ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವಮೊಗ್ಗ ಸಾಹಿತ್ಯ ಸಮ್ಮೇಳನದಲ್ಲಿ ಕಿವಿಗೆ ಬಿದ್ದದ್ದು!

By Staff
|
Google Oneindia Kannada News

Gowri Lankesh 73ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶನಿವಾರ ಸಂಜೆ ತೆರೆ. ಈ ನಾಲ್ಕು ದಿನಗಳ ಕಾಲ ಅಕ್ಷರಶಃ ಅಕ್ಷರ ಜಾತ್ರೆ. ಸಮ್ಮೇಳನಕ್ಕೆ ತೆರೆ ಬಿದ್ದ ಹೊತ್ತಿನಲ್ಲಿ ಕೆಲವರ ಮಾತುಗಳು, ಮುಖ್ಯವಾಗುತ್ತವೆ... ಕೆಲವರ ಮಾತುಗಳು ಅಮುಖ್ಯವಾಗುತ್ತವೆ. ಆಯ್ಕೆ ನಿಮ್ಮದು.
  • ನಕ್ಸಲ್‌ ಹೋರಾಟವನ್ನು ಜನವಿರೋಧಿ ಎಂದು ಬಿಂಬಿಸುವುದು ಸಲ್ಲದು. ಸಮ್ಮೇಳನದಲ್ಲಿ ಎಬಿವಿಪಿ ಗದ್ದಲ ಎಬ್ಬಿಸಲು ಯಡಿಯೂರಪ್ಪ ಕುಮ್ಮಕ್ಕು ನೀಡಿದ್ದಾರೆ. -ಗೌರಿ ಲಂಕೇಶ್‌
  • ಕ.ಸಾ.ಪ. ಅಧ್ಯಕ್ಷರದು ಉದ್ಧಟತನದ ಪರಮಾವಧಿ -ಎಂ.ಪಿ.ಪ್ರಕಾಶ್‌, ಉಪಮುಖ್ಯಮಂತ್ರಿ
  • ಕನ್ನಡ ಸಾಹಿತ್ಯ ಪರಿಷತ್ತು ಸರ್ಕಾರದ ಅಧೀನ ಸಂಸ್ಥೆಯಲ್ಲ, ಸ್ವಾಯತ್ತ ಸಂಸ್ಥೆ. ಯಾರೂ ತಮ್ಮ ಅಜೆಂಡಾ ಹೇರಬಾರದು -ಚಂದ್ರಶೇಖರ ಪಾಟೀಲ, ಕ.ಸಾ.ಪ.ಅಧ್ಯಕ್ಷರು.
  • ಸಂಸದರ ನಿರಭಿಮಾನದಿಂದ ಶಾಸ್ತ್ರೀಯ ಭಾಷೆ ಸ್ಥಾನ ಮಾನ ಈವರೆಗೆ ಸಿಕ್ಕಿಲ್ಲ -ಪ್ರೊ. ಕೆ.ಎಸ್‌. ನಿಸಾರ್‌ ಅಹಮದ್‌, ಸಮ್ಮೇಳನಾಧ್ಯಕ್ಷರು.
  • ವೃತ್ತಿ ರಂಗಭೂಮಿ ಅವನತಿಗೆ ವ್ಯಾವಹಾರಿಕ ಮನೋಭಾವ ಕಾರಣವೇ ಹೊರತು, ಸಿನಿಮಾಗಳಲ್ಲ. -ನಟರಾಜ ಏಣಗಿ, ರಂಗಕರ್ಮಿ.
  • ರಾಜಕಾರಣಿಗಳ ನಾಟ್ಕದ ಮುಂದೆ ನಮ್ದೇನ್ರೀ... -ಮಾಸ್ಟರ್‌ ಹಿರಣ್ಣಯ್ಯ
  • ವೃತ್ತಿ ಘನತೆಗೆ ಕುಂದು ಬರುತ್ತದೆ ಎಂದು ಎಷ್ಟೋ ಜನ ಕನ್ನಡಿಗ ವೈದ್ಯರು, ಕನ್ನಡವನ್ನು ಮಾತಾಡುವುದಿಲ್ಲ. -ಡಾ. ಸಂಜೀವ ಕುಲಕರ್ಣಿ
  • ರಾಷ್ಟ್ರಕವಿ ಪ್ರಶಸ್ತಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಮನಬಂದಂತೆ ವರ್ತಿಸಿದ್ದಾರೆ. ಅವರಿಗಿನ್ನು ಕಡಿವಾಣ ಹಾಕುತ್ತೇವೆ. ರಾಷ್ಟ್ರಕವಿ ಶಿವರುದ್ರಪ್ಪ ಅವರಿಗೆ 10ಲಕ್ಷ ರೂ ನೀಡುತ್ತೇವೆ. -ಬಿ.ಎಸ್‌.ಯಡಿಯೂರಪ್ಪ.
  • ಬೆಂಗಳೂರು ರಾಜಧಾನೀನಾ? ಅದು ಬೆರಕೆ ನಗರ -ನಿಸಾರ್‌ ಅಹಮದ್‌
  • ನನ್ನೂರಿನಲ್ಲಿ ಸಮ್ಮೇಳನದಲ್ಲಿ ಸಿಕ್ಕಂತಹ ಆತಿಥ್ಯ ಇನ್ನೆಲ್ಲೂ ಸಿಗದು. -ಮತ್ತೂರು ಕೃಷ್ಣಮೂರ್ತಿ
  • ಪತ್ರಿಕೆಗಳಲ್ಲಿ ಕೀಳು ಮಟ್ಟದ ಭಾಷೆ ಬಳಕೆ -ನಿಸಾರ್‌
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X