ಪೇಪರ್‌ ಪಾರಾಯಣ ಅಲ್ಲ ಪುರಾಣ!


Raghavendra Sharma, Kadavimaneಭಟ್ಟರು ನಿರುಂಬಳವಾಗಿ ದೇವಸ್ಥಾನದ ಕಟ್ಟೆಯ ಮೇಲೆ ಪೇಪರಿನಲ್ಲಿ ಮಗ್ನರಾಗಿದ್ದು ಕಂಡು ಅವರಿಗೆ ಏನು ಮಾಡಬೇಕೆಂದು ತೋಚಲಿಲ್ಲ. ಭಟ್ಟರಿಗೆ ವಾಸ್ತವದ ಅರಿವಾಗಿದ್ದು ಆವಾಗಲೆ. ಅಷ್ಟರಮೇಲೆ ಸ್ನಾನಮಾಡಿ ಶ್ರಾಧ್ದ ಮಾಡಿಸಿ ಊಟ ಮಾಡುವಷ್ಟರಲ್ಲಿ ಸಂಜೆ 6 ಗಂಟೆಯಾಗಿತ್ತು. ಹೀಗೆ ದಿನಪತ್ರಿಕೆ ಕೈಗೆ ಸಿಕ್ಕಾಗ ಪ್ರಪಂಚ ಮರೆಯುವವರೂ ಇದ್ದಾರೆ ಎಂದರೆ ಆಶ್ಚರ್ಯವಾಗುತ್ತದೆಯಲ್ಲವೇ?.

ದಿನಪತ್ರಿಕೆಗಳನ್ನು ಕೇವಲ ಸುದ್ದಿಗಾಗಿಯೇ ಖರೀದಿಸುತ್ತಾರೆ ಎನ್ನುವುದು ಶುದ್ಧ ಸುಳ್ಳು. ನಾನಾ ಉದ್ದೇಶಗಳಿಗೆ ಪತ್ರಿಕೆ ಮೊರೆಹೋಗುವವರಿದ್ದಾರೆ. ಅದರಲ್ಲಿ ಬರುವ ಕಾರ್ಟೂನ್‌ನಲ್ಲಿ ಸಂಖ್ಯೆಯನ್ನು ಹುಡುಕಿ ತೆಗೆದು ಭಾಗಿಸಿ ಗುಣಿಸಿ ನಂತರ ಒಂದು ಒಮ್ಮತದ ತೀರ್ಮಾನಕ್ಕೆ ಬಂದು ಮಟ್ಕಾ ಅಂಗಡಿಗೆ ಓಡುವವರಿಂದ ಹಿಡಿದು ನಿತ್ಯ ಭವಿಷ್ಯದಲ್ಲಿ ಇರುವ ಧನಲಾಭವನ್ನು ನಂಬಿ ಲಾಟರಿ ಕೊಳ್ಳುವವರ ತನಕ ವಿವಿದೊದ್ಧೇಶಗಳಿಗೆ ಪತ್ರಿಕೆ ಬಳಕೆಯಾಗುತ್ತದೆ. ಲಾಟರಿ ಫಲಿತಾಂಶಕ್ಕಾಗಿಯೇ ಕೆಲಪತ್ರಿಕೆಗಳನ್ನು ತರಿಸುವ ಭೂಪರಿಗೇನು ಕೊರತೆ ಇಲ್ಲ.

ನನ್ನ ಸ್ನೇಹಿತರ ಪರಿಚಯಸ್ತರೊಬ್ಬರು ಇದೆಕ್ಕೆಲ್ಲಾ ಹೊರತಾದ ಒಂದು ಉದ್ದೇಶಕ್ಕೆ ಪತ್ರಿಕೆ ತರಿಸುತ್ತಿದ್ದರಂತೆ.ಅದನ್ನು ಕೇಳಿದರೆ ಅಚ್ಚರಿಯಾಗುತ್ತದೆ.ಬೆಳಿಗ್ಗೆ ದಿನಪತ್ರಿಕೆ ಕೈಗೆ ಸಿಕ್ಕಾಕ್ಷಣ ಅದರಲ್ಲಿ ಕಪ್ಪು ಇಂಕು ದಟ್ಟವಾಗಿದ್ದ ಭಾಗವನ್ನು ಚೌಕಾಕಾರಕ್ಕೆ ಕತ್ತರಿಸಿ ಅದರಲ್ಲಿ ತಂಬಾಕಿನಪುಡಿ ತುಂಬಿ ಸೇದುವುದು ಅವರ ರೂಢಿ. ಅವರ ಆ ಅಭ್ಯಾಸ(!)ಕ್ಕೆ ಆಗಷ್ಟೇ ಮುದ್ರಣಗೊಂಡ ಹೊಸ ಪತ್ರಿಕೆಯೇ ಆಗಬೇಕಾಗಿದ್ದರಿಂದ ಅದಷ್ಟಕ್ಕಾಗಿಯೇ ಅವರು ಪತ್ರಿಕೆ ತರಿಸುತ್ತಿದ್ದರಂತೆ, ಇದು ನಂಬಲು ಅಸಾಧ್ಯವಾದರೂ ಸತ್ಯವಂತೆ. ಒಮ್ಮೆಲೆ ಗಟಗಟನೆ ಬಾಟಲಿಗಟ್ಟಲೆ ಕೆಮ್ಮಿನ ಔಷಧಿಯನ್ನು ಕುಡಿದು ತೇಲಾಡುವ ಜನರಿರುವ ನಮ್ಮ ದೇಶದಲ್ಲಿ ಇದೇನು ಅಂತಾ ಹೊಸತಲ್ಲ ಬಿಡಿ.

ದಿನಪತ್ರಿಕೆಗಳು ಪ್ರತಿಷ್ಠೆಯ ಸಂಕೇತವಾದ ಕಾಲವೊಂದಿತ್ತು. ಪತ್ರಿಕೆ ತರಿಸುತ್ತಾರೆಂದರೆ ಅವರು ಮುಂದುವರೆದವರು ಎಂಬ ಭಾವನೆ ಇತ್ತು. ಈಗ ನಮ್ಮ ಹಳ್ಳಿಗಳಲ್ಲಿ ಎಲ್ಲರ ಮನೆಗೂ ಪತ್ರಿಕೆಗಳು ಬರುತ್ತವೆ. ಹಿಂದೆ ಹಾಗಿರಲಿಲ್ಲ. ಅದರಲ್ಲಿನ ವಿಷಯಗಳ ಬಗ್ಗೆ ನಾಲ್ಕಾರು ಜನ ಸೇರಿದಲ್ಲಿ ಘನಗಂಭೀರವಾದ ಮುಖಭಾವದಮೂಲಕ ವಿಷದಪಡಿಸುವುದು ಪ್ರತಿಷ್ಠೆಯ ಸಂಕೇತವಾಗಿತ್ತು.ಅದು ಕೆಲವೊಮ್ಮೆ ಅಪಹಾಸ್ಯಕ್ಕೀಡಾಗುವ ಸಂಭವವೂ ಇರುತ್ತಿತ್ತು. ಒಮ್ಮೆ ಹಾಗೆಯೇ ಆಯಿತು.

ನಮ್ಮ ದೊಡ್ಡಮ್ಮ ಅನಕ್ಷರಸ್ತೆ. ದೊಡ್ಡಪ್ಪ ಅವರಿಗೆ ಅಕ್ಷರ ಕಲಿಸಲು ಹಲವಾರು ತರಹದ ಪ್ರಯತ್ನ ಮಾಡಿ ಕೈ ಸೋತಿದ್ದರು. ಅಂತೂ ಇಂತು ಕೆಲವಾರು ಅಕ್ಷರಗಳನ್ನು ಅವರು ಗುರುತಿಸುತ್ತಿದ್ದರು. ಅಕ್ಷರಗಳನ್ನು ಬಿಡಿ ಬಿಡಿಯಾಗಿ ಓದುತ್ತಿದ್ದ ಆವರು, ಕೂಡಿಸಿ ಹೇಳುವಾಗ ಅನರ್ಥಮಾಡಿಬಿಡುತ್ತಿದ್ದರು.ಕೆಂಪು ಎಂಬ ಶಬ್ಧವನ್ನು ಕೆ ಸೊನ್ನೆ ಪು ಎಂದು ಸರಿಯಾಗಿ ಓದಿ ನಂತರ ಕಾಗೆ ಎಂದುಬಿಡುತ್ತಿದ್ದರು. ನಮಗೆ ಬಾಳೆಹಣ್ಣು ಸುಲಿದಷ್ಟು ಸುಲಭವಾಗಿ ತೋರುವ ಶಬ್ಧಗಳು ಅವರಿಗೆ ಕಬ್ಬಿಣದ ಕಡಲೆ. ಆಕೆಗೂ ತನಗೆ ಓದಲು ಬರುತ್ತದೆ ಎಂದು ಜನರೆದುರಿಗೆ ತೋರಿಸಿಕೊಳ್ಳಬೇಕೆಂಬ ಚಪಲ. ನಾಲ್ಕಾರು ಜನ ಸೇರಿದಲ್ಲಿ ತಾನು ತಿಳಿದವಳು ಎಂದಾಗಬೇಕು ಎಂಬ ಆಸೆ. ಆಸೆ ತಪ್ಪಲ್ಲ ಆದರೆ ಅದು ಒಮ್ಮೊಮ್ಮೆ ಎಂಥಾ ಯಡವಟ್ಟಾಗುತ್ತದೆ ಎನ್ನುವುದಕ್ಕೆ ಅವರ ಈ ಪ್ರಸಂಗವೇ ಉದಾಹರಣೆ.

ಅವರ ಎರಡನೆ ಮಗನ ಹೆಣ್ಣು ನಿಶ್ಚಯದ ಸಮಾರಂಭ. ನಿಶ್ಚಿತಾರ್ಥದ ಮಾತುಕತೆ ಮುಗಿದಾದಮೇಲೆ ಜಗುಲಿಯಲ್ಲಿ ಎಲ್ಲರೂ ಹರಟೆ ಹೊಡೆಯುತ್ತಾ ಕುಳಿತಿದ್ದರು. ಅಲ್ಲಿ ಅವತ್ತಿನ ದಿನ ಪತ್ರಿಕೆ ಇತ್ತು, ನಮ್ಮ ದೊಡ್ಡಮ್ಮನಿಗೆ ಬರುವ ಸೊಸೆಯೆದುರು ತಾನು ಬುದ್ದಿವಂತೆ ಅಂತ ತೋರಿಸಿಕೊಳ್ಳಬೇಕು ಅಂತ ಅನ್ನಿಸಿರಬೇಕು.ಅದನ್ನು ಕೈಗೆ ತೆಗೆದುಕೊಂಡು ಸ್ಟೈಲಾಗಿ ಹಿಡಿದುಕೊಂಡು ’’ಪ್ರಜಾವಾಣಿ’’ ಎಂದು ದೊಡ್ಡದಾಗಿ ಓದಿದರು. ಅದನ್ನು ಕೇಳಿದ ಕೆಲವರು ಮುಸಿಮುಸಿ ನಗತೊಡಗಿದರು. ಕಾರಣ ಅವರ ಉಪಾಯ ಸ್ವಲ್ಪ ಎಡವಟ್ಟಾಗಿತ್ತು, ದೊಡ್ಡಮ್ಮನ ಮನೆಗೆ ಬರುತ್ತಿದ್ದ ದಿನಪತ್ರಿಕೆ ಪ್ರಜಾವಾಣಿ, ಅದನ್ನೆ ಆಧಾರವಾಗಿಟ್ಟುಕೊಂಡು ಅವರು ಹಾಗೆ ಓದಿದ್ದರು ಆದರೆ ಅಲ್ಲಿದ್ದ ದಿನಪತ್ರಿಕೆ ಉದಯವಾಣಿ!.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+