ಫಲವೇ ‘ಆವರಣ’
  • ‘ಆವರಣ’ದಲ್ಲಿ ನನ್ನ ಸ್ವಂತದ ಅಭಿಪ್ರಾಯಗಳಿಲ್ಲ. ಇತಿಹಾಸದ ದಾಖಲೆಗಳನ್ನಿಟ್ಟುಕೊಂಡು, ಕಾದಂಬರಿ ಹೆಣೆದಿದ್ದೇನೆ.
  • ಸತ್ಯ ಮತ್ತು ಸೌಂದರ್ಯದ ತಾಕಲಾಟದಲ್ಲಿ, ನನ್ನ ಆಯ್ಕೆ ಸತ್ಯ.
  • ‘ಆವರಣ’ ನನ್ನ ಎರಡನೇ ಐತಿಹಾಸಿಕ ಕಾದಂಬರಿ. ಬರೆಯುವಾಗಲೇ ವಿವಾದ ಸೃಷ್ಟಿಯಾಗುತ್ತದೆ ಎಂಬುದು ನನಗೆ ಗೊತ್ತಿತ್ತು.
  • ಪುಸ್ತಕ ಓದದೇ, ವಿಮರ್ಶೆಗೆ ನಿಲ್ಲಬಾರದು.
ಮಾತಿಗೆ ಕಟ್ಟುಬಿದ್ದ ಅನಂತಮೂರ್ತಿ : ‘ಆವರಣ’ ಮತ್ತು ಭೈರಪ್ಪ ಅವರನ್ನು ಟೀಕೆ ಮಾಡಿ, ವಿವಾದದ ಬೆಂಕಿಗೆ ತುಪ್ಪ ಸುರಿದಿದ್ದ, ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಯು.ಆರ್‌.ಅನಂತಮೂರ್ತಿ , ಸಾಹಿತ್ಯ ಸನ್ಯಾಸವನ್ನು ಸ್ವೀಕರಿಸಿದ್ದಾರೆ. ಅಂದರೆ ಸಾಹಿತ್ಯದ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ ಎಂಬ ತಮ್ಮ ನಿಲುವಿಗೆ ಬದ್ಧರಾಗಿದ್ದಾರೆ.

ತಮ್ಮ ಮಾತಿಗೆ ಕಟ್ಟುಬಿದ್ದ ಅನಂತಮೂರ್ತಿ, ಮೊನ್ನೆ ಚಿ.ಶ್ರೀನಿವಾಸರಾಜುರ ಅಭಿನಂದನಾ ಸಮಾರಂಭಕ್ಕೆ ಹೋಗಲಿಲ್ಲ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X