• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿದ್ಯಾಗಿರಿಯ ನೆತ್ತಿಯ ತುಂಬೆಲ್ಲ ಆಕಾಶದೀಪಗಳ ಚಿತ್ತಾರ!

By Staff
|

ನುಡಿಸಿರಿ ಉತ್ಸವ ಅರ್ಥಪೂರ್ಣವಾಗಿ ನಡೆಯುತ್ತಿದೆ. ಮೊದಲ ಮತ್ತು ಎರಡನೇ ದಿನ(ಡಿ.1)ದ ವಿಶೇಷಗಳತ್ತ ಒಂದು ಸುತ್ತು.

  • ಶ್ರೀನಿಧಿ ಡಿ.ಎಸ್.

ಮೂಡಬಿದರೆ, ಡಿ.1 : ವಿದ್ಯಾಗಿರಿಯ ನೆತ್ತಿಯ ಮೇಲೆ ಸಂಜೆಯ ತಂಪು. ಸುತ್ತ ಕೇಳಿಬರುತ್ತಿರುವದು ಗೆಜ್ಜೆಯ ನಿನಾದ, ಚೆಂಡೆ ಮದ್ದಳೆ ಸದ್ದು, ನವಿರು ದನಿಯ ಹಾಡುಗಳು. ಇದು ಆಳ್ವಾಸ್ ನುಡಿಸಿರಿ 2007ರ ಮೊದಲ ದಿನದ(ಡಿ.30) ಸಂಜೆಯ ಚಿತ್ರಣ. ದಿನವಿಡೀ ಅಲೆದು ದಣಿದ ಮನಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳ ಸಿಂಚನ.

ರತ್ನಾಕರ ವರ್ಣಿ ವೇದಿಕೆಯಲ್ಲಿ ದೇವೇಂದ್ರ ಕುಮಾರ್ ಪತ್ತಾರ್ ಬಳಗ ಸುಶ್ರಾವ್ಯವಾಗಿ ವಚನಗಳನ್ನು ಹಾಡಿದರೆ, ಮಾಧ್ಯಮ ಕೇಂದ್ರದ ಮೇಲುಗಡೆಯೇ ಇರುವ ಕು.ಶಿ.ಹರಿದಾಸ ಭಟ್ಟ ವೇದಿಕೆಯಲ್ಲಿ ಗೆಜ್ಜೆಗಳ ಝಲ್ ಝಲ್.. ಅಲ್ಲಿ ಭರತನಾಟ್ಯ ಕಾರ್ಯಕ್ರಮ. ಹೊರಗಡೆ ಕೆ.ವಿ.ಸುಬ್ಬಣ್ಣ ರಂಗ ಮಂದಿರದಲ್ಲಿ ಕುರುಕ್ಷೇತ್ರಕ್ಕೊಂದು ಆಯೋಗ ಯಕ್ಷರಂಗ ಪ್ರಯೋಗ. ಕಲಾಸಕ್ತರಿಗೆ ಎತ್ತ ಹೋಗಬೇಕು ಅನ್ನುವ ಗೊಂದಲ!

ನುಡಿಸಿರಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡಲೆಂದೇ ಹಗಲು ಬರಲಾಗದವರು ತಂಡೋಪತಂಡವಾಗಿ ಬಂದರು. ನಮ್ಮ ಸಂಸ್ಸೃತಿಯನ್ನು ಬಿಂಬಿಸುವ ವೇದಿಕೆಗಳು, ಕಣ್ಣಿಗೆ ತಂಪೀಯುವ ಬೆಳಕಿನ ಸಂಯೋಜನೆ, ಉತ್ತಮ ಆಸನ ವ್ಯವಸ್ಥೆ, ನೋಡುಗರಿಗೆ ಇನ್ನೇನು ಬೇಕು?!

ದೀಪಗಳ ಚಿತ್ತಾರ : ವಿದ್ಯಾಗಿರಿಯ ತುಂಬೆಲ್ಲ ಆಕಾಶದೀಪಗಳ ಚಿತ್ತಾರ. ಕಲಾರಸಿಕರ ಸಂತಸಕ್ಕೆ ಪಾರವೇ ಎಲ್ಲ, ಖುಷಿ ಖುಷಿಯೇ ಸುತ್ತೆಲ್ಲ!

ನುಡಿಸಿರಿಯ ಆರಂಭ ಈ ಬಾರಿ ಅತ್ಯಂತ ವಿಶಿಷ್ಟ ಬಗೆಯಲ್ಲಿ ಜರಗಿತು. ತುಳುನಾಡಿನ ನಂಬಿಕೆಯ ಭಾಗವೇ ಆಗಿರುವ ದೈವದ ಪ್ರವೇಶದೊಂದಿಗೆ ನುಡಿಸಿರಿ ಆರಂಭವಾಯಿತು. ಮೋಹನ ಆಳ್ವರ ಪರವಾಗಿ ಕದ್ರಿ ನವನೀತ ಶೆಟ್ಟಿಯವರು ಭೂತದ ಬಳಿ ನುಡಿಸಿರಿಯನ್ನು ಆರಂಭಿಸಲು ಅಪ್ಪಣೆ ಕೇಳಿದರು. ನುಡಿಸಿರಿಗೆ ಅಭಯ ನೀಡಿದ ದೈವ, ಮೂರುದಿನಗಳ ಈ ಸಾಹಿತ್ಯ ಜಾತ್ರೆ , ಸಾಂಗವಾಗಿ ನೆರವೇರಲಿ ಎಂದು ಹಾರೈಸಿತು.

ದೂರದೂರುಗಳಿಂದ ಬಂದ ಸಾಹಿತ್ಯಾಸಕ್ತರಿಗೆ ಇದೊಂದು ವಿಭಿನ್ನ ದೃಶ್ಯವಾಗಿದ್ದು, ಬೆರಗುಗಣ್ಣುಗಳಿಂದ ದೈವದ ಅಬ್ಬರವನ್ನು ವೀಕ್ಷಿಸುತ್ತಿದ್ದು ಕಂಡು ಬಂತು.

ಭಾಷೆಯ ಕಲಬೆರಕೆ ತೀವ್ರವಾದ ಸವಾಲು : ಭಾಷೆ ಇಂದು ಅತ್ಯಂತ ತೀವ್ರವಾಗಿ ಕಲಬೆರಕೆಗೊಳ್ಳುತ್ತಿದೆ. ಬೇರೆ ವಸ್ತು ವಿಷಯಗಳಲ್ಲಿ ಕಲಬೆರಕೆಯಾದರೆ ಕಾನೂನು ಕ್ರಮ ಕೈಗೊಳ್ಳಬಹುದು, ಆದರೆ ಭಾಷೆಯ ಕಲಬೆರಕೆಗೆ ಏನು ಮಾಡುತ್ತೀರಿ ಎಂದು ವಿಷಾದ ಭರಿತ ವ್ಯಂಗ್ಯದಲ್ಲಿ ತಮ್ಮ ಮಾತುಗಳನ್ನಾಡಿದರು ಪ್ರೊ.ಕೆ.ಇ. ಇ.ರಾಧಾಕೃಷ್ಣ .

ಅವರು, ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ನುಡಿಸಿರಿಯ ಎರಡನೇ ದಿನ(ಡಿ.1)ದ ಮೊದ ವಿಚಾರ ಗೋಷ್ಠಿ - ಸಾಹಿತಿಯ ಶೈಕ್ಷಣಿಕ ಜವಾಬ್ದಾರಿಗಳು ಅನ್ನುವುದರ ಕುರಿತಾಗಿ ಮಾತುಗಳನ್ನಾಡುತ್ತಿದ್ದರು. ಅಧ್ಯಾಪಕನೊಬ್ಬನಿಗೆ ಭಾಷೆಯ ಕಲಬೆರಕೆ ತೀವ್ರವಾದ ಸವಾಲುಗಳನ್ನು ಒಡ್ಡುತ್ತದೆ ಎಂದು ಅಭಿಪ್ರಾಯಪಟ್ಟರು.

ವಿಜ್ಞಾನ ಸಾಹಿತಿ ಹಾಲ್ದೊಡ್ಡೇರಿ ಸುಧೀಂದ್ರ ಮಾತನಾಡಿ, ವಿಜ್ಞಾನದ ಕಲಿಕೆ ಮತ್ತು ಅದರ ಸವಾಲುಗಳ ಬಗೆಗೆ ಮಾತನಾಡಿದರು. ವಿಜ್ಞಾನ ಎಂಬುದೊಂದು ಅಸೀಮ ಕ್ಷೇತ್ರ, ಅಂತರ್ಜಾಲ ಹೇಗೆ ನಮ್ಮ ಜ್ಞಾನ ವೃದ್ಧಿಗೆ ಸಹಕಾರಿಯಾಗುತ್ತದೆ ಅನ್ನುವುದರ ಬಗೆಗೆ ಮಾತನಾಡಿದ ಸುಧೀಂದ್ರ, ಅಂತರ್ಜಾಲದಲ್ಲಿ ಹೇಗೆ ಬೇಕಾದ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವುದರ ಬಗ್ಗೆ ನಮಗರಿವಿರಬೇಕು ಎಂದರು.

ಡಾ.ಲಿಂಗದೇವರು ಹಳೆಮನೆ ಕಲಿಕಾ ಮಾಧ್ಯಮ ಹೇಗೆ ಸಾಹಿತ್ಯದ ಆಸಕ್ತಿ ಹೆಚ್ಚಿಸುತ್ತದೆ ಅನ್ನುವುದರ ಕುರಿತು ಮಾತನಾಡಿದರು.

ನುಡಿಸಿರಿ ಇನ್ನಷ್ತು:

ಗ್ಯಾಲರಿ:ನುಡಿಸಿರಿ ಉತ್ಸವ;ಸಾಂಸ್ಕೃತಿಕ ಕಲಾ ವೈಭವ

ಕನ್ನಡ ಮನಸ್ಸು ಗಾಳಿ ಗೋಪುರವಲ್ಲ: ಜಿ.ವೆಂಕಟಸುಬ್ಬಯ್ಯ

ಆಳ್ವಾಸ್ ನುಡಿಸಿರಿ : ಅಕ್ಷರ ಚಾತ್ರೆಗೆ ಬಲ್ಲಾಳರಿಂದ ಚಾಲನೆ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more