• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಾಟು ಹೊಡೆಯುವವರ ಸಂಗ, ಅಭಿಮಾನ ಭಂಗ

By Staff
|

ಚಾಟಿಂಗು ಒಂದು ಒಳ್ಳೆಯ ಇಂಟರ್‌ನೆಟ್‌ ಟೂಲು. ಉಪಯೋಗಿಸಲು ಗೊತ್ತಿಲ್ಲದವನು ಫೂಲು! ಹೀಗೆ ಒಂದ್ಸಲ ಅವಳ ವೇಷದ ಅವನು, ನನ್ನನ್ನು ಕಾಡಿಸಲು ಯತ್ನಿಸಿದ. ಯಾವುದಕ್ಕೂ ನೀವು ಹುಷಾರಾಗಿರಿ.

Be careful while chatting online with anonymous peopleಸಂಪರ್ಕ ಕ್ರಾಂತಿ ಹೆಚ್ಚಾಗುತ್ತಿರುವಂತೆಯೇ, ಅಂತರ್ಜಾಲದಲ್ಲಿ ಜಾಲಾಡುವವರ ಸಂಖ್ಯೆ ಹೆಚ್ಚಾಗತೊಡಗಿದೆ. ಚಾಟಿಂಗ್‌ ಎಂಬ ತಂತ್ರಜ್ಞಾನ ಜನರನ್ನು ಹತ್ತಿರವಾಗಿಸುತ್ತಿದೆ. ಮುಖತಃ ಸಂಪರ್ಕವಿಟ್ಟುಕೊಳ್ಳುವುದು ಕಡಿಮೆಯಾಗುತ್ತಿದೆ. ಹೀಗಾಗಿ ಆಚೆ ಬದಿಯಲ್ಲಿ ಸಂಪರ್ಕಿಸುತ್ತಿರುವುದು ಯಾರು ಎಂಬುದು ಮತ್ತು ಅವರ ನೈಜ ಸ್ವರೂಪವನ್ನು ತಿಳಿದುಕೊಳ್ಳುವುದು ಸ್ವಲ್ಪ ಕಷ್ಟ (ಅಸಾಧ್ಯವೇನೂ ಅಲ್ಲ).

ಜಾಲ ಸಂಪರ್ಕದಲ್ಲಿ ಮೊದ ಮೊದಲು ಕಟ್ಟುನಿಟ್ಟಾಗಿ ಮಡಿವಂತಿಕೆ ತೋರುವವರು, ಹಾಗೆಯೇ ಸಲುಗೆ ತೋರಿಸುವರು ಮತ್ತು ಮುಂದೆ ಇಲ್ಲ ಸಲ್ಲದ ಹರಟೆ, ಬೇರೆಯವರ ವೈಯಕ್ತಿಕ ವಿಷಯಗಳು, ಹುಚ್ಚು ಹುಚ್ಚಾದ ಮಾತುಕತೆಗಳ ಕಡೆಗೆ ತಿರುಗಿಸುವರು. ಒಬ್ಬರಿಗೊಬ್ಬರು ಬೈದಾಡಿ, ಜಗಳವಾಡಿ, ಮೂತಿ ತಿರುಗಿಸಿಕೊಂಡು ಹೋಗುವ ಮಟ್ಟಕ್ಕೆ ಹೋಗುವುದು. ಇನ್ನೂ ಏನೇನೋ ಆಗುವುದು.

ಇಂತಹ ಕೆಲವು ಅನುಭವಗಳು ನನಗೂ ಆಗಿವೆ. ಅದಕ್ಕಾಗಿಯೇ ನಾನು ಚಾಟಿಂಗ್‌ ಮಾಡುವಾಗ ಬುರ್ಖಾ ಹಾಕಿರುತ್ತೇನೆ. ನನಗೆ ಜಗತ್ತು ಕಾಣಬೇಕು, ನನ್ನ ಮುಖ ಮಾತ್ರ ಯಾರಿಗೂ ಕಾಣಬಾರದೆಂದರೆ ಏನು ಮಾಡಬೇಕು, ಬೂಬಮ್ಮನವರ ತರಹ ಬುರ್ಖಾ ಹಾಕಿಕೊಳ್ಳಬೇಕು. ಚಾಟಿಂಗ್‌ ಅಥವಾ ಜಾಲ ಸಂಪರ್ಕದಲ್ಲಿ ಇಂತಹ ಸನ್ನಿವೇಶವನ್ನು ಇನ್‌ವಿಸಿಬಲ್‌ ಮೋಡ್‌ ಎಂದು ಕರೆಯುವರು.

ಹೀಗಿರುವಾಗಲೂ ಕೆಲವು ಛದ್ಮವೇಷಧಾರಿಗಳು ಕೆಣಕಲು ಬರುವರು. ಇಂತಹ ಒಂದು ಸನ್ನಿವೇಶವನ್ನು ಎದುರಿಸಿದ ನಾನು ಮತ್ತೆ ಚೇತರಿಸಿಕೊಂಡು ಬರಹಕ್ಕೆ ತೊಡಗಲು ಹತ್ತು ಹನ್ನೆರಡು ದಿನಗಳೇ ಬೇಕಾದುವು. ಎಲ್ಲರ ಮನವೂ ಬಹು ಸೂಕ್ಷ್ಮ. ದೇಹದಾರ್ಢ್ಯತೆ ಇದ್ದವರಿಗೂ ಕೂಡಾ ಮನಸ್ಸು ಸೂಕ್ಷ್ಮವಾಗಿರುವುದು. ಯಾವುದೋ ಒಂದು ಸಣ್ಣ ಅನುಭವದಿಂದ ಅವರು ಸಂಪೂರ್ಣವಾಗಿ ಜೀವನ ಶೈಲಿಯನ್ನೇ ಬದಲಿಸಬೇಕಾಗಬಹುದು. ದೈಹಿಕ ಬದಲಾವಣೆಯನ್ನೂ ಎದುರಿಸಬೇಕಾಗಬಹುದು. ಇದನ್ನು ದಿನ ನಿತ್ಯದ ಜೀವನದಲ್ಲಿ ನಾವೆಲ್ಲರೂ ಕಾಣುತ್ತಿರುವೆವು. ಹೀಗಿರುವಾಗ, ನಮ್ಮೊಂದಿಗೆ ಸಂವೇದಿಸುವ ಇತರರ ಮನವೂ ಸೂಕ್ಷ್ಮ ಎಂದು ತಿಳಿಯುವುದು ಅತ್ಯವಶ್ಯ.

ಹೊಸ ಪರಿಚಯ... ಹೊಸ ಗೆಳೆಯರು...

ಈ ಅಂತರ್ಜಾಲದಲ್ಲಿ ಕಾಲಿಟ್ಟ ಮೊದಲಿಗೆ ಬಿಳಿಯಾದುದೆಲ್ಲ ಹಾಲೆಂದು ತಿಳಿದಿದ್ದೆ. ಮುಕ್ತವಾಗಿ ಕೆಲವು ಮಿತ್ರರುಗಳೊಂದಿಗೆ ಚಾಟಿಸುತ್ತಿದ್ದೆ. ನನ್ನ ಮತ್ತು ಮಿತ್ರರ ನಡುವೆ ವಯೋ ಅಂತರ ಬಹಳವಾದರೂ, ಎಲ್ಲರ ಮನಸ್ಸಿನೊಳಗಿರುವ ಒಂದು ಕೋತಿಯಂತೆ ನನ್ನ ಮನಸ್ಸಿನಲ್ಲೂ ಇರುವ ಕೋತಿ ಬುದ್ಧಿ ಅವರಿಗೆ ಸರಿಯಾದಿ ಸಾಥಿ ನೀಡುತ್ತಿತ್ತು. ನನ್ನನ್ನು ಕಂಡರಿಯದ ಅವರುಗಳು, ನಾನೊಬ್ಬ ಬೇಕಾಬಿಟ್ಟಿ ಮನುಷ್ಯನೆಂದು ತಿಳಿದಿದ್ದರು ಎನಿಸುತ್ತದೆ. ಆದರೆ ಒಂದು ಸಣ್ಣ ಮಾತಿಗೂ ಅಧೋಮುಖನಾಗುವ ನನ್ನ ಬಗ್ಗೆ ಅವರಿಗರಿವಿರಲಿಲ್ಲ,

ಹೀಗೆಯೇ ಮಾತಿಗೆ ಮಾತು ಬೆಳೆಯುತ್ತಿದ್ದಾಗ, ಅವರ ವಯಸ್ಸಿಗನುಗುಣವಾಗಿ ನನ್ನ ಬಗ್ಗೆ ತುಚ್ಛವಾಗಿ ಒಂದು ಮಾತನಾಡಿದಾಗ ಮನ ಮುದುಡಿದ ನಾನು ಮತ್ತೆ ಅವರುಗಳೊಂದಿಗೆ ಸಂಪರ್ಕವನ್ನೇ ಬೆಳೆಸಲಿಲ್ಲ. ಆಗ ಈ ಬುರ್ಖಾ ಉಪಯೋಗಿಸುವುದರ ಬಗ್ಗೆ ತಿಳಿದೆ. ಅವರಿಂದ ದೂರವಾದೆ. ಅಂದಿನಿಂದ ಹತ್ತಿರವಾದವರೊಂದಿಗೆ ಮಾತ್ರ ಚಾಟಿಸುತ್ತಿರುವೆ. ಯಾರಿಂದಲೂ ತೊಂದರೆ ಆಗಿಲ್ಲ.

ಮೊನ್ನೆ ಏನಾಯ್ತು ಅಂದ್ರೆ...

ಮೊನ್ನೆ ನಾನು ಇಂಟರ್ನೆಟ್‌ ಸಂಪರ್ಕ ಚಾಲನೆ ಮಾಡುತ್ತಿದ್ದಂತೆಯೇ, ಬುರ್ಖಾ ಹಾಕಿದ್ದರೂ ಒಬ್ಬ ಹೆಣ್ಣುಮಗಳು ನನ್ನೊಂದಿಗೆ ಚಾಟಿಸಲು ಹವಣಿಸಿದಳು. ನಾನು ಯಾರಿಗೂ ಕಾಣದಂತಿದ್ದರೂ ಅವಳಿಗೆ ಹೇಗೆ ತಿಳಿಯಿತು ಎಂಬ ಉತ್ಸುಕತೆಯಿಂದ, ಮತ್ತು ಹತ್ತಿರವಾದವರಿಗೆ ಮಾತ್ರ ನನ್ನ ಬುರ್ಖಾ ಗುಟ್ಟು ಗೊತ್ತಿದ್ದರಿಂದ, ಈಕೆಯೂ ನನ್ನ ಬಗ್ಗೆ ತಿಳಿದವಳು ಇರಬೇಕೆಂದು ಅಂದುಕೊಂಡೆ. ಚಾಟಿಸಲು ಅನುಮತಿ ನೀಡಿದೆ.

ಮೊದಲಿಗೇ ಅವಳಿಗೆ ನನ್ನ ಬಗ್ಗೆ ತಿಳಿಸಿದೆ. ನನ್ನ ಚಿಂತನೆಯೆಲ್ಲವೂ ಅಧ್ಯಾತ್ಮದೆಡೆಗೆ ಮತ್ತು ಜೀವನದ ಕಟ್ಟ ಕಡೆಯ ಹಂತದೆಡೆಗೆ ನನ್ನ ಓಟ ಎಂದೂ ತಿಳಿಸಿದೆ. ನನ್ನ ಹೆಸರು ಹೇಗೆ ತಿಳಿಯಿತು ಎಂದದ್ದಕ್ಕೆ, ಯಾಹೂ ಎಂದರೆ ಎಲ್ಲವೂ ಸಿಗುವುದು ಎಂದಿದ್ದಳು. ಇದರ ಬಗ್ಗೆ ನನಗೆ ಏನೇನೂ ತಿಳಿದಿರಲಿಲ್ಲ.

ಸ್ನೇಹ ಬೆಳೆಸಲು ವಯಸ್ಸಿನ ಅಂತರವೇನು ಎಂದು ಆಕೆ ಕೇಳಿದ್ದಕ್ಕೆ, ಸ್ನೇಹ ಏಕೆ ಬೇಕೆಂದು ನಾನು ಕೇಳಿದ್ದೆ. ಅದಕ್ಕವಳು ಉತ್ತರವಾಗಿ, ತಾನು ಶಾಪಿಂಗ್‌ ಮತ್ತು ಸಿನೆಮಾ ನೋಡಲು ಅನುಕೂಲಕರವಾಗಬೇಕೆಂದು ಸ್ನೇಹ ಬೇಕು ಎಂದು ತಿಳಿಸಿದ್ದಳು. ಇದಕ್ಕಾಗಿ ನನ್ನ ಕಿರಿಯ ಸ್ನೇಹಿತರು ಯಾರಾದರು ಇದ್ದರೂ ತಿಳಿಸಿ ಎಂದು ಹೇಳಿದ್ದಳು. ಹಾಗೆ ಸ್ನೇಹಿತರಾಗಿ ಬಂದವರು ಏನಾದರೂ ತೊಂದರೆ ಎಸಗುವ ಸಾಧ್ಯತೆ ಇಲ್ಲವಾ ಎಂದು ಕೇಳಿದ್ದಕ್ಕೆ, ಹೆಚ್ಚಿನದಾಗಿ ಇನ್ನೇನು ಮಾಡಬಲ್ಲರು, ಮುಟ್ಟಬಹುದಷ್ಟೆ, ಅದು ನನಗೆ ಪರವಾಗಿಲ್ಲ ಎಂದಿದ್ದಳು.

ಇಷ್ಟರ ವೇಳೆಗೆ ನನಗೇನೋ ಸಂಶಯ ಬಂದು, ನೀನು ನಕಲೀ ಶ್ಯಾಮ ಇದ್ದ ಹಾಗಿದೆಯಲ್ಲ ಎಂದಿದ್ದೆ. ನಿಮಗೆ ಹೇಗೆ ತಿಳಿಯಿತು, ನೀವು ಹೇಳುವುದು ಸುಳ್ಳು ಎಂದುತ್ತರ ಬಂದಿತು. ತಕ್ಷಣ ನಾನು ದೂರ ಸರಿದೆ.

ಈ ವಿಷಯವನ್ನು ಯಾರೊಂದಿಗೆ ಹಂಚಿಕೊಳ್ಳುವುದೆಂದು ತಿಳಿಯಲಿಲ್ಲ. ಆಗ ನನಗೆ ನೆನಪಾದವನು, ನನ್ನ ಶಿಷ್ಯ ರಾಮಣ್ಣ (ಅವನನ್ನು ಹೆಸರಿಸುವುದು ಸರಿಯಲ್ಲ - ಇದೊಂದು ನಕಲಿ ಹೆಸರನ್ನು ನಮೂದಿಸಿರುವೆ). ಈ ರಾಮಣ್ಣ ಇದೇ ತರಹ ನನಗೆ ಪರಿಚಯವಾಗಿದ್ದ. ಏನೋ ತರಲೆ ಕೆಲಸ ಮಾಡಿದಾಗ, ನನ್ನ ಕೈಗೆ ಸಿಕ್ಕಿ ಛೀಮಾರಿ ಹಾಕಿಸಿಕೊಂಡಿದ್ದ. ಅದೊಂದು ದೊಡ್ಡ ಕಥೆ ಬಿಡಿ. ಮುಂದೊಮ್ಮೆ ಅದಕ್ಕಾಗಿಯೇ ಒಂದು ಪ್ರತ್ಯೇಕ ಪ್ರಬಂಧ ಬರೆಯುವೆ. ಅವನು ಪ್ರೇಮ ವಿವಾಹದ ಕಷ್ಟದಲ್ಲಿ ಸಿಲುಕಿದ್ದಾಗ ಸ್ವಲ್ಪ ಸಹಾಯಿಸಿದ್ದೆ. ಅಂದಿನಿಂದ ಅವನು ನನಗೆ ಪಟ್ಟ ಶಿಷ್ಯನಾಗಿದ್ದ.

ಇಂತಹ ವಿಷಯಗಳನ್ನು ಕೆದಕಿ ನನಗೆ ಸಹಾಯಿಸಲು ಇವನೇ ಸರಿಯೆಂದು, ನಾನು ಚಾಟಿಸಿದ್ದ ಪುಟವನ್ನು ಅವನಿಗೆ ಕಳುಹಿಸಿದ್ದೆ. ಸ್ವಲ್ಪವೇ ಸಮಯದಲ್ಲಿ, ನನಗೆ ಅವನು ಉತ್ತರಿಸಿ, ‘ನೀವು ಚಾಟಿಸಿದುದು, ಹುಡುಗಿಯಾಂದಿಗಲ್ಲ, ಅವನೊಬ್ಬ ತುಡುಗ ಹುಡುಗ’ ಎಂದು ತಿಳಿಸಿದ್ದ. ಆತನ (ಉರುಫ್‌ ಆಕೆ) ಬಗ್ಗೆ ನನಗೆ ಒಳ್ಳೆಯ ಅಭಿಪ್ರಾಯವಿದ್ದುದರಿಂದ, ರಾಮಣ್ಣನ ಅಂಚೆಯ ಪ್ರತಿಯನ್ನು ಅವರಿಗೆ ಕಳುಹಿಸಿ ಏನನ್ನೂ ಹೇಳಲಿಲ್ಲ. ಆದರೆ ಅವರೊಂದಿಗೆ ಸಂಬಂಧವನ್ನು ಕಡಿದುಕೊಳ್ಳಲು ಆಸಕ್ತಿ ಆಗಲಿಲ್ಲ. ಏಕೆ ಗೊತ್ತೇ? ಎಲ್ಲರ ಮನದಲ್ಲೂ ಒಂದು ಕೋತಿ ಬುದ್ಧಿ ಇರುವಂತೆ ಅವರಲ್ಲೂ ಹೀಗಿರುವುದು ಸಹಜ. ಇನ್ನು ಮುಂದೆ ಅವರು ನನ್ನೊಂದಿಗೆ ಹೀಗೆ ನಡೆದುಕೊಳ್ಳಲಾರರು ಎಂದು ನನಗೆ ಖಚಿತವಾಗಿದೆ. ಹಾಗಾಗಿ ಸುಮ್ಮನಾದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more