ಶಿವಮೊಗ್ಗ ಕನ್ನಡ ಸಾಹಿತ್ಯ ಸಮ್ಮೇಳನದ ನಿರ್ಣಯಗಳು


ಪ್ರತಿ ವರ್ಷ ನಡೆಯುವ ಸಾಹಿತ್ಯ ಸಮ್ಮೇಳನದ ಕೊನೆಯಲ್ಲಿ ನಿರ್ಣಯಗಳನ್ನು ಕೈಗೊಳ್ಳುವುದು ವಾಡಿಕೆ. ಆದರೆ ಸರ್ಕಾರಗಳು ನಿರ್ಣಯಗಳನ್ನು ಜಾರಿಗೆ ತಂದಿವೆಯೇ ಎಂಬುದು ಪ್ರಶ್ನೆಯಾಗಿಯೇ ಉಳಿಯುತ್ತದೆ.

ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ನಿರ್ಣಯಗಳಿಗೆ ಸರ್ಕಾರದ ತಾತ್ವಿಕ ಒಪ್ಪಿಗೆಯಿದೆ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಕೆಲವು ನಿರ್ಣಯಗಳಾದರೂ ಜಾರಿಗೆ ಬರಬಹುದು ಎಂಬ ವಿಶ್ವಾಸ ವ್ಯಕ್ತವಾಗಿದೆ.

73ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿರ್ಣಯಗಳು ಇಂತಿವೆ...

  • ಪ್ರಾಥಮಿಕ ಹಂತದಲ್ಲಿ ಶಿಕ್ಷಣ ಮಾಧ್ಯಮದ ಬಗೆಗೆ ನ್ಯಾಯಾಲಯದ ತೀರ್ಪಿಗೆ ಕಾಯಬೇಕು. ಇಂಗ್ಲಿಷ್‌ ಕಲಿಕೆ ಆದೇಶ ಹಿಂಪಡೆದು ಶಿಕ್ಷಣ ತಜ್ಞರು, ಭಾಷಾ ಹಾಗೂ ಮನೋವಿಜ್ಞಾನಿಗಳ ಸಮಿತಿ ರಚಿಸಿ, ವರದಿ ಜಾರಿಗೆ ತರಬೇಕು.

  • ರೈಲ್ವೆ ಇಲಾಖೆ ತ್ರಿಭಾಷಾ ಸೂತ್ರಕ್ಕೆ ಕೇಂದ್ರ ಸರ್ಕಾರ ಬದ್ಧವಾಗಿರದಿದ್ದರೆ ಹೋರಾಟ.

  • ದೃಶ್ಯ, ಶ್ರವ್ಯ ಹಾಗೂ ಅಕ್ಷರ ಮಾಧ್ಯಮಗಳಲ್ಲಿ ಸ್ವಚ್ಛ ಕನ್ನಡ ಹಾಗೂ ಕನ್ನಡ ಅಂಕಿಗಳನ್ನು ಬಳಸಬೇಕು.

  • ರಾಜ್ಯ ಸರ್ಕಾರ ಕನ್ನಡ ಸಾಹಿತಿಗಳ ಜನ್ಮ ಶತಮಾನೋತ್ಸವ ಆಚರಿಸಬೇಕು.

  • ಕಾಸರಗೋಡು ಸಹಿತ ಪ್ರತ್ಯೇಕ ಮಂಗಳೂರು ರೈಲ್ವೆ ವಿಭಾಗ ರಚಿಸಿ, ಅದನ್ನು ನೈಋತ್ಯ ರೈಲ್ವೆ ವಲಯಕ್ಕೆ ಸೇರಿಸಬೇಕು.

  • ಮಹಾಜನ್‌ ವರದಿ ಅನುಷ್ಠಾನಗೊಳಿಸಬೇಕು.

  • ತುಳು ಮತ್ತು ಕೊಡವ ಭಾಷೆಗಳನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಬೇಕು.

  • ಕಲ್ಬುರ್ಗಿ-ಬೀದರ್‌, ಕೊಟ್ಟೂರು-ಹರಿಹರ, ಹಾಸನ-ಮಂಗಳೂರು ರೈಲ್ವೆ ಮಾರ್ಗಗಳ ಕಾಮಗಾರಿ ಚುರುಕುಗೊಳಿಸಬೇಕು.

  • ಮುಂಬಯಿಯಲ್ಲಿ ಕರ್ನಾಟಕ ಭವನ ನಿರ್ಮಾಣ.

  • ಜಿಲ್ಲಾ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ಗಳಿಗೆ ಉಚಿತ ನಿವೇಶನ, ಸಾಹಿತ್ಯ ಭವನಕ್ಕೆ ಆರ್ಥಿಕ ನೆರವು.

  • ಪ್ರಾಥಮಿಕ ಶಿಕ್ಷಣದಲ್ಲಿ ಹಣಕಾಸು ಕುರಿತ ಸರಳ ಪಠ್ಯ ಅಳವಡಿಸಬೇಕು.

  • ರಾಜ್ಯದಲ್ಲಿರುವ ಕಾರ್ಖಾನೆಗಳಿಗೆ ನೇಮಕಾತಿ ಸಂದರ್ಭದ ಸಂದರ್ಶನದಲ್ಲಿ ನೂರು ಅಂಕಗಳಿರುವ ಕನ್ನಡ ಪ್ರಶ್ನೆ ಪತ್ರಿಕೆ ಕಡ್ಡಾಯ ಮಾಡಬೇಕು.

(ದಟ್ಸ್‌ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+